ಸಿಂದಗಿ: ತಾಲೂಕಿನ ಬಳಗಾನೂರು ಗ್ರಾಮದಲ್ಲಿ ವ್ಯಕ್ತಿ ಒಬ್ಬ ಜಿಯೋ ಟವರ್ ಕಂಬದ ಮೇಲೆ ಹತ್ತಿ ಹುಚ್ಚಾಟ ಮೆರೆದ ಘಟನೆ ನಡೆದಿದೆ.
ಜು. 08 ರಂದು ಮಧ್ಯಾಹ್ನ 1.30 ಗಂಟೆಯಿಂದ 2.30 ಗಂಟೆಯವರೆಗೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಜಿಯೋ ಟಾವರ್ ಕಂಬದ ಮೇಲೆ ತೆಗ್ಗಿಹಳ್ಳಿಯ ಸತೀಶ ತಂದೆ ಚಂದ್ರಶೇಖರ ಕಡಣಿ ಎಂಬ 25 ವರ್ಷದ ಯುವಕ ತನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಿ ನಗ್ನವಾಗಿ ಟಾವರ ಕಂಬದ ತುದಿಯ ಮೇಲೆ ಹತ್ತಿ ಸಾಯುತ್ತೇನೆ ಎಂದು ಕೂಗಾಡುತ್ತಾ ಹುಚ್ಚಾಟ ಮಾಡಿದ್ದಾನೆ.
ನಂತರ ಸದರ ಘಟನೆ ಸ್ಥಳಕ್ಕೆ ಆಲಮೇಲ ಪೊಲೀಸರು ಸ್ಥಳಕ್ಕೆ ಬಂದು ಯುವಕನನ್ನು ಕೆಳಗೆ ಇಳಿಸಿರುತ್ತಾರೆ. ಈತ ಮಾನಸಿಕ ಅಸ್ವಸ್ಥ ಎಂಬುದಾಗಿ ತಿಳಿದು ಬಂದಿರುತ್ತದೆ.