ಕನ್ನಡ ನಾಡಿನ ಉದ್ದಲಕ್ಕೂ ತಮ್ಮ ಕವಿತೆಗಳು ಬರಹಗಳ ವಚನಗಳ ಲೇಖನಗಳ ಚಿರಪರಿಚಿತರಾದ ಶ್ರೀಮತಿ ರೇಷ್ಮಾ ಕಂದಕೂರ ಶಿಕ್ಷಕಿ ಸಿಂಧನೂರು ಇವರಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಅಖಿಲ ಕರ್ನಾಟಕ 4ನೆಯ ಕವಿ ಕಾವ್ಯ ಸಮ್ಮೇಳನದಲ್ಲಿ ಸನ್ಮಾನ ಗಂಗಾವತಿಯ ಚನ್ನಬಸವೇಶ್ವರ ಕಲಾ ಮಂದಿರದಲ್ಲಿ19 ನೆಯ ಜನವರಿ ರವಿವಾರದಂದು ಜರುಗಿತು
ಈ ಕಾರ್ಯಕ್ರಮದಲ್ಲಿ ಸಂತ ಶಿಶುನಾಳ ಶರೀಫ ರಾಷ್ಟ್ರೀಯ ಪ್ರಶಸ್ತಿ ನೀಡಿ ಶ್ರೀಮತಿ ರೇಷ್ಮಾ ಕಂದಕೂರ ಶಿಕ್ಷಕಿ ಇವರಿಗೆ ಕೊಡಮಾಡಿತು ಈ ಕಾರ್ಯಕ್ರಮ ನಾಡಿನ ಹಿರಿಯ ಚಿಂತಕರಾದ ರಂಜಾನ್ ದರ್ಗಾ ಉದ್ಘಾಟಿಸಿದರು. ಇನ್ನೋರ್ವ ಸಂಶೋಧಕರಾದ ಜಾಜಿ ದೇವೇಂದ್ರಪ್ಪ ಸರ್ವಾಧ್ಯಕ್ಷತೆ ವಹಿಸಿದ್ದರು
ಶ್ರೀಮತಿ ರೇಷ್ಮಾ ಕಂದಕೂರ ಇವರ ಬರಹಗಳನ್ನು ಸೌಹಾರ್ದತೆ ಸಾಮಾಜಿಕ ಚಿಂತನೆಯೊಂದಿಗೆ ನಾಡಿನ ಹಲವಾರು ಪತ್ರಿಕೆಗಳು ದಿನನಿತ್ಯ ಪ್ರಕಟಿಸುತ್ತಾ ಬರುತ್ತಿವೆ ಅದರಲ್ಲಿ ಈ ಲೇಖನಿ,ಪ್ರಜಪಾರ್ವ,ಕುಂದಾನಗರಿ
ಜನಮಿಡಿತ, ಸುವರ್ಣ ಪಥ, ಸ್ತ್ರೀ ಜಾಗೃತಿ ಮಾಸ ಪತ್ರಿಕೆ, ಧ್ವನಿ ಶೈಕ್ಷಣಿಕ ಸಂಸ್ಥೆ ಯ ಸಾಹಿತ್ಯ ಮಂಟಪ ದಲ್ಲೂ ಮೂಡಿಬರುತ್ತಿವೆ ಮಕ್ಕಳ ಕವಿತೆಗಳು, ಮಕ್ಕಳ ಕಥೆಗಳು,ವಚನಗಳು, ಪ್ರಸ್ತುತ ವಿಷಯಗಳನ್ನು ಒಳಗೊಂಡ ಬರಹಗಳು ಮೂಡಿ ಬರುತ್ತಿವೆ, ಇವರು ಈಗಾಗಲೇ ಮೂರು ಕವನ ಸಂಕಲನ ಹೊರ ತಂದಿದ್ದು,ಹಲವಾರು ಕವಿಗೋಷ್ಠಿ ಗಳಲ್ಲಿ ಭಾಗವಹಿಸಿ ಸಾಹಿತ್ಯ ಆಸಕ್ತರ ಮನ ಗೆದ್ದಿದ್ದಾರೆ ಇವರಿಗೆ ಹಲವಾರು ಪ್ರಶಸ್ತಿ ಗಳು ಈಗಾಗಲೇ ಬಂದಿವೆ ಅದೇ ನಿಟ್ಟಿನಲ್ಲಿ ಇವರಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಅಖಿಲ ಕರ್ನಾಟಕ 4 ನೆಯ ಕವಿ ಕಾವ್ಯ ಸಮ್ಮೇಳನ ಗಂಗಾವತಿಯ ಚನ್ನಬಸವೇಶ್ವರ ಕಲಾ ಮಂದಿರದಲ್ಲಿ ಪ್ರದಾನ ಮಾಡಲಾಯಿತು.