ಸಿಂದಗಿ: ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿಯನ್ನು ಸೇರಿದ ಯುವ ಪಡೆ

Must Read

ಸಿಂದಗಿ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು ಮಾದಿಗ ಸಮಾಜದ 6 ನೆ ವಾರ್ಡಿನ ಯುವಕರು, ಆಕಾಶ ಇಂಗಳಗಿಯವರ ನೇತೃತ್ವದಲ್ಲಿ ಮತ್ತು ಮುಸ್ಲಿಂ ಸಮುದಾಯದ 3 ಮತ್ತು 4 ನೇ ವಾರ್ಡಿನ ಯುವಕರು, ಫೈಜಾನ ಮಾಣಗಾಂವಕರ, ರಫೀಕ್ ಅರಳಗುಂಡಗಿ ಅವರ ನೇತೃತ್ವದಲ್ಲಿ ಎಲ್ಲರೂ ಭಾರತೀಯ ಜನತಾ ಪಾರ್ಟಿ ಬಿಜೆಪಿಯನ್ನು ಸೇರ್ಪಡೆಯಾದರು.

ಭಾರತೀಯ ಜನತಾ ಪಾರ್ಟಿಯ ಪಕ್ಷ ಸಿದ್ದಾಂತವನ್ನು ಒಪ್ಪಿ, ರಮೇಶ ಬಾ ಭೂಸನೂರ ರವರ ಅಭಿವೃದ್ದಿ ಕಾರ್ಯಗಳನ್ನು ನೋಡಿದ ಯುವ ಪಡೆ, ಅವರ ಮೇಲಿನ ಅಭಿಮಾನಕ್ಕೆ ಮತ್ತು ಅವರು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಮನಸೋತು ಬಿಜೆಪಿ ಪಕ್ಷ ಸೇರ್ಪಡೆ ಯಾದರು. 

ಈ ಸಂದರ್ಭದಲ್ಲಿ ಆರ್ ಎಸ್ ಕುಚಬಾಳ.(ಬಿಜೆಪಿ ಜಿಲ್ಲಾ ಅಧ್ಯಕ್ಷರು) ಈರಣ್ಣ ರಾವುರ (ಬಿಜೆಪಿ ಮಂಡಲ ಅಧ್ಯಕ್ಷರು ಸಿಂದಗಿ) ಪ್ರಕಾಶ್ ಅಕ್ಕಲಕೋಟ್‌ಜಿ (ಬೆಳಗಾವಿ ವಿಭಾಗದ ಮಹಾ ಮಂತ್ರಿಗಳು) ಸಿದ್ದು ಪೂಜಾರಿ (ಎಸ್ಸಿ ಮೋರ್ಚಾ ಅಧ್ಯಕ್ಷರು ಸಿಂದಗಿ) ಅಯುಬ್ ದೇವರ ಮನಿ  ಗುರು ತಳವಾರ, ಶ್ರೀಶೈಲ ಕಬ್ಬಿನ, ರಾಜಕುಮಾರ ಭಾಸಗಿ, ಯಲ್ಲು ಇಂಗಳಗಿ, ಅನಿಲ ನಾಯ್ಕ ಅರವಿಂದ್ ಹಡಗಲಿ, ಶಿವಕುಮಾರ ಬಿರಾದಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Latest News

ಸ ರಾ ಸುಳಕೂಡೆ ಅವರ ಎರಡು ಸಂಪ್ರತಿ ವಚನಗಳು, ಸಂಭೃತ ವಚನಗಳು ಲೋಕಾಪ೯ಣೆ

ಬೆಳಗಾವಿ - ಚಿಂತನ ಚಾವಡಿ ವತಿಯಿಂದ ಗುರುವಾರ ದಿ. 18.12.2025 ರಂದು ಮುಂಜಾನೆ 11.30 ಕ್ಕೆ ಲಕ್ಷೀ ಪ್ರಿಂಟಸ೯ ಅಟೋನಗರ ಬೆಳಗಾವಿಯಲ್ಲಿ ಸ . ರಾ....

More Articles Like This

error: Content is protected !!
Join WhatsApp Group