ಶಹನಾಹಿ ಮಾಂತ್ರಿಕ ಬಾಳಪ್ಪ ಭಜಂತ್ರಿ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಬೆಳಗಾವಿ ಜಿಲ್ಲಾ ಕಸಾಪ ಅಭಿನಂದನೆ

0
552

ಬೆಳಗಾವಿ : ಜಿಲ್ಲೆಯ ಬಾಳಪ್ಪ ಭಜಂತ್ರಿ ಅವರಿಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತ ಸರ್ಕಾರ ಘೋಷಿಸುವ ೨೦೨೨ನೇ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿಯು ಲಭಿಸಿದೆ.

ಬಾಳಪ್ಪ ಭಜಂತ್ರಿ ಅವರು ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದವರೆಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಹರ್ಷ ವ್ಯಕ್ತ ಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಸದ್ಯ ಬಾಳಪ್ಪ ಭಜಂತ್ರಿ ಇವರು ನಲವತ್ತು ವರ್ಷಗಳಿಂದ ತಮಿಳುನಾಡಿನ ಚೆನ್ನೈನಲ್ಲಿ ವಾಸವಾಗಿದ್ದು, ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದುಸ್ತಾನಿ ಶಹನಾಯಿ ವಾದನ ಗಾಯನದ ಮೂಲಕ ಖ್ಯಾತರಾಗಿದ್ದಾರೆ. ಕನ್ನಡ, ಹಿಂದಿ, ತಮಿಳು, ಮಲಯಾಳಿ, ತೆಲಗು ಸೇರಿ ಹಲವು ಭಾಷೆಗಳ ೫೦ ಸಾವಿರಕ್ಕೂ ಅಧಿಕ ಚಲನಚಿತ್ರ ಗೀತೆಗಳಿಗೆ ಶಹನಾಯಿ ನುಡಿಸಿದ್ದಾರೆ. ಹಲವು ಚಿತ್ರಗೀತೆಗಳಿಗೆ ಹಿನ್ನಲೆ ಗಾಯಕರೂ ಆಗಿದ್ದಾರೆ. ಇದು ನಮ್ಮ ಕನ್ನಡ ನಾಡಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಪ್ರಕಟಣೆಯಲ್ಲಿ ತಿಳಿಸಿದ್ದು ಬೆಳಗಾವಿ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.