ಸಿಂದಗಿ: ಕೊರೋನಾ ಎರಡನೆ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ವೀಕೆಂಡ್ ಲಾಕಡೌನ್ ಗೆ ಸಿಂದಗಿ ರವಿವಾರ ಸಂಪೂರ್ಣ ಸ್ತಬ್ಧವಾಗಿತ್ತು.
ವಾರದ ಸಂತೆ ಇದ್ದರು ಕೂಡಾ ತಾಲೂಕಿನ ಯಾವುದೇ ಬಾಗದಿಂದ ತರಕಾರಿ, ಹಾಲು, ಮೊಸರು ತೆಗೆದುಕೊಂಡು ಬೆಳಿಗ್ಗೆಯೇ ಪಟ್ಟಣಕ್ಕೆ ಆಗಮಿಸುತ್ತಿರುವ ಸುತ್ತಮುತ್ತಲಿನ ಗ್ರಾಮಗಳ ರೈತರು ಆಗಮಿಸದೇ ಸರಕಾರದ ನಿಯಮ ಪಾಲನೆ ಮಾಡಿದ್ದಾರೆ. ಅಲ್ಲದೆ ಪಟ್ಟಣದಲ್ಲಿ ಸರಕಾರ ನಿಗದಿ ಪಡಿಸಿದ ಸಮಯಕ್ಕನುಗುಣವಾಗಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಹಾಲು, ತರಕಾರಿ ಸೇರಿದಂತೆ ದಿನಸಿ ವಸ್ತುಗಳನ್ನು ತೆಗೆದುಕೊಂಡು ಸರಕಾರದ ಆದೇಶಕ್ಕೆ ಮನ್ನಣೆ ನೀಡಿದ್ದಾರೆ.
ಪಟ್ಟಣದ ಪ್ರಮುಖ ರಸ್ತೆಗಳಾದ ಬಸ್ ನಿಲ್ದಾಣ, ಲಿಂ ಜಗದ್ಗುರು ತೋಂಟದ ಡಾ.ಸಿದ್ದಲಿಂಗ ಸ್ವಾಮೀಜಿ ರಸ್ತೆ, ಶ್ರೀ ಸ್ವಾಮಿ ವಿವೇಕಾನಂದ ರಸ್ತೆ, ಶ್ರೀ ಬಸವೇಶ್ವರ ವೃತ್ತ, ಬಂದಾಳ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಯಾವುದೇ ವಾಹನವಿಲ್ಲದೆ ಖಾಲಿ ಖಾಲಿ ಆಗಿದ್ದವು. ಆಸ್ಪತ್ರೆಗಳು, ದಿನಸಿ ಅಂಗಡಿಗಳು ಮತ್ತು ಔಷಧ ಅಂಗಡಿಗಳು ಹೊರತು ಪಡಿಸಿ ಉಳಿದ ಎಲ್ಲ ಅಂಗಡಿಗಳು ಲಾಕ್ ಆಗಿದ್ದವು. ಎಂದಿನಂತೆ ಬಸ್ಸುಗಳ ಸಂಚಾರವಿತ್ತು.
ಖಾಸಗಿ ವಾಹನಗಳ ಸಂಚಾರ ವಿರಳವಾಗಿತ್ತು. ಪೊಲೀಸ್ ಸಿಬ್ಬಂದಿ ವಿನಾಕಾರಣ ತಿರುಗಾಡುತ್ತಿರುವವರಿಗೆ ಚಳಿ ಬಿಡಿಸುತ್ತಿರುವುದು ಕಂಡು ಬಂದಿತು. ಬೆಳಿಗ್ಗೆ ಸುಮಾರು 2 ಗಂಟೆ ತರಕಾರಿ ಮಾರಾಟಕ್ಕೆ ಅವಕಾಶವಿತ್ತು ನಂತರ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಅಡ್ಡಾಡುವುದು ಕಡಿಮೆ ಮಾಡಿದರು. ಸರ್ಕಾರದ ನಿಯಮವನ್ನು ಸಿಂದಗಿ ಕಟ್ಟು ನಿಟ್ಟಾಗಿ ಪಾಲನೆ ಮಾಡಿದೆ ಎನ್ನಲಾಗಿದೆ. ಪ್ರತಿ ರಸ್ತೆಗಳಲ್ಲಿ ಪೋಲಿಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಪಟ್ಟಣದಲ್ಲಿ ಕೊವಿಡ್-19 ತೀವ್ರತರ ಹರಡುತ್ತಿದ್ದು ಸಾರ್ವಜನಿಕರು ಕೆಮ್ಮು, ನೆಗಡಿ, ಬಾಯಿ ವಗುರಾಗುವುದು, ಜ್ವರ ಕಾಣಿಸಿಕೊಂಡರೆ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಳ್ಳಬೇಕು ಮತ್ತು ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಸಾಮಾಜಿಕ ಅಂತರ ಕಾಪಾಡಬೇಕು ಇದರಿಂದ ಸರಕಾರದ ಆದೇಶ ಪಾಲನೆ ಮಾಡಿದಂತಾಗುತ್ತದೆ ಮತ್ತು ವೈದ್ಯರಿಗೆ ಸಹಕರಿಸಿದಂತಾಗುತ್ತದೆ.
-ಡಾ. ಆರ್.ಎಸ್.ಇಂಗಳೆ
ತಾಲೂಕಾ ಆರೋಗ್ಯಾಧಿಕಾರಿಗಳು.
ಮಹಾಮಾರಿ ಕೊವಿಡ್-19 ಎರಡನೇ ಅಲೆ ಹತೋಟಿಗೆ ಬರುತ್ತಿಲ್ಲ ಸಾರ್ವಜನಿಕರು ವಿನಾಕಾರಣ ಹೊರಗಡೆ ತಿರುಗಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಇದ್ದು ಕಾರಣ ಮನೆಯಲ್ಲಿಯೇ ಇದ್ದು ವೈದ್ಯರಿಗೆ ಹಾಗೂ ಸರಕಾರಕ್ಕೆ ಸಹಕಾರ ನೀಡಬೇಕು.
-ಮುತ್ತು ಶಾಬಾದಿ, ಅಸಂಘಟಿತ ಕಾರ್ಮಿಕ ಒಕ್ಕೂಟದ ಜಿಲ್ಲಾ ಸಂಚಾಲಕರು.