ಮುಗಳಖೋಡದಲ್ಲಿ ಶ್ರೀಮನ್ ನಿಜಗುಣ ಶಿವಯೋಗಿ ಜಯಂತೋತ್ಸವ ದಿ 16 ರಂದ
ಮುಧೋಳ- ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ರವಿವಾರ ಮುಂಜಾನೆ 10.30 ಕ್ಕೆ ನಾಡಿನ ಶ್ರೇಷ್ಠ ತತ್ವಜ್ಞಾನಿ ಶ್ರೀಮನ್ ನಿಜಗುಣ ಶಿವಯೋಗಿಗಳ ಜನ್ಮ ಜಯಂತ್ಯುತ್ಸವ ಹಾಗೂ 122 ನೇ ರವಿವಾರದ ಸತ್ಸಂಗ, ಆರೂಢರ ಅಭಿಷೇಕ ಕಾರ್ಯಕ್ರಮವು ನಡೆಯಲಿದೆ.
ಈ ಸಮಾರಂಭದ ಸನ್ನಿಧಾನವನ್ನು ಕುಳಲಿಯ ಗುರುನಾಥಾರೂಢರ ಮಠದ ದಾಸೋಹ ರತ್ನ.ಪೂಜ್ಯ ಶ್ರೀ ಶಂಕರಾನಂದ ಶ್ರೀಗಳು ವಹಿಸುವರು. ಹೊಸುರ ಗ್ರಾಮದ ಪರಮಾನಂದ ಶ್ರೀಗಳು ಸಮ್ಮುಖತ್ವ ವಹಿಸುವರು.
ಭೀಮಾವಧೂತರ ಮಠದ ಪಂಚಾಕ್ಷರಿ ಶ್ರೀಗಳು ನೇತೃತ್ವ ವಹಿಸುವರು.ಗುರು ಪರಂಪರೆಯ ಹಿರಿಯ ಸೇವಾ ಧುರೀಣ ಶಿವಪ್ಪ ಗೌಡ್ರು ಪವಾಡಶಟ್ಪಿ [ಪೋಲಿಸ್ ಗೌಡ] ಹಾಗೂ ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಪ್ರತಿಷ್ಠಾನದ ಅಧ್ಯಕ್ಷ ಪ.ಪೂ.ಶರಣಬಸವ ಶಾಸ್ತ್ರಿಗಳು ಸಭೆಯ ಅಧ್ಯಕ್ಷತೆ ವಹಿಸುವರು.
ಈ ಸಂದಭ೯ದಲ್ಲಿ ಭಜನೆ, ತತ್ವಪದಗಳ ಗಾಯನ ಜರುಗುವುದು. ನಂತರ 2025 ರ. “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” ಪುರಸ್ಕೃತೆ ಜನಪದ ಸಂಗೀತ ಕ್ಷೇತ್ರದ ಸೇವಕರಾದ ಶ್ರೀಮತಿ ಶ್ಯಾಮಲಾ ಲಕ್ಷ್ಮೇಶ್ವರ ಅವರಿಗೆ ಗೌರವ ಸಮರ್ಪಣೆ ಮಾಡಲಾಗುವದು ಎಂದು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡರಾದ ನಿಂಗನಗೌಡ ಮಂಟೂರ ಹಾಗೂ ಶಂಕರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

