ಭೀಮಾ ಸೆಂಟ್ರಲ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ

Must Read

ಸಿಂದಗಿ; ಪಟ್ಟಣದ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಾಂಟೋಸ್ಸೊರಿ ಮಕ್ಕಳು ಕೃಷ್ಣ ರಾಧೆಯರ ವೇಷವನ್ನು ಧರಿಸಿಕೊಂಡು ಶಾಲೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಗಮನ ಸೆಳೆದರು,

ಶ್ರೀರಕ್ಷ ಎಲ್, ಕೆ.ಜಿ ವಿದ್ಯಾರ್ಥಿನಿ ಶ್ರೀಕೃಷ್ಣನ ಭಕ್ತಿ ಗೀತೆಯನ್ನು ಹಾಡಿ ಕಾರ್ಯಕ್ರಮದಲ್ಲಿ ಗಮನಸೆಳೆದಳು  ಪಾಲಕರಾದ ಪ್ರಿಯಾ ಸಚಿನ್ ಕುಲಕರ್ಣಿ ಕೃಷ್ಣನ ಮಹಿಮೆಯ ಆತನ ಜನ್ಮ ವೃತ್ತಾಂತವನ್ನು ಹಾಡನ್ನು ಹಾಡಿದರು,

ಶಾಲೆಯ ಪ್ರಾಂಶುಪಾಲೆ ಡಾ. ಸುಶಿಲಾ ಕೆ. ಆರ್ ಅವರು ಮಾತನಾಡಿ, ಶ್ರೀ ಕೃಷ್ಣನು ಜನನ ಕಾರಾಗೃಹದಲ್ಲಿ ಆದರೂ ಸಹಿತ ಈ ಹುಟ್ಟು ಅಂತ್ಯದ ಮಧ್ಯದಲ್ಲಿ ನಮ್ಮ ಜೀವನವನ್ನು ಸುಂದರ ಹಾಗೂ ಸರಳ ಜೀವನ ನಡೆಸಬೇಕು ಎಂದರು.

ಶಾಲೆಯ ಅಧ್ಯಕ್ಷ ವಿಠ್ಠಲ ಜಿ. ಕೊಳೂರ ಮಾತನಾಡಿ, ಮಕ್ಕಳು ಸೂಕ್ಷ್ಮ ಗ್ರಹಿಕೆಯ ನೋಟದಿಂದ ಅವರ ಆಸಕ್ತಿಯ ಕಡೆಗೆ ಪಾಲಕರು ಗಮನಹರಿಸಿ ಶಿಕ್ಷಕರು ಪಾಲಕರೂ ಮಗುವಿನ ಆಂತರಿಕವಾಗಿ ಹುದುಗಿರಿರುವ ಪ್ರತಿಭೆಯನ್ನು ಗುರುತಿಸಿ ಮಕ್ಕಳ ಸರ್ವೋನ್ಮುಖ ವಿಕಾಸಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group