ಬೀದರ – ಗಡಿ ಜಿಲ್ಲೆ ಬೀದರ ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಘಟನೆ ಬೀದರ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತವರೂರು ಭಾಲ್ಕಿ ಯಲ್ಲಿ ನಡೆದಿದ್ದು ಡಾ..ಅಂಬೇಡ್ಕರ್ ಅವರಿಗೆ ಕೆಟ್ಟ ಪದವನ್ನು ಬಳಸಿ ತನ್ನ ಸ್ಟೇಟಸ್ ನಲ್ಲಿ ಹಾಕಿ ಕೊಂಡ ಯುವಕನ ವಿರುದ್ಧ ಇಂದು ಭಾಲ್ಕಿ ಯಲ್ಲಿ ದಲಿತ ಸಂಘಟನೆಯವರು ಪ್ರತಿಭಟನೆ ನಡೆಸಿದರು.
ಕೂಡಲೇ ಯುವಕನನ್ನು ಬಂಧಿಸಿ ಎಂದು ಅಂಬೇಡ್ಕರ್ ವೃತ್ತ ಹತ್ತಿರ ನೂರಾರು ದಲಿತ ಯುವಕರು ಹಾಗೂ ಹೆಣ್ಣು ಮಕ್ಕಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು..
ಈ ಘಟನೆ ನಾಲ್ಕು ಐದು ದಿನ ಕಳೆದರು ಇನ್ನೂ ಯುವಕನಿಗೆ ಇನ್ನೂ ಪೊಲೀಸ್ ಇಲಾಖೆ ಬಂಧಿಸಿಲ್ಲ ಎಂದು ಪೊಲೀಸ್ ಇಲಾಖೆ ವಿರುದ್ಧ ದಲಿತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯ ಹಿನ್ನೆಲೆ:
ದಿನಾಂಕ 18/11/2023ರಂದು ಭಾಲ್ಕಿ ಯಲ್ಲಿ ನಡೆದ ಇನ್ಸಟಾಗ್ರಾಂ ಸ್ಟೋರಿಯಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸ್ಟೆಟಸ್ ಇಟ್ಟು ಬೈದಿದ್ದ ಸಂಗಮೇಶ ಎಂಬ ಹುಡುಗ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೆಳನಕಾರಿ ಶಬ್ದ ಉಪಯೋಗಿಸಿ ಅವಮಾನ ಮಾಡಿರುವುದು ಮತ್ತು ಸಮಾಜದಲ್ಲಿ ಶಾಂತಿ ಭಂಗ ಉಂಟು ಮಾಡುವ ಉದ್ದೇಶದಿಂದ ಈ ರೀತಿ ಮಾಡಿರುವುದನ್ನು ಕಂಡುಬರುತ್ತದೆ.
ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದ ಸಂಗಮೇಶ ಎಂಬ ಹುಡುಗನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೇಂದು ಅಂಬೇಡ್ಕರ್ ಅವರ ಅಭಿಮಾನಿಗಳ ವಿನಂತಿ ಹಾಗೂ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಆಧಾರದ ಮೇರೆಗೆ ಕಾಯ್ದೆ ಮತ್ತು ಕಲಂ IPC 1860(ulc295 ಪ್ರಕಾರ ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ 231 2023 ಕಲಂ, 295 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳುತ್ತಿದ್ದಾರೆಂದು Dysp ಹಾಗೂ Sp ತಿಳಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ