ನಮ್ಮೂರಿನ ಹೊಲಗಳಲ್ಲಿ ಬೆಳೆ ಬಂದ ಕಾಲಕ್ಕೆ ಬಿದಿರಿಗೆ ಮನುಷ್ಯರ ಅಂಗಿ ಪ್ಯಾಂಟ್ ಮಹಿಳೆಯರ ಸೀರೆ ಇತ್ಯಾದಿ ಉಡುಗೆ ತೊಡಿಸಿ ತಲೆಯ ಆಕಾರದಲ್ಲಿ ಗಡಿಗೆಯನ್ನು ಮಾಡಿ ಬೆದರು ನಿಲ್ಲಿಸುವರು. ಮಾನವನ ದೃಷ್ಟಿ ಬಹಳ ಕೆಟ್ಟದ್ದು ಎಂದು ನಂಬಿಕೆಯಿದೆ. ರೈತರು ದಾರಿ ಹೋಕರು ತಮ್ಮ ಬೆಳೆಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿ ಕೆಲಹೊತ್ತು ಅಲ್ಲಿಯೇ ನಿಂತು ತದೇಕ ಚಿತ್ತದಿಂದ ನೋಡಿದರೆ ಅವರ ಆ ದೃಷ್ಟಿಗೆ ಬೆಳೆದು ನಿಂತ ಪೈರು ನಾಶವಾಗುತ್ತದೆ ಎಂಬುದು ಹಿಂದಿನಿಂದಲೂ ಬೆಳೆದು ಬಂದ ನಂಬಿಕೆ.
ಅಷ್ಟೇ ಅಲ್ಲ ಅವುಗಳಿಗೆ ಪೇಪರ್ ತೂಗು ಬಿಡುತ್ತಾರೆ. ಆ ಪೇಪರ ಗಾಳಿಗೆ ಹಾರಾಡಿ ಸದ್ದು ಉಂಟು ಮಾಡುತ್ತದೆ. ಹೀಗೆ ಸದ್ದು ಮಾಡಿದಾಗ ಹಕ್ಕಿಗಳು ಅಲ್ಲಿ ಏನಾದರೂ ಕಾಳು ತಿನ್ನಲು ಬಂದಿದ್ದರೆ ಆ ಸಪ್ಪಳಕ್ಕೆ ಹೆದರಿ ಹಾರಿ ಹೋಗುತ್ತವೆ ಎಂಬುದು ಮತ್ತೊಂದು ನಂಬಿಕೆ. ಈ ಎರಡು ದೃಷ್ಟಿಕೋನದಿಂದ ಹೊಲಗಳಲ್ಲಿ ಬೆದರು ಬೊಂಬೆ ನಿಲ್ಲಿಸುವರು.
ಈ ಆಕಾರಗಳು ನೈಜವಾಗಿ ಕಾಣಲೆಂಬಂತೆ ಅವುಗಳ ಒಳಗೆ ಹೊಟ್ಟು ಅಥವ ಭತ್ತದ ಹುಲ್ಲು ತುಂಬಿರುವರು.ಗಡಿಗೆಗೆ ಕಣ್ಣು ಮೂಗು ಬಾಯಿ ಇತ್ಯಾದಿ ಬಿಳಿ ಸುಣ್ಣದಿಂದ ಕೊರೆದಿರುವರು.ಇದು ಇಂದಿಗೂ ಬೆಳೆದು ಬಂದ ಸಂಪ್ರದಾಯವಾಗಿದೆ.
ಹೊಲಗಳಲ್ಲಿನ ಬೆಳೆಯುವ ಫಸಲನ್ನು ಪಕ್ಷಿಗಳು ತಿನ್ನದಂತೆ ತಡೆಯಲು ರೈತರು ಇದನ್ನು ಬಳಸುತ್ತಾರೆ.
ಸಾಮಾನ್ಯವಾಗಿ ಹಳೆ ಬಟ್ಟೆಗಳನ್ನು ತೊಡಿಸಿ ಮನುಷ್ಯರ ಆಕೃತಿಯಂತೆ ಮಾಡಿ ತೆರೆದ ಜಮೀನುಗಳಲ್ಲಿ ಇಡಲಾಗುತ್ತದೆ. ಕೆಟ್ಟ ದೃಷ್ಟಿ ಮತ್ತು ಹಕ್ಕಿಗಳು ಹಾಳೆಯ ಸಪ್ಪಳ ಮತ್ತು ಮನುಷ್ಯನ ಆಕೃತಿಗೆ ಹೆದರಿ ಹೋಗಲಿ ಎಂಬ ಭಾವನೆಯಿಂದ ಬಿದಿರುಗಳಿಗೆ ಮನುಷ್ಯನ ಆಕೃತಿ ಮಾಡುವ ಹೊಲಗಳಲ್ಲಿ ಬೆಳೆಗಳ ಮಧ್ಯದಲ್ಲಿ ಅವುಗಳನ್ನು ನೆಡುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿದೆ.
ಬೆದರುಗೊಂಬೆ ಎಂಬುದು ಹಲವು ವೇಳೆ ಮನುಷ್ಯನ ಆಕೃತಿಯಂತಿರುವ ದೇಹ ಅಥವಾಅ ಬೊಂಬೆ. ಮನುಷ್ಯರಂತೆ ಕಾಣುವ ಬೆದರುಗೊಂಬೆಗಳಿಗೆ ಸಾಮಾನ್ಯವಾಗಿ ಹಳೆ ಬಟ್ಟೆಗಳನ್ನು ತೊಡಿಸಿ ತೆರೆದ ಜಮೀನುಗಳಲ್ಲಿ ಇರಿಸಲಾಗುತ್ತದೆ. ಇದರ ಉದ್ದೇಶ ಪಕ್ಷಿಗಳು ಇತ್ತೀಚೆಗೆ ಬೀರಿದ ಬೀಜ ಹಾಗೂ ಬೆಳೆಯುತ್ತಿರುವ ಫಸಲಿಗೆ ತೊಂದರೆ ಕೊಡುವುದನ್ನು ಮತ್ತು ಅವುಗಳನ್ನು ತಿನ್ನುವುದಕ್ಕೆ ಅಡ್ಡಿಪಡಿಸುವುದು. ರೈತರು ಪ್ರಪಂಚದಾದ್ಯಂತ ಬೆದರುಗೊಂಬೆಗಳನ್ನು ಬಳಸುತ್ತಾರೆ, ಮತ್ತು ಜನಪ್ರಿಯ ಸಂಸ್ಕೃತಿಗಳಲ್ಲಿ ಹೊಲಗಳು ಹಾಗೂ ಗ್ರಾಮಪ್ರದೇಶಗಳ ಗಮನಾರ್ಹ ಸಂಕೇತವಾಗಿವೆ.
ಡಾ.ವೈ.ಬಿ.ಕಡಕೋಳ
ಮುನವಳ್ಳಿ-೫೯೧೧೧೭
೯೪೪೯೫೧೮೪೦0

