- Advertisement -
ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಹತ್ತಿರ ಬಸವ ಕಮೀಟಿ ವತಿಯಿಂದ ನಡೆದಾಡುವ ದೇವರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರು ಲಿಂಗೈಕ್ಯರಾದ ಪ್ರಯುಕ್ತ ಶ್ರದ್ಧಾಂಜಲಿ ಸಭೆ ಜರುಗಿತು.
ಹಿರಿಯರಾದ ಈರಣ್ಣ ಬೆಳಕೂಡ ಮಾತನಾಡಿ, 2011ರಲ್ಲಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರು ಕಲ್ಲೋಳಿ ಪಟ್ಟಣದಲ್ಲಿ ಒಂದು ತಿಂಗಳ ಕಾಲ ಕಲ್ಲೋಳಿ ಸುತ್ತ ಮುತ್ತಲಿನ ಗ್ರಾಮಗಳ ಭಕ್ತರಿಗೆ ಪ್ರವಚನ ನೀಡಿ ಜ್ಞಾನದ ಬೆಳಕನ್ನು ಚೆಲ್ಲಿದ್ದಾರೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ರಮೇಶ ಬೆಳಕೂಡ, ಖಾನಾಪುರ, ಗಿರಿಮಲ್ಲಪ್ಪ ಸವಸುದ್ದಿ, ಮಾರುತಿ ಹೂಗಾರ ಬೋಜರಾಜ್ ಬೆಳಕೂಡ, ಪ್ರಿಯದರ್ಶಿನಿ ಬ್ಯಾಂಕ್ ಅಧಿಕಾರಿ ಮಂಜು, ಪ್ರಕಾಶ ಗರಗಟ್ಟಿ ಮೌನೇಶ್ ಪತ್ತಾರ್, ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.