ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ

Must Read

ಮೂಡಲಗಿ – ಮೂಡಲಗಿ ಶಿಕ್ಷಣ ಸಂಸ್ಥೆ ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಕೃಷ್ಣ ಮೂರ್ತಿಗೆ ಪೂಜೆ ಯೊಂದಿಗೆ
ಕಾರ್ಯಕ್ರಮವನ್ನು ಆರಂಭಿಸಲಾಯಿತು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ಆರ್ ಸೋನವಾಲ್ಕರ ಅವರು ಮಾತನಾಡಿ, ಮಕ್ಕಳು ಅರೋಗ್ಯ ಮತ್ತು ಖುಷಿಯಾಗಿ ಇರಲು ಪಾಠಕ್ಕಿಂತ ಚಟುವಟಿಕೆ ಬಹಳ ಮುಖ್ಯ ಎಂದು ಹೇಳಿದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಎಲ್ಲ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ರಾಧಾ ಕೃಷ್ಣ ನ ವೇಷ ಧರಿಸಿದ ಮಕ್ಕಳು ಖುಷಿಯಾಗಿ ಇರೋದನ್ನ ಕಂಡ ಅವರು ಶುಭಾಶಯಗಳನ್ನ ಕೋರಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂದೀಪ ಸೋನವಾಲ್ಕರ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಅತೀ ಮುಖ್ಯ ಎಂದರು.

ಎಸ್ ಎಸ್ ಆರ್ ಪ್ರೌಢಶಾಲೆಯ ಉಪ ಪ್ರಾಚಾರ್ಯರು ಬಿ ಕೆ ಕಾಡಪ್ಪಗೋಳ ಅವರು ಮಾತನಾಡಿದರು. ಶಾಲೆಯ ಪ್ರಧಾನ ಗುರುಗಳಾದ  ಸುಭಾಸ ಎಸ್ ಕುರಣೆರವರು ಸ್ವಾಗತಿಸಿದರು. ಅನಿಲ ಹುಚರಡ್ಡಿ, ದಿಶಾರಾಣಿ ನಂದಗಾಂವ, ಅಕ್ಷತಾ ಪಾಟೀಲ, ಅರ್ಚನಾ ಮಹೇಂದ್ರಕರ,, ನಿರೂಪಣೆ ಯನ್ನು ಶಿಕ್ಷಕಿ ಅಮೃತಾ ಪಾಟೀಲ್ ಮಾಡಿದರು. ಕೊನೆಗೆ ಶಿವಾಜಿ ರಾವನ ಅವರು ವಂದಿಸಿದರು. ಕೊನೆಗೆ ಸಿಹಿ ಹಂಚಲಾಯಿತು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group