ಮೂಡಲಗಿ – ತಾಲೂಕಿನ ಗುರ್ಲಾಪೂರದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರೀ ಬಸವೇಶ್ವರ ರಥೋತ್ಸವವು ದಿನಾಂಕ 17
ರಂದು ಅದ್ದೂರಿಯಾಗಿ ಜರುಗುವದು.
ಸೋಮವಾರ ದಂದು ಶ್ರೀ ಬಸವಶ್ವರರ ಗದ್ದುಗೆಗೆ ಮಹಾ ಅಭಿಷೇಕ ಜರುಗುವದು. ಸಂಜೆ 5 ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ಶ್ರೀ ಮಾರುತಿ ದೇವಸ್ಥಾನದವರೆಗೆ ರಥೋತ್ಸವ ಮಹಾ ಮಂಗಳಾರುತಿ ಸಲ್ಲಿಸಿ ಮರಳಿ ರಥೋತ್ಸವವು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬರುವುದು. ಈ ಸಮಯದಲ್ಲಿ ಸುಮಂಗಲಿಯರ ಆರತಿ, ಸಕಲ
ವಾದ್ಯ ಮೇಳ, ಕುದರಿಕುಣಿತ ಹಾಗೂ ರೂಪಕಗಳು ಪ್ರದರ್ಶನ ಜರಗುವವು. ಅದೆ ದಿನ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹವ್ಯಾಸಿ ಕಲಾ ತಂಡದವರಿಂದ, ಗುರ್ಲಾಪೂರ ಇವರು ಅರ್ಪಿಸುವ 23 ನೇ ಕಲಾ
ಕುಸುಮ ವಾದ “ಧರ್ಮದ ನುಡಿ ಬೆಂಕಿಯ ಕಿಡಿ”ಎಂಬ ಸಾಮಾಜಿಕ ನಾಟಕವು ಸೋಮವಾರ ದಿ,17 ರಂದು ರಾತ್ರಿ 10-30ಕ್ಕೆ ಇದೆ.
ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ,ಗುರ್ಲಾಪೂರದ ವೇ. ಮೂರ್ತಿ ಶ್ರೀ ಶಿವಾನಂದ ಹಿರೇಮಠ, ಶ್ರೀ ರುದ್ರಯ್ಯಾ ಹಿರೇಮಠ ಶ್ರೀ ಶಂಕರ ಗುರು ಸ್ವಾಮಿಗಳು ಸಾನಿದ್ಯ ವಹಿಸಲಿದ್ದಾರೆ.
ಉದ್ಘಾಟಕರಾಗಿ ಶ್ರೀ ಬಾಲಚಂದ್ರ ಜಾರಕಿಹೊಳಿ ಶಾಸಕರು ಅರಭಾಂವಿ ಮತಕ್ಷೇತ್ರ,ಚಜ್ಯೋತಿ ಬೆಳಗಿಸಲು ದುಂಡಪ್ಪ ಮುಗಳಖೋಡ ಹಾಗೂ ಬಿ. ಸಿ. ಮುಗಳಖೋಡ ಪುಸ್ತಕ
ಪೂಜೆ,ರಾಮಪ್ಪ ಹಳ್ಳೂರ, ಪ್ರವಿಣ ಸೋನವಾಲ್ಕರ, ಸಂಗಪ್ಪ ಗಾಣಿಗೇರ ರೇವಪ್ಪ ನೇಮಗೌಡರ,ಡಾll
ಎಮ್. ಎನ್. ಮುಗಳಖೋಡಬಲೂನ ಹಾರಿಸಲು,ಕೆ. ಆರ್. ದೇವರಮನಿ ಎಸ್. ಎಸ್. ಮುಗಳಖೋಡ,ಎ. ಜಿ.
ಶರಣಾರ್ಥಿ, ಎಸ್. ಬಿ. ಮುಗಳಖೋಡ, ಶಬ್ಬಿರ ಡಾಂಗೆ ಫೋಟೋ ಪೂಜೆಗಾಗಿ.ಎಮ್ ಬಿ ರಂಗಾಪೂರ
ಪಾವಡೆಪ್ಪ ನೇಮಗೌಡರ, ಎಮ್. ಎಸ್. ನೇಮಗೌಡರ,ಆಯ್. ವಾಯ್. ಮುಗಳಖೋಡ ಎಲ್ ವಾಯ್.
ಅಡಿಹುಡಿ ಹಾಗೂ ಮುಖ್ಯ ಅತಿಥಿಗಳಾಗಿ ಗ್ರಾಮದ ಗುರು ಹಿರಿಯರು ಆಗಮಸಲಿದ್ದಾರೆ ಎಂದು ಸಂಘದ
ಅಧ್ಯಕ್ಷರಾದ ಶೇಖರ ಕುಲಗೋಡ ತಿಳಿಸಿರುತ್ತಾರೆ.