spot_img
spot_img

ಶ್ರೀ ಗೌರಿಶಂಕರ ಶಿವಾಚಾರ್ಯರ ಪುಣ್ಯಾರಾಧನೆ

Must Read

- Advertisement -

ಬಾಗಲಕೋಟೆ-ಜಿಲ್ಲೆಯ ಬಾಗಲಕೊಟೆ ತಾಲೂಕಿನ ಕಿರಸೂರ ಗ್ರಾಮದ ಲಿಂ ಶ್ರೀ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆಯ ನಿಮಿತ್ತ ನಡೆದ ಜಾತ್ರಾ ಮಹೋತ್ಸವದ ಅಂಗವಾಗಿ, ಸಕಲ ವಾದ್ಯ ಮೇಳದೊಂದಿಗೆ ಮಹಾರಥೋತ್ಸವವು ಕಿರಸೂರನಲ್ಲಿ ಜರುಗಿತು.

ಮುಂಜಾನೆ ೬ ಗಂಟೆಗೆ ಗೌರಿಶಂಕರ ಕರ್ತೃ ಗದ್ದಿಗೆಗೆ ಮಹಾರುದ್ರಾಭಿಷೇಕ, ಸಕಲವಾದ್ಯ ಮೇಳದೊಂದಿಗೆ ಪಾಲಿಕೆ ಉತ್ಸವ ಕಳಸದ ಮೆರವಣಿಗೆಯು ಸುಮಂಗಲಿಯರಿ೦ದ ಕುಂಭಮೇಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಮಠಕ್ಕೆ ತಲುಪಿತು

ಪುಣ್ಯ ಸ್ಮರಣೆಯ ನಿಮಿತ್ತ ಶ್ರೀಮಠದ ಲಿಂ. ಗೌರಿಶಂಕರ ಮಹಾಸ್ವಾಮಿಗಳು ತಮ್ಮ ಜೀವಂತ ಅವಧಿಯಲ್ಲಿ ಪ್ರಾರಂಭವಾಗಿದ೦ತಹ, ಐದು ದಿವಸದ ಜಪಯಜ್ಷ ಕಾರ್ಯಕ್ರಮವನ್ನು ಅವರ ಶಿಷ್ಯ ಬಳಗದಿಂದ ಪ್ರಾರಂಭಗೊಡಿದ್ದ ಜಪಯಜ್ಷ ಕಾರ್ಯಕ್ರಮವನ್ನು ಗುಳೇದಗುಡ್ಡದ ಮರಡಿ ಮಠದ ಅಭಿನವ ಕಾಡಸಿದ್ದೇಶ್ವರ ಮರುಳಾರಾಧ್ಯ ಶ್ರೀಗಳು ನೇತೃತ್ವದಲ್ಲಿ ಮುಂಜಾನೆ ೧೦.೦೦ ಘಂಟೆಗೆ ಮಂಗಲಗೊಳಿಸಿದ್ದರು.

- Advertisement -

ಸಾಯಂಕಾಲ ಜರುಗಿದ ಮಹಾರಥೋತ್ಸವಕ್ಕೆ ಮನ್ನಿಕಟ್ಟಿ ಗ್ರಾಮದ ಸದ್ಭಕ್ತರಿಂದ ತೇರಿನ ಕಳಸ, ಮುಗಳೊಳ್ಳಿ ಗ್ರಾಮದ ಸದ್ಭಕ್ತರಿಂದ ತೇರಿನ ಹಗ್ಗ, ಬದಾಮಿ ತಾಲೂಕಿನ ಸುಳ್ಳ ಮತ್ತು ಮುದೇನೂರ ಗ್ರಾಮದ ಸದ್ಭಕ್ತರಿಂದ ನಂದಿಕೋಲು ಹಾಗೂ ತೇರಿನ ರುದ್ರಾಕ್ಷಿಮಾಲೆ ಭಗವತಿ ಗ್ರಾಮದ ಸದ್ಭಕ್ತರಿಂದ ಬಾಳೆ ಕಂಬ ಮೆರವಣಿಗೆ ಮೂಲಕ ತಲುಪಿದ ನಂತರ ಗುಳ್ಳೇದಗುಡ್ಡ ಗ್ರಾಮದ ದಾನಿಗಳಾದ ಸದಾಶಿವಯ್ಯ ಎಸ್. ವಸ್ತ್ರದ   ಅವರು ನಿರ್ಮಿಸಿ ಕೊಟ್ಟಿರುವ ಭವ್ಯವಾದ ರಥವನ್ನು ಪ್ರತಿ ವರ್ಷದಂತೆ 12ನೇ ವರ್ಷದ ರಥೋತ್ಸವವನ್ನು ಹರ ಗುರು ಚರಮೂರ್ತಿಗಳಾದ ಮುತ್ತತ್ತಿ ಶಿವಲಿಂಗೇಶ್ವರ ಶ್ರೀಗಳು ಬಿರೇಕೆರೋರ ರುದ್ರಮುನಿ ಶ್ರೀಗಳು, ಇಟಗಿ ಗುರು ಶಾಂತವೀರ ಶ್ರೀಗಳು ಪ್ರವಚನಕಾರರಾದ ಸೌದತ್ತಿ ತಾಲೂಕಿನ ಕಗದಾಳ ಗ್ರಾಮದ ವೀರಭದ್ರ ಸ್ವಾಮಿಗಳು ಶ್ರೀಮಠದ ಅರ್ಚಕ ಸಂಗಯ್ಯ ಹಿರೇಮಠ ಶ್ರೀಮಠದ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಮುತ್ಯಪ್ಪ ಮೇಟಿ ಕಾರ್ಯದರ್ಶಿ ಷಣ್ಮುಖ ಅಂಗಡಿ ಶ್ರೀಮಠದ ಭಕ್ತರಾದ ಹುನಗುಂದ ಗ್ರಾಮದ ಬಾಗಲಕೋಟ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸುಭಾಷ್ ಎಮ್ ತಾಳಿಕೋಟಿ ಗ್ರಾಮದ ಮುಖಂಡರಾದ ಬಸವರಾಜ ಆನಗವಾಡಿ ಶಿವಾನಂದ ಮಲ್ಲಾಪುರ ಸಾಂಕೇತಿಕವಾಗಿ ಚಾಲನೆ ನೀಡಿದರು ನಂತರ ಸಾವಿರಾರು ಭಕ್ತರು ಹಗ್ಗ ಎಳೆಯುವದರ ಮೂಲಕ ಸಡಗರ ಸಂಭ್ರಮದಿಂದ ವಿವಿಧ ವಾದ್ಯ ಮೇಳಗದೊಂದಿಗೆ ಮಹಾ ರಥೋತ್ಸವ ಜರುಗಿತು,

ಶ್ರೀಮಠಕ್ಕೆ ಭಕ್ತರ ದಂಡು ಪುಣ್ಯ ಸ್ಮರಣೀಯ ನಿಮಿತ್ಯ ಶ್ರೀ ಮಠಕ್ಕೆ ಬಾಗಲಕೋಟೆಯ ಮಾಜಿ ಸಚಿವರಾದ ಎಸ್ ಆರ್ ಪಾಟೀಲ ಆಗಮಿಸಿ ದರ್ಶನ ಪಡೆದು ಅರ್ಚಕರಿಂದ ಪ್ರಸಾದ ಸ್ವೀಕರಿಸಿದರು ನಂತರ ಕಮಿಟಿ ಅವರಿಂದ ಸನ್ಮಾನ ಸ್ವೀಕರಿಸಿ , ಮಾತನಾಡಿದ ಅವರು ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಶ್ರೀಗಳು ನಡೆದಾಡಿದ ಈ ಸ್ಥಳ ಅವರ ಮಾತುಗಳು ಹಿಂದಿಗೂ ಪ್ರಚಲಿತದಲ್ಲಿವೆ ಶ್ರೀಗಳು ಆಯುರ್ವೇದಿಕ ವೈದ್ಯರಾಗಿದ್ದಲ್ಲದೆ ಅವರಿಂದ ಹಲವಾರು ಭಕ್ತರ ರೋಗಗಳನ್ನು ಕಳೆದಿದ್ದಾರೆ ನಮ್ಮ ಕುಟುಂಬವು ಸಹ ಶ್ರೀಮಠದ ಭಕ್ತರಾಗಿದ್ದೇವೆ ಶ್ರೀಮಠದ ಸೇವಾ ಅಭಿವೃದ್ಧಿಗೆ ನಾನು ತುಂಬಾ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಅವರು ತಿಳಿಸಿದರು ಈ ಸಂದರ್ಭದಲ್ಲಿ ಅವರ ಆಪ್ತ ಸಹಾಯಕ ರಾಜು ನಡುವಿನಮನಿ ಬಾಗಲಕೋಟ ಗ್ರಾಮೀಣ ಪಿಎಸ್ಐ ದಳವಾಯಿ ಬಸವರಾಜ ಡುಗ್ಗಿ ಅಯ್ಯಪ್ಪ ಮಳಗಾವಿ ಇಸ್ಮಾಯಿಲ್ ನದಾಫ್ ಬಸರ್ ಕೋಡ್ ಸರ್ ಇತರರು ಇದ್ದರು.

ಹುನಗುಂದದ ರೈತ ಮುಖಂಡ ಕೃಷ್ಣ ಜಾಲಿಹಾಳ ತಿಮ್ಮಾಪುರ ಗ್ರಾಮದ ಪತ್ರಕರ್ತ ಜಗದೀಶ ಹದ್ಲಿ ಸೇರಿದಂತೆ ಬೆಳಿಗ್ಗೆಯಿಂದ ನೂರಾರು ಭಕ್ತರು ಆಗಮಿಸಿ ಶ್ರೀ ಗೌರಿಶಂಕರ ಗದ್ದುಗೆಗೆ ಭಕ್ತಿಯ ನಮನ ಸಲ್ಲಿಸಿ ದರ್ಶನ ಪಡೆದು ಪುನೀತರಾದರು
ರಥೋತ್ಸವದಲ್ಲಿ ಕಿರಸೂರ, ಮುದೇನೂರು, ಬದಾಮಿ ತಾಲೂಕಿನ ಸುಳ್ಳ, ಮುಗುಳುಳ್ಳಿ, ಭಗವತಿ ಹಳ್ಳೂರ, ಬೇವೂರು, ಹೊನ್ನ ಕಟ್ಟಿ, ಮನ್ನಿಕಟ್ಟೆ, ಬಾಗಲಕೋಟೆ ಗುಳೇದಗುಡ್ಡ, ಗದಗ ಸೇರಿದಂತೆ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ್ದ ಭಕ್ತರು, ಪಾಲ್ಗೊಂಡಿದ್ದರು

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group