ಸಿಂದಗಿ: ನಗರದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢ ಶಾಲೆಯ “ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ” ( ಎಸ್ ಡಿ ಎಂ ಸಿ)ನೂತನ ಅಧ್ಯಕ್ಷರಾಗಿ ಹಾಜಿಮಲಂಗ್.ಎಚ್. ಆಲಮೇಲ ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮೀ ಜಟ್ಟು ಹರಿಜನ್ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಶ್ರೀಮತಿ ಅಂಬು ಅಪ್ಪಾಸಾಬ ಉಡಚಾಣ, ರೇಣುಕಾ ಯಶವಂತ ನಾರಾಯಣಕರ್, ಜಗದೇವಿ ಮಡಿವಾಳಯ್ಯ ಮಠ , ಶರಣಪ್ಪ ಮಲ್ಲೇಶಪ್ಪ ದೊಡ್ಡಮನಿ, ನಿಂಗಪ್ಪ ಶಂಕ್ರಪ್ಪ ಖಾನಾಪುರ್, ಸೋಮವ್ವ ಮಾದರ ಜ್ಯೋತಿ ಶಿವಪ್ಪ ಹರಿಜನ. ಇವರುಗಳನ್ನು ಎಸ್ ಡಿ ಎಂ ಸಿ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಶಾಲೆಯ ಮುಖ್ಯಗುರು ಶಿವಾನಂದ ಶಹಾಪುರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಲಾಖಾ ನಿಯಮ ಮತ್ತು ಮಾರ್ಗಸೂಚಿ ಅನ್ವಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಅವಿರೋಧವಾಗಿ ರಚಿಸಲಾಯಿತು. ಮಾರ್ಗದರ್ಶಕರಾಗಿ ಬಂದ ಸರಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ ಅಲಮೇಲ್ ಶಾಲೆಯ ಮುಖ್ಯ ಗುರುಗಳಾದ ರವಿ ಹೊಸಮನಿ ಅವರಿಗೆ ಮತ್ತು ಈ ಸಮಿತಿ ರಚನೆಯ ಯಶಸ್ವಿಗೆ ಕಾರಣೀಭೂತರಾದ ಎಲ್ಲಾ ಆತ್ಮೀಯ ಪಾಲಕ ಬಂಧುಗಳಿಗೆ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಮತ್ತು ಇಲಾಖೆಯ ಪ್ರತಿನಿಧಿಗಳಾಗಿ ಬಂದ ಶಿಕ್ಷಣ ಸಂಯೋಜಕರಾದ ಆನಂದ್ ಮಾಡಗಿ ಶಾಲಾ ಸಿಬ್ಬಂದಿ ವರ್ಗ,ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದರು.
ಆಯ್ಕೆಯಾದ ಸದಸ್ಯರಲ್ಲಿ ಸೂಚಕರು, ಅನುಮೋದಕರ ಸೂಚನೆಯಂತೆ, ಅಧ್ಯಕ್ಷರಾಗಿ ಹಾಜಿಮಲಂಗ, ಎಚ್.ಆಲಮೇಲ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮೀ ಜಟ್ಟು ಹರಿಜನ್ ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಶ್ರೀಮತಿ ಅಂಬು ಅಪ್ಪಾಸಾಬ ಉಡಚಾಣ, ರೇಣುಕಾ ಯಶವಂತ ನಾರಾಯಣಕರ್, ಜಗದೇವಿ ಮಡಿವಾಳಯ್ಯ ಮಠ , ಶರಣಪ್ಪ ಮಲ್ಲೇಶಪ್ಪ ದೊಡ್ಡಮನಿ, ನಿಂಗಪ್ಪ ಶಂಕ್ರಪ್ಪ ಖಾನಾಪುರ್, ಸೋಮವ್ವ ಮಾದರ ಜ್ಯೋತಿ ಶಿವಪ್ಪ ಹರಿಜನ. ಇವರುಗಳನ್ನು ಎಸ್ ಡಿ ಎಂ ಸಿ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಶಾಲೆಯ ಮುಖ್ಯಗುರುಗಳಾದ ಶಿವಾನಂದ ಶಹಾಪುರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಆಯ್ಕೆಯಾದ ಪದಾಧಿಕಾರಿಗಳಿಗೆ ಮುಖ್ಯ ಗುರುಗಳು ಸನ್ಮಾನಿಸುವುದರ ಮೂಲಕ ಅಭಿನಂದಿಸಿದರು.