Homeಸುದ್ದಿಗಳುಸಂಘದ ಬೆಳವಣಿಗಗೆ ಶೇರುದಾರರ ವಿಶ್ವಾಸ ಮುಖ್ಯವಾದುದು - ಲಕ್ಷ್ಮೀ ಮಾಳೇದ

ಸಂಘದ ಬೆಳವಣಿಗಗೆ ಶೇರುದಾರರ ವಿಶ್ವಾಸ ಮುಖ್ಯವಾದುದು – ಲಕ್ಷ್ಮೀ ಮಾಳೇದ

ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳು ಪ್ರಗತಿ ಪಥದತ್ತ ಸಾಗಲು  ಸಂಘದ ಶೇರುದಾರರು ಮತ್ತು ಠೇವುದಾರರ ವಿಶ್ವಾಸ ಮತ್ತು ಸಹಕಾರ ಬಹಳ ಮುಖ್ಯವಾದದು,  ಪ್ರಗತಿ ಮಹಿಳಾ ಸಹಕಾರಿ ಸಂಘ ಶೇರುದಾರ ಮತ್ತು ಠೇವುದಾರ ಸಹಕಾರದಿಂದ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು  ಸಂಘದ ಅಧ್ಯಕ್ಷೆ ಲಕ್ಷ್ಮೀ ಬಸವರಾಜ ಮಾಳೇದ ಹೇಳಿದರು.

ಅವರು ಶನಿವಾರದಂದು ಮೂಡಲಗಿ ತಾಲೂಕಿನ ಯಾದವಾಡದ ಪ್ರಗತಿ ಮಹಿಳಾ ಗ್ರಾಮಿಣಾಭಿವೃದ್ಧಿ ಸಹಕಾರಿ ಸಂಘದ ೭ನೇ ವಾರ್ಷಿಕೋತ್ಸವ ನಿಮಿತ್ತವಾಗಿ ಶ್ರೀ ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಸಂಘದ ಉಪಾಧ್ಯಕ್ಷೆ  ಸರೋಜಿನಿ ಯ.ನ್ಯಾಮಗೌಡರ ಅವರು ಸಂಘ ಸಾಲ ಸೌಲಭ್ಯಗಳ ಮಾಹಿತಿ ಮತ್ತು ಬೆಳವಣಿಗೆಯನ್ನು ವಿವರಿಸಿ ಸಹಕಾರಿ ಸಂಘದ ಶೇರುದಾರರಿಗೆ ಲಾಭಾಂಶ ವಿತರಿಸಲಾಗಿದೆ ಎಂದರು. ಸಂಘದಿಂದ ಹೈನುಗಾರಿಕೆ, ವ್ಯಾಪಾರಸ್ಥರಿಗೆ ವಿವಿಧ ತೆರನಾದ ಸಾಲ ಪಡೆದುಕೊಂಡ ಪ್ರತಿಯೊಬ್ಬರು ಅದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.

ಸಮಾರಂಭದಲ್ಲಿ ಸಂಘದ  ನಿರ್ದೇಶಕಿಯರಾದ ಭಾರತಿ ಮ.ಅಂಬಲಿಮಠ, ವಿದ್ಯಾಶ್ರೀ ಕೃ.ಕೇರಿ, ಮಹಾದೇವಿ ಅ.ರೊಡಗಿ, ಲಕ್ಷ್ಮೀ ಶಿ.ಪಾಟೀಲ, ಡಾ.ಸ್ವಾತಿ ಶಿ.ಹಿರೇಮಠ, ಶೋಭಾ ವಿ.ದಳವಾಯಿ, ಪಾರ್ವತಿ ಲ.ದಾಸರ, ಮಹಾಲಕ್ಷ್ಮೀ ಮೋ.ಬಡಿಗೇರ, ಕಸ್ತೂರಿ ಕರಿಯಪ್ಪ ದಡ್ಡೆನ್ನವರ, ಲಕ್ಷ್ಮೀ ವಿ.ಬಡಿಗೇರ,ಸಂಘದ ವ್ಯವಸ್ಥಾಕಿ ಅಶ್ವಿನಿ ಈ ತಿಪ್ಪಾ,   ಮಾಳಪ್ಪ ದಳವಾಯಿ ಮತ್ತಿತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group