spot_img
spot_img

Sindagi: ಹಡಪದ ಅಪ್ಪಣ್ಣ ಜಯಂತ್ಯುತ್ಸವ ಆಚರಣೆ

Must Read

spot_img
- Advertisement -

ಸಿಂದಗಿ: ಹಡಪದ ಸಮಾಜದ ಜನ ಮಾನವೀಯತೆಯ ನೆಲಗಟ್ಟಿನ ಮೇಲೆ ಬಸವ ತತ್ವದ  ಮಾರ್ಗದಲ್ಲಿ ಬದುಕುವಂತಹ ಜನ. ಕಾಯಕದಲ್ಲಿ ಕೈಲಾಸ ಕಂಡ, ನಿಜಸುಖಿ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವವು ಜಯಂತಿಗೆ ಸೀಮಿತವಾಗದೇ ನಮಗೆಲ್ಲ ಮಾದರಿಯಾಗಬೇಕು ಯಾವುದೇ ಒಂದು ಕಾರ್ಯಕ್ರಮ ಬರೀ ಉಪನ್ಯಾಸವಾಗಬಾರದು ಎಂದು ಸಿ.ಎಂ.ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಹೇಳಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾ ಆಡಳಿತ ಮಂಗಳವಾರ ಹಮ್ಮಿಕೊಂಡ ಹಡಪದ ಅಪ್ಪಣ್ಣನವರ 889ನೇ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ,ಎಲ್ಲ ಸಮಾಜದಲ್ಲಿ ಬೆರೆತು ನಡೆಯುವ ಈ ಹಡಪದ ಸಮಾಜ ಒಂದಾಗಿದೆ. ವಿರಶೈವ ಲಿಂಗಾಯತದಲ್ಲಿ ಸುಮಾರು 60 ರಿಂದ 90 ಪಂಗಡಗಳಿವೆ ಇವುಗಳನ್ನು ಒಟ್ಟಾಗಿ ಕೂಡಿಸುವ ಶಕ್ತಿ ವೀರಶೈವ ಲಿಂಗಾಯತಕ್ಕಿದೆ. ಸಮಾಜದಲ್ಲಿನ ಮೌಢ್ಯತೆ, ಕಂದಾಚಾರ ತೊಡೆದು ಹಾಕುವಲ್ಲಿ ಹಾಗೂ ಸ್ವಾಸ್ಥ ಸಮಾಜ ನಿರ್ಮಿಸಲು ಹಡಪದ ಅಪ್ಪಣ್ಣನವರು ಕಾಯಕದ ಜೊತೆಗೆ ತಮ್ಮ ವಚನದ ಮೂಲಕ ಜಗದಗಲಕ್ಕೂ ಸಂಚರಿಸಿ ಸಾರಿ ಹೇಳಿದ್ದಾರೆ. ಇಂತಹ ಶರಣರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.

- Advertisement -

ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಹಡಪದ ಮಾತನಾಡಿ, ಹಡಪದ ಅಪ್ಪಣ್ಣನವರು ವಿಶ್ವಜ್ಯೋತಿ ಬಸವಣ್ಣವರು ಕಾಯಕಯೋಗಿ ಅನಿಸಿಕೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ ಅವರ ವಂಶಸ್ಥರಾದ ನಾವುಗಳು ತತ್ವಗಳನ್ನು ಮೈಗೂಡಿಸಿಕೊಂಡು ಶಿಕ್ಷಣವಿದ್ದರೆ ಮಾತ್ರ ಎಲ್ಲವನ್ನು ಸಾಧಿಸಲು ಸಾಧ್ಯ ಕಾರಣ  ಮಕ್ಕಳಿಗೆ ಶಿಕ್ಷಣ ನೀಡಿದ್ದಾದರೆ ಶರಣರ ವಚನಗಳನ್ನು ಮೆಲಕು ಹಾಕಿದಂತಾಗುತ್ತದೆ ಅಲ್ಲದೆ ಒಳ್ಳೆಯ ಸಂಸ್ಕಾರ ಬೆಳೆಯುತ್ತದೆ ಎಂದು ಹೇಳಿದರು. 

ತಹಶೀಲ್ದಾರ ನಿಂಗಣ್ಣ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾ ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ಮಹಾಂತೇಶ ಮೂಲಿಮನಿ ಹಾಗೂ ಇತರರು ವೇದಿಕೆ ಮೇಲಿದ್ದರು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ ಅಮಲಿಹಾಳ, ಮಂಜುನಾಥ ಹಡಪದ, ಚಂದ್ರಕಾಂತ ಹಡಪದ, ಚಿದಾನಂದ ಹಡಪದ, ಪರಶುರಾಮ ಹಡಪದ, ಪರಮಣ್ಣ ಹಡಪದ, ಮಡಿವಾಳ ಹಡಪದ,  ಮಲ್ಲು ಗೋಲಗೇರಿ, ಸಿದ್ರಾಮ ನಾಗಾವಿ, ರಾಜು ನಾವಿ, ಜಟ್ಟೇಪ್ಪ ಬಂಕಲಗಿ, ಕಂಟೇಪ್ಪ ಹಡಪದ, ಗುರುಲಿಂಗಪ್ಪ ಹಡಪದ, ಶಂಕರ ಕೊಂಡಗೂಳಿ, ಪ್ರವೀಣ ಹಡಪದ, ಬಾಗಣ್ಣ ಹಡಪದ, ಉಮೇಶ ಸಿಂದಗಿ, ಬಾಗೇಶ ದೇವುರ, ಶಿವಶರಣ ಸಿಂದಗಿ, ಶಿವಶಂಕರ ಯರಗಲ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

- Advertisement -

ಶಿರಸ್ತೆದಾರ ಸುರೇಶ ಮ್ಯಾಗೇರಿ ಸ್ವಾಗತಿಸಿ, ವಂದಿಸಿದರು.

- Advertisement -
- Advertisement -

Latest News

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಮಹತ್ತರವಾದುದು – ಸಿದ್ಧಲಿಂಗ ಕಿಣಗಿ

ಸಿಂದಗಿ; ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group