spot_img
spot_img

ಶ್ರೀ ರಾಚೋಟೇಶ್ವರ ಪುಣ್ಯ ಸ್ಮರಣೋತ್ಸವ

Must Read

- Advertisement -

ಜುಲೈ – 3 ರಿಂದ 5 ರ ವರೆಗೆ ಕಿಲ್ಲಾ ತೊರಗಲ್ಲದ ಸಂಸ್ಥಾನ ಗಚ್ಚಿನಹಿರೇಮಠದ ಲಿಂ.ಶ್ರೀ ರಾಚೋಟೇಶ್ವರ ಶಿವಯೋಗಿಗಳವರ 47 ನೇಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ತನ್ನದೇ ಆದಂತಹ ಅಧ್ಯಾತ್ಮಿಕ , ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಈ ತಾಲೂಕು ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕವಾಗಿ ಹೆಸರು ಪಡೆದಿದೆ , ಇಲ್ಲಿ ವೀರಶೈವ ಧರ್ಮ ಪ್ರಮುಖವಾಗಿ ಬೆಳೆದಿದ್ದು ಹಿಂದೆ ಸುಮಾರು ನೂರಾರು ಮಠಗಳು ಸ್ಥಾಪನೆಯಾಗಿದ್ದವೆಂದು ಹೇಳಲಾಗುತ್ತದೆ, ಆದರೆ ಇಂದು ಬೆರಳೆಣಿಕೆಯಷ್ಟೇ ಮಠಗಳನ್ನು ಮಾತ್ರ ಕಾಣಬಹುದಾಗಿದೆ. ಇವುಗಳಲ್ಲಿ ವರ್ಷವಿಡೀ ಒಂದಿಲ್ಲೊಂದು ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿರುವುದು ಸಮಾಧಾನಕರ ಸಂಗತಿ.

ಅಂತಹುದೇ ಒಂದು ಮಠ ಕಿಲ್ಲಾ ತೊರಗಲ್ಲ ಸಂಸ್ಥಾನದ ಗಚ್ಚಿನಹಿರೇಮಠವು 15 ನೇಯ ಶತಮಾನದಲ್ಲಿಯೇ ಸ್ಥಾಪನೆಗೊಂಡಿದೆ. ಈ ಶ್ರೀಮಠದ ಪರಮ ಪೂಜ್ಯ ಲಿಂಗೈಕ್ಯ ಶ್ರೀರಾಚೋಟೇಶ್ವರ ಶಿವಯೋಗಿಗಳವರ 47 ನೇಯ  ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ. ಮ.ಘ.ಚ.ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳವರ ಹಾಗೂ ಶ್ರೀಮಠದ ಉತ್ತರಾಧಿಕಾರಿ ಶ್ರೀಸಿದ್ದಲಿಂಗ ದೇವರು ಗಳವರ ಆದೇಶದಂತೆ 2024 ಜುಲೈ – 3 ರಿಂದ 5 ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮತ್ತು ಜಾನಪದ ಕಾರ್ಯಕ್ರಮಗಳ ಮೂಲಕ ವಿಜ್ರಂಭಣೆಯಿಂದ ನೆರವೇರಲಿದೆ.

- Advertisement -

ಬುಧವಾರ ದಿ. 03 ರಂದು ಮುಂ.7 ಗಂಟೆಗೆ ” ಧರ್ಮ ಧ್ವಜಾರೋಹಣ ” ವು ಹರ್ಲಾಪೂರದ ಶ್ರೀ ಢವಳೇಶ್ವರ ಮಠದ ಶ್ರೀರೇಣುಕ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜರುಗುವುದು. ನಂತರ ಮುಂ. 8 ಗಂಟೆಗೆ ” ರುದ್ರಯಾಗ ಮಹಾಪೂಜೆ ” ಜರುಗಲಿದೆ.

ಸಂಜೆ 7 ಗಂಟೆಗೆ ಜರುಗಲಿರುವ ” ಧರ್ಮ ಸಭೆಯ ” ದಿವ್ಯ ಸಾನಿಧ್ಯವನ್ನು ಕಟಕೋಳದ ವಿರಕ್ತಮಠದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳವರು ವಹಿಸಲಿದ್ದಾರೆ. ಸಾನಿಧ್ಯ ಕಟಕೋಳದ ಚೌಕಿಮಠದ ಶ್ರೀ ನಾಗಭೂಷಣ ಮಹಾಸ್ವಾಮಿಗಳವರು, ಹಾಗೂ ಮುಳ್ಳೂರಿನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ಜರುಗುವ ಧರ್ಮ ಸಭೆಯ ಮುಖ್ಯ ಅತಿಥಿಗಳಾಗಿ ರಮೇಶ. ಚಂ.ಪಂಚಕಟ್ಟಿಮಠ, ರಾಮದುರ್ಗ, ಚಿಕ್ಕರೇವಣ್ಣ ನವರು  ಭಾ.ಜ.ಪಾ ಮುಖಂಡರು ರಾಮದುರ್ಗ, ಬಿ.ಎಂ.ಪಾಟೀಲ ಸುನ್ನಾಳ, ಬಾಳಪ್ಪ. ರಡರಟ್ಟಿ ಉಜಿನಕೊಪ್ಪ , ಸಿದ್ದನಗೌಡ. ಬ.ಪಾಟೀಲ ಹಾಲೊಳ್ಳಿ , ಪಿ.ಶಿವಸುಬ್ರಮಣಿಯನ್, ಪ್ರಧಾನ ವ್ಯವಸ್ಥಾಪಕರು ‘ ಇ.ಆಯ್. ಡಿ ಪ್ಯಾರಿ ( ಇಂ) ಲಿ. ಖಾನಪೇಠ, ಲಕ್ಷ್ಮಣ. ರಕಮೋಜಿ ಹಾಲೊಳ್ಳಿ , ದುಂಡಯ್ಯ ಹಿರೇಮಠ , ಭೀಮಪ್ಪ. ಫ.ಬಸಿಡೋಣಿ, ಫಕೀರಪ್ಪ. ಬಾ. ಬನ್ನೂರ ಸುನ್ನಾಳ , ಮತ್ತಿತರರು ಭಾಗವಹಿಸುವರು.ಪ್ರವಚನ ಶ್ರೀ ವೇ.ಮೂ. ವೀರಯ್ಯ ಶಾಸ್ತ್ರೀಗಳು ಚರಂತಿಮಠ ಶಲವಡಿ ರವರು ನೀಡಲಿದ್ದಾರೆ, ಗಾನ ಸುಧೆ ಶ್ರೀಪುಟ್ಟರಾಜ .ಕ. ತಾಳಿ ಬೆಳವಣಿಕೆ ಹಾಗೂ ಸಂಗಡಿಗರಿಂದ ಜರುಗಲಿದೆ.

ಗುರುವಾರ ದಿ. 4 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ದೇವಿಯ ಉಪಾಸಕರಿಂದ ” ಸಾಮೂಹಿಕ ದೇವಿ ಪಾರಾಯಣ ಮಹಾಪೂಜೆ ” ನಂತರ ಮುಂ. 9 ಗಂಟೆಗೆ ” ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ” ವು ನರಗುಂದದ ಪುಣ್ಯಾರಣ್ಯ ಪತ್ರಿವನಮಠದ ಶ್ರೀ ಸಿದ್ದವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರು ಮತ್ತು ಭಂಟನೂರಿನ ಶ್ರೀ ಕಾಳೀಕಾದೇವಿ ಗಚ್ಚಿನಹಿರೇಮಠದ ಶ್ರೀ ಮಾತೋಶ್ರೀ ಸರೋಜಮ್ಮನವರ ದಿವ್ಯ ಸಾನಿಧ್ಯದಲ್ಲಿ ಜರುಗುವುದು. ಸವದತ್ತಿಯ ” ಕಿ.ರಾ.ಚ. ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಲಕ್ಷ್ಮೀ. ಮ. ಆರಿಬೆಂಚಿ ರವರು ಉಪಸ್ಥಿತರಿರುವರು.

- Advertisement -

ಸಂಜೆ 7 ಗಂಟೆಗೆ ಜರುಗುವ ” ಧರ್ಮ ಸಭೆಯ ” ಪಾವನ ಸಾನಿಧ್ಯವನ್ನು ಮುನವಳ್ಳಿಯ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳವರು, ಬೈರನಟ್ಟಿಯ ದೊರೆಸ್ವಾಮಿ ಮಠದ ಶ್ರೀಶಾಂತಲಿಂಗ ಮಹಾಸ್ವಾಮಿಗಳವರು, ಚುಳಕಿಯ ( ಮಲ್ಲಾಪೂರ) ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳವರು ಹಾಗೂ ಬಾಗೋಜಿಕೊಪ್ಪದ ಹಿರೇಮಠದ ಶ್ರೀ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಲಿದ್ದಾರೆ.

ಅತಿಥಿಗಳಾಗಿ ಅಶೋಕ. ಮ. ಪಟ್ಟಣ ಜನಪ್ರಿಯ ಶಾಸಕರು ರಾಮದುರ್ಗ , ಮಲ್ಲಣ್ಣ. ಶಿ. ಯಾದವಾಡ ‘ ಅಧ್ಯಕ್ಷರು ‘ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಖಾನಪೇಠ ಮತ್ತು ಉಪಾಧ್ಯಕ್ಷ ಬಸನಗೌಡ. ಗೌ. ದ್ಯಾಮನಗೌಡರ , ಶಾಸನಗೌಡ. ಸಿ. ಪಾಟೀಲ ಹಾಲೊಳ್ಳಿ , ಎಸ್. ಜಿ. ಮಾಳವಾಡ ಉದ್ಯಮಿಗಳು ರಾಮದುರ್ಗ ಮತ್ತು ಎಸ್.ಎಸ್. ಢವನ ಕಟಕೋಳ ಮತ್ತೀತರರು ಪಾಲ್ಗೊಳ್ಳಲಿದ್ದಾರೆ.

ದಿ.4 ರಂದು ರಾತ್ರಿ ನಡೆಯುವ ಜಾಗರಣೆಯಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸುವ ಭಜನಾ ತಂಡ,ಡೊಳ್ಳಿನ ತಂಡ, ಕರಡಿ ಮಜಲು ಹಾಗೂ ಕೊಣ್ಣೂರಿನ ” ಜೈ ಕಿಸಾನ್ ಸಾಂಸ್ಕೃತಿಕ ಕಲಾವಿದರ ತಂಡದವರಿಂದ ಜಾನಪದ ನೃತ್ಯ ಪ್ರದರ್ಶನ ಜರುಗಲಿದೆ. ಮತ್ತು ” ಅಯ್ಯಾಚಾರ ಶಿವಧೀಕ್ಷೆ ” ಹೊಂದುವವರು ದಿ.4 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.
ಪ್ರತಿದಿನ ಕರ್ತೃ ಗದ್ದುಗೆಯ ರುದ್ರಾಭಿಷೇಕ ಕಾರ್ಯವು ಶ್ರೀಮಠದ ವೈಧಿಕರಿಂದ ನೆರವೇರುವುದು.
ಶುಕ್ರವಾರ ದಿ.5 ರಂದು ” ಮಣ್ಣೆತ್ತಿನ ಅಮಾವಾಸ್ಯೆಯಂದು ” ಬೆಳಿಗ್ಗೆ 6 ಗಂಟೆಗೆ ” ಅಯ್ಯಾಚಾರ ಶಿವಧೀಕ್ಷೆ ” ಕಾರ್ಯಕ್ರಮವು ಬನ್ನೂರು ಚಿಕ್ಕಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ನೆರವೇರಲಿದೆ.ಮುಂ.8 ಗಂಟೆಗೆ ” ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಡಾ. ಗುರು ಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಲಿಂ.ಶ್ರೀಗುರುವಿನ ಭಾವಚಿತ್ರದ ಮೆರವಣಿಗೆಯು ” ಸಕಲ ವಾದ್ಯ ವೃಂದಗಳ ಸಮೇತ ಊರ ಪ್ರಮುಖ ಬೀದಿಗಳಲ್ಲಿ ” ಸಂಚರಿಸಿ ಮರಳಿ ಶ್ರೀಮಠಕ್ಕೆ ಆಗಮಿಸುವದು.

ನಂತರ ಮುಂ. 10 ಗಂಟೆಗೆ ನೆರವೇರುವ ” ಮಂಗಲ ಸಮಾರಂಭದ ” ದಿವ್ಯಸಾನ್ನಿಧ್ಯವನ್ನು ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಶ್ರೀ. ಡಾ.ಗುರು ಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳವರು, ಯಕ್ಕುಂಡಿಯ ಶ್ರೀ ಕುಮಾರೇಶ್ವರ ವಿರಕ್ತಮಠದ ಶ್ರೀ ಪಂಚಾಕ್ಷರ ಮಹಾಸ್ವಾಮಿಗಳವರು, ತಾಳೀಕೋಟೆಯ ಖಾಸ್ಗತೇಶ್ವರ ಶ್ರೀಮಠದ ಶ್ರೀ ಸಿದ್ದಲಿಂಗ ದೇವರು ಮತ್ತು ಕಿತ್ತಲಿ ಸಿದ್ದರಾಮೇಶ್ವರ ಮಠದ ಶ್ರೀ ಮಂಜುನಾಥ ದೇವರು ವಹಿಸಲಿದ್ದಾರೆ.

ಕಾರ್ಯಕ್ರಮದ ಅತಿಥಿಗಳಾಗಿ ಜಗದೀಶ. ಶೆಟ್ಟರ, ಮಾಜಿ ಮುಖ್ಯ ಮಂತ್ರಿಗಳು ಹಾಗೂ ಲೋಕ ಸಭೆಯ ಸದಸ್ಯರು ಬೆಳಗಾವಿ , ಮಹಾದೇವಪ್ಪ. ಶಿ. ಯಾದವಾಡ, ಮಾಜಿ ಶಾಸಕರು ರಾಮದುರ್ಗ, ಶ್ರೀಮಂತ. ಸಂಜಯಸಿಂಹರಾವ. ಪ್ರ. ಶಿಂಧೆ , ಮಹರಾಜರು ಕಿಲ್ಲಾ ತೊರಗಲ್ಲ ಸಂಸ್ಥಾನ ,ಶ್ರೀ ವೇ.ಮೂ. ರಾಚಯ್ಯ ಕಳ್ಳಿಮಠ ಬಸರಗಿ, ಬಿ.ಎಂ.ತುಪ್ಪದ ಹಣಮಸಾಗರ, ಶ್ರೀ ವೇ.ಮೂ. ಚಂದ್ರಶೇಖರಯ್ಯ ಚುಳಕಿಮಠ, ಚುಳಕಿ, ಕರಬಸಯ್ಯ. ಆರ್. ಹಿರೇಮಠ ಕಾಕನೂರು, ಟಿ.ಪಿ. ಮುನವಳ್ಳಿ ಕಟಕೋಳ, ಉಮೇಶ. ಶಿರೋಳ ಹುಬ್ಬಳ್ಳಿ , ಉಮೇಶ. ಬ. ಚಿಕ್ಕಮಠ, ಎ.ಸಿ.ಪಿ ಪೋಲೀಸ ಇಲಾಖೆ ಹುಬ್ಬಳ್ಳಿ – ಧಾರವಾಡ ಮತ್ತು ಯರಝರವಿ ಹಾಗೂ ತ್ಯೆಗ್ಯಾಳ ಗ್ರಾಮದ ಸದ್ಭಕ್ತರು ಭಾಗವಹಿಸಲಿದ್ದಾರೆ. ನಂತರ ಮಹಾ ಪ್ರಸಾದದ ವಿತರಣೆಯ ಕಾರ್ಯಕ್ರಮ ಜರುಗುವುದು, ಕಾರಣ ಶ್ರೀಮಠದ ಸಮಸ್ತ ಸದ್ಭಕ್ತರು ” ಅಜ್ಜನ ಜಾತ್ರೆಗೆ ” ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಈ ಮೂಲಕ ಕೋರಲಾಗಿದೆ.

ಚಿತ್ರ / ವರದಿ ; ಮಹಾಂತೇಶ. ಬ. ಶಿದ್ದಿಭಾವಿ
ಮು, ಅಂಚೆ; ಕಿಲ್ಲಾ ತೊರಗಲ್ಲ ,
ತಾ. ರಾಮದುರ್ಗ , ಜಿ. ಬೆಳಗಾವಿ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group