ಬೀದರ – ಬಡ ಮಹಿಳೆಯರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ, ಕಾರ್ಮಿಕ ಮಹಿಳೆಯರಿಗೆ ಶಕ್ತಿ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೀದರನಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಈ ಯೋಜನೆಯಿಂದ ತರಕಾರಿ ಹಣ್ಣು-ಹಂಪಲು ಸೇರಿದಂತೆ ವಿವಿಧ ಕೆಲಸದ ನಿಮಿತ್ತ ತೆರಳುವ ಮಹಿಳೆಯರಿಗೆ ಅನುಕೂಲ ಆಗಲಿದೆ ಎಂದರು.
ಬೀದರ್ ಜಿಲ್ಲೆ ಎರಡು ರಾಜ್ಯಗಳ ಗಡಿ ಹೊಂದಿರುವುದಕ್ಕೆ ಮಹಿಳೆಯರಿಗೆ ಅನಾನುಕೂಲ ವಿಚಾರ ಪ್ರಸ್ತಾಪಿಸಿದಾಗ, ಗಡಿ ಭಾಗದಲ್ಲಿ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಗಮನಹರಿಸಲಾಗುವುದು ಎಂದು ಖಂಡ್ರೆ ಉತ್ತರಿಸಿದರು.
ಬೀದರ್ ಜಿಲ್ಲಾ ಉಸ್ತುವಾರಿ ವಿಚಾರ ಕುರಿತಂತೆ ಮಾತನಾಡಿದ ಅವರು, ನಮ್ಮ ನಡುವೆ ಯಾವುದೇ ಪೈಪೋಟಿ ಇರಲಿಲ್ಲ, ಅದು ಮಾದ್ಯಮದ ಸೃಷ್ಟಿ ಎಂದರು.
ಸಿದ್ಧರಾಮಯ್ಯ ಪೂರ್ಣಾವಧಿ ಸಿಎಂ ಕುರಿತಂತೆ, ಇದು ಅಪ್ರಸ್ತುತ ವಿಷಯ, 135 ಶಾಸಕರು ಗೆದ್ದಿದೇವೆ. ನಮ್ಮ ಸರ್ಕಾರ ಬಂಡೆಯಂತಿರುವ ಸರ್ಕಾರ. ನಮ್ಮ ಕಾಂಗ್ರೆಸ್ ಸರ್ಕಾರವನ್ನು ಯಾರೂ ಅಲ್ಲಾಡಿಸೋಕೆ ಸಾದ್ಯವಿಲ್ಲಾ. ಜನರ ಕಷ್ಟ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡ್ತೇವೆ. ಈಗ ಯಾವ ರೀತಿ ಅಧಿಕಾರ ಕೊಡ್ತಿದ್ದೇವೆ. ಅದೇ ರೀತಿ ಪಾರದರ್ಶಕ ಆಡಳಿತ ನೀಡುತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬದಲಾವಣೆ ತರುತ್ತೇವೆ ಎಂದು ಈಶ್ವರ ಖಂಡ್ರೆ ನುಡಿದರು.
ವರದಿ: ನಂದಕುಮಾರ ಕರಂಜೆ, ಬೀದರ