ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ

Must Read

ಮೂಡಲಗಿ – ತಹಶೀಲ್ದಾರ ಕಚೇರಿಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ ಶ್ರೀಯುತ ಡಿ. ಜಿ. ಮಹಾತ ಅವರು ಶ್ರೀ ಸಿದ್ಧರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಪೂಜೆಯನ್ನು ಮಾಡಿ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ನಂತರ ಶ್ರೀ ಸಿದ್ಧರಾಮೇಶ್ವರ ಅವರ ಪವಾಡಗಳ ಕುರಿತು,ಅವರ ಇತಿಹಾಸ, ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು.

ಈ ಜಯಂತಿಯ ಸಂದರ್ಭದಲ್ಲಿ ಶಿವಾನಂದ ಬಬಲಿ ತಹಶೀಲ್ದಾರ್ ಗ್ರೇಡ್ -2, ಕೃಷ್ಣ ಗಾಡಿವಡ್ಡರ, ಅಧ್ಯಕ್ಷರು ಉತ್ತರ ಕರ್ನಾಟಕ ಭೋವಿ ವಡ್ಡರ ಸಮಾಜ, ಸುಭಾಷ ಧೋತ್ರೆ ತಾಲೂಕಾಧ್ಯಕ್ಷರು, ದಶರಥ ಗಾಡಿವಡ್ಡರ ಹಾಗೂ ಇನ್ನಿತರ ಸಮಾಜದ ಮುಖಂಡರುಗಳು ಮತ್ತು ತಹಶೀಲ್ದಾರ ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು. ಪರಸಪ್ಪ ನಾಯ್ಕ ತಾಲೂಕಾ ಶಿರಸ್ತೇದಾರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group