- Advertisement -
ಸಿಂದಗಿ: ವೈದ್ಯಲೋಕದ ಅಪ್ರತಿಮ ಸಾಧಕರಿಗೆ ನೀಡುತ್ತಿರುವ “ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿಗೆ ಟಿಎಸ್‍ಪಿ ಮಂಡಳಿಯ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಚೇರಮನ್‍ರು ಹಾಗೂ ಮನಗೂಳಿ ಆಸ್ಪತ್ರೆಯ ಮುಖ್ಯಸ್ಥ ಡಾ. ಶಾಂತವೀರ ಮನಗೂಳಿರವರು ಭಾಜನರಾಗಿದ್ದಾರೆ.
ಕರ್ನಾಟಕದ ಪ್ರತಿಷ್ಠಿತ ದಿನಪತ್ರಿಕೆ ಕನ್ನಡಪರ ಹಾಗೂ ಸುದ್ದಿವಾಹಿನಿ ಏಷ್ಯಾನೆಟ್ ಸುವರ್ಣನ್ಯೂಸ್ ಸಂಸ್ಥೆ ವತಿಯಿಂದ ವೈದ್ಯ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿ ಜುಲೈ 29 ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ “ದಿ ಲಲಿತ್ ಅಶೋಕ್ ಹೋಟೆಲ್, ಕುಮಾರ ಕೃಪ ರಸ್ತೆ, ಗಾಲ್ಫ್ ಕ್ಲಬ್ ಎದುರು ನಡೆಯಲಿರುವ ಪ್ರಶಸ್ತಿ ಸಮಾರಂಭದಲ್ಲಿ “ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿ-2023″ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ.