ಲಾಭದಲ್ಲಿ ಶಿವಾಪೂರ(ಹ) ಶ್ರೀ ಬಸವೇಶ್ವರ ಸೌಹಾರ್ದ ಸಹಕಾರ ಸಂಘ

Must Read

ಮೂಡಲಗಿ: ತಾಲೂಕಿನ ಶಿವಾಪೂರ (ಹ) ಗ್ರಾಮದ ಶ್ರೀ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 2022-23ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 15.89 ಲಕ್ಷ ರೂ ಲಾಭ ಗಳಿಸಿ ಪ್ರಗತಿ ಪಥದತ್ತ ಸಾಗಿದೆ ಎಂದು ಸಹಕಾರಿಯ ಅಧ್ಯಕ್ಷ  ಬಸವರಾಜ ಸಾಯನ್ನವರ ಹೇಳಿದರು.

ಮೂಡಲಗಿ ತಾಲೂಕಿನ ಶಿವಾಪೂರ (ಹ)  ಗ್ರಾಮದ ಶ್ರೀ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ 2022-23 ಸಾಲಿನ ಸಹಕಾರಿ ಪ್ರಗತಿ ಕುರಿತು ಸಭೆಯಲ್ಲಿ ಮಾತನಾಡಿದ ಅವರು ಸದ್ಯ ಸಹಕಾರಿಯು 18.07 ಲಕ್ಷ ರೂ ಶೇರು ಬಂಡವಾಳ, 62.17 ಕ್ಷ ರೂ ನಿಧಿಗಳು, 8.24 ಕೋಟಿ ರೂ  ಠೇವು ಸಂಗ್ರಹಿಸಿ, ಗ್ರಾಹಕರ ಬದ್ರತೆಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ 2.44 ಕೋಟಿ ರೂ ಗುಂಥಾವನೆಗಳನ್ನು ಮಾಡಲಾಗಿದು, ಒಟ್ಟು 9.41 ಕೋಟಿ ರೂ ದುಂಡಿಯುವ ಬಂಡವಾಳ ಹೊಂದಿ ಸಹಕಾರಿ ಗ್ರಾಹಕರಿಗೆ ವಿವಿಧ ತೇರನಾದ 5.83 ಕೋಟಿ ರೂ ಸಾಲ ವಿತರಿಸಿ ಪ್ರಗತಿ ಪಥದತ್ತ ಸಾಗಿದೆ ಎಂದರು.        

ಉಪಾದ್ಯಕ್ಷ ಶ್ರೀಶೈಲ ಕಂಬಾರ ಮಾತನಾಡಿ, ಸಹಕಾರಿ ಕಾರ್ಯ ವ್ಯಾಪ್ತಿಯನ್ನು ಬೆಳಗಾವಿ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ವಿಸ್ತರಿಸಲಾಗುವುದು ಎಂದರು.  

ನಿರ್ದೇಶಕ ಶಿವಬಸು ಜುಂಜರವಾಡ ಮಾತನಾಡಿ,  ಸಹಕಾರಿಯು ಈಗಾಗಲೇ ಬೀಸನಕೊಪ್ಪದಲ್ಲಿ ಒಂದು ಶಾಖೆ ಹೊಂದಿದು, ಶೀಘ್ರದಲ್ಲಿ ಇನ್ನೊಂದು ಶಾಖೆಯನ್ನು ಪ್ರಾರಂಭಿಸಲಾಗುವುದೆಂದರು. 

ಸಭೆಯಲ್ಲಿ ನಿರ್ದೇಶಕರಾದ ಕೆಂಪಣ್ಣ ಮುಧೋಳ, ಅಲ್ಲಪ್ಪ ಬೆಳಗಲಿ, ಪ್ರಕಾಶ ಮುಧೋಳ, ಬಾಳಗೌಡ ಪಾಟೀಲ್,  ಇಂದ್ರವ್ವ ಪಾಟೀಲ್, ಮಾನಂದ ನಡಕಟ್ಟಿ, ಯಲ್ಲವ್ವ ನಡಗಟ್ಟಿ, ಶ್ರೀಶೈಲ ಮೇಲನಾಡ, ಗಣಪತಿ ಸಂಗಾನಟ್ಟಿ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ನಡಗಡ್ಡಿ, ಶಾಖಾ ಕಾರ್ಯದರ್ಶಿ ಶಿವಬಸು ಜುಂಜರವಾಡ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Latest News

ಬಿಡಿಸಿಸಿ ಬ್ಯಾಂಕ ನೂತನ ನಿರ್ದೇಶಕ ಅಪ್ಪಾಸಾಬ ಕೂಲಿಗುಡೆಗೆ ಮಾಲಗಾರ ಸಮಾಜದ ಅಭಿನಂದನೆ

ಬೆಳಗಾವಿ : ಪ್ರತಿಷ್ಠಿತ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ನಿ ಬೆಳಗಾವಿ ರವಿವಾರದಂದು ನಡೆದ ಚುನಾವಣೆಯಲ್ಲಿ ರಾಯಬಾಗ ತಾಲುಕು ಮತಕ್ಷೇತ್ರದಿಂದ ಸ್ಪರ್ಧೆ ಮಾಡಿ...

More Articles Like This

error: Content is protected !!
Join WhatsApp Group