ಹಳ್ಳೂರ- ಗ್ರಾಮದಲ್ಲಿ ಕಡೆ ಶ್ರಾವಣ ಸೋಮವಾರದಂದು ಆರಾಧ್ಯ ದೇವರಾದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆ ಶ್ರೀ ಬಸವೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಅಭಿಷೇಕ ನೆರವೇರಿಸಿ ಗ್ರಾಮದ ಎಲ್ಲ ದೇವರಿಗೆ ನೈವೇದ್ಯ ಅರ್ಪಿಸಲಾಯಿತು.
ಸಾಯಂಕಾಲ ಶ್ರೀ ಬಸವೇಶ್ವರ ದೇವಸ್ಥಾನದಿಂದ ರಥೋತ್ಸವವು ಭವ್ಯ ಮೆರವಣಿಗೆಯೊಂದಿಗೆ ವಿವಿಧ ವಾದ್ಯ ಮೇಳ ಎರಡೂ ದೈವದ, ಕರಡಿ ಮಜಲು, ಉಚಾಯಿ, ವಿವಿಧ ಲೈಟಿಂಗ ಕಾಂಡ್ಯಾಳ ಬಾಸಿಂಗ, ಹೂವಿನ ಮಾಲೆ ನೋಡುಗರ ಕಣ್ಮನ ಸೆಳೆಯುತಿತ್ತು. ಹುಡುಗರು ಕುಣಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸಿದರು.
ರಥೋತ್ಸವವು ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಶಾಂತ ರೀತಿಯಲ್ಲಿ ಬಂದು ತಲುಪಿತು. ಭಕ್ತರು ರಥೋತ್ಸವದ ಮೇಲೆ ಕಾರಿಕ, ಬೆಂಡೂ, ಬೆತ್ತಾಸು ಹಾರಿಸಿ ಹರಕೆ ತೀರಿಸಿದರು. ಜೀಟಿ ಜೀಟಿ ಮಳೆಯಿದ್ದರು ಲೆಕ್ಕಿಸದೆ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಭಾಗಿಯಾಗಿದ್ದು ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಗ್ರಾಮದ ಎಲ್ಲ ಗುರು ಹಿರಿಯರ ಸಮ್ಮುಖದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವೂ ಅತೀ ವಿಜೃಂಭಣೆಯಿಂದ ನಡೆಯಿತು.