ಸುಲಿಗೆ ಪ್ರಕರಣ ಭೇದಿಸಿದ ಸಿಂದಗಿ ಪೊಲೀಸರು

Must Read

ಸಿಂದಗಿ; ೨೭.೧೧.೨೦೨೪ ರಂದು ನಸುಕಿನಲ್ಲಿ ಯಂಕಂಚಿ ಗ್ರಾಮದ ಶ್ರೀಮತಿ ಸಾತವ್ವ ವಿಠಲ ಕಂಬಾರ ನಿವೃತ್ತ ಶಿಕ್ಷಕಿ ಇವರು ತಮ್ಮ ಮನೆಯಲ್ಲಿ ಮಲಗಿದ್ದಾಗ ಯಾರೋ ಇಬ್ಬರು ಮನೆಯೊಳಗೆ ನುಗ್ಗಿ, ಜೀವ ಬೆದರಿಕೆ ಹಾಕಿ ಅವರಿಂದ ೬,೦೦೦/- ನಗದು ಹಣ, ೫೦ ಗ್ರಾಂ ನ ಬಂಗಾರದ ೦೨ ಬಳೆಗಳು (ಪಾಟಲಿ), ೫೦ ಗ್ರಾಂ ನ ಬಂಗಾರದ ೦೪ ಬಳೆಗಳು (ಬಿಲ್ವರ್), ಒಟ್ಟು ೬ ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದ ಬಗ್ಗೆ ಸಿಂದಗಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು ಆ ಪ್ರಕರಣವನ್ನು ಬೇದಿಸಿ ಸುಲಿಗೆ ಮಾಡಿದ್ದ ೭೦ ಗ್ರಾಂ ಬಂಗಾದ ಆಭರಣಗಳು ಹಾಗೂ ೦೩ ಕಂಟ್ರಿ ಪಿಸ್ತೂಲ್ ೧೨ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಐಪಿಎಸ್ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲಕ್ಷ್ಮಣ ನಿಂಬರಗಿ, ಐಪಿಎಸ್ ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಹಾಗೂ ಜಗದೀಶ ಎಚ್.ಎಸ್, ಡಿಎಸ್‌ಪಿ ಇಂಡಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ ನೇತೃತ್ವದಲ್ಲಿ ಸಿಂದಗಿ ಪೊಲೀಸ್ ಠಾಣೆಯ ಪಿಎಸ್‌ಐ ಆರೀಫ್ ಮುಶಾಪುರಿ, ಎಎಸ್‌ಐ ಜೆ.ಎಸ್.ಗಲಗಲಿ ಹಾಗೂ ಸಿಬ್ಬಂದಿಗಳಾದ ಆರ್.ಎಲ್.ಕಟ್ಟಿಮನಿ, ಪಿ.ಕೆ.ನಾಗರಾಳ, ಎಸ್.ಎನ್.ಬಿರಾದಾರ, ಎಂ.ಎಚ್.ಹೊಸಮನಿ, ವಾಯ್.ಕೆ, ಉಕುಮನಾಳ, ಪಿ.ಕೆ.ಗೊರವಗುಂಡಗಿ, ಉಮೇಶ ನನಶೆಟ್ಟಿ, ಬಿ. ಎನ್.ಕೊಳೂರ, ಎಚ್.ಟಿ.ಗೋಡೆಕರ, ಎಸ್.ಎಸ್.ಕೊಂಡಿ, ಬಿ.ಜಿ.ಮುಳಸಾವಳಗಿ ಇವರನ್ನೊಳಗೊಂಡ ವಿಶೇಷ ತನಿಖಾ ತಂಡವು ಏ. ೩೦ ರಂದು ೨೦೨೫ ರಂದು ಬೆಳಿಗ್ಗೆ ೦೭:೦೦ ಗಂಟೆ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಚಾಂದಕವಟೆ ಗ್ರಾಮದ ಹತ್ತಿರ ಆರೋಪಿ ಪ್ರಶಾಂತ ಸಿದ್ದಾರಾಮ ನಾವಿ ದೇವರ ನಿಂಬರಗಿ ಈತನನ್ನು ವಶಕ್ಕೆ ಪಡೆದಿರುತ್ತಾರೆ.

ಸದರಿ ಆರೋಪಿತನ ಅಂಗ ಶೋಧನೆ ಮಾಡಿದಾಗ ಆತನ ಬಳಿ ೦೧ ಕಂಟ್ರಿ ಪಿಸ್ತೂಲ್ ಹಾಗೂ ೦೪ ಸಜೀವ ಗುಂಡುಗಳು ದೊರೆತಿರುತ್ತವೆ. ಆರೋಪಿತನಿಗೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಯಂಕಂಚಿ ಗ್ರಾಮದಲ್ಲಿ ಸುಲಿಗೆ ಮಾಡಿದ ಬಂಗಾರದ ಆಭರಣಗಳನ್ನು ಇಂಡಿ ಮುತ್ತೂಟ್ ಫೈನಾನ್ಸ್ ಹಾಗೂ ಡಿಸಿಸಿ ಬ್ಯಾಂಕ್‌ನಲ್ಲಿ ಅಡ ಇಟ್ಟಿರುವುದಾಗಿ ಅಲ್ಲದೇ ಮಧ್ಯಪ್ರದೇಶ ರಾಜ್ಯದಿಂದ ಇನ್ನೂ ೦೨ ಕಂಟ್ರಿ ಪಿಸ್ತೂಲ್‌ಗಳನ್ನು ತಂದಿದ್ದು, ಅವುಗಳನ್ನು ಮುಚ್ಚಿ ಇಟ್ಟಿರುವುದಾಗಿ ಮಾಹಿತಿ ನೀಡಿರುತ್ತಾನೆ.

ಆರೋಪಿತನ ಹತ್ತಿರ ಅಂಗ ಶೋಧನೆ ಕಾಲಕ್ಕೆ ಅಕ್ರಮ ಶಸ್ತ್ರಾಸ್ತ್ರ ದೊರೆತಿದ್ದರಿಂದ ಆತನ ಮೇಲೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: ೧೧೯/೨೦೨೫ ಕಲಂ: ೨೫(ಎ) ಆರ್ಮ್ ಆ್ಯಕ್ಟ್-೧೯೫೯ ಅಡಿ ಪ್ರತ್ಯೇಕ ದೂರು ದಾಖಲಿಸಲಾಗಿದೆ. ಸುಲಿಗೆ ಪ್ರಕರಣದಲ್ಲಿ ತನಿಖೆ ಕೈಕೊಂಡು ಇಂಡಿ ಮುತ್ತೂಟ್ ಫೈನಾನ್ಸ್ ಹಾಗೂ ಡಿಸಿಸಿ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ೫೦ ಗ್ರಾಂ ನ ಬಂಗಾರದ ೨ ಬಳೆಗಳು (ಪಾಟಲಿ), ೨೦ ಗ್ರಾಂ ನ ಬಂಗಾರದ ೨ ಬಳೆಗಳು (ಬಿಲ್ವರ್) ಒಟ್ಟು ೭೦ ಗ್ರಾಂ ಬಂಗಾರದ ಆಭರಣಗಳನ್ನು ಜಪ್ತಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನಂತರ ಹೆಚ್ಚಿನ ವಿಚಾರಣೆಗಾಗಿ ಆರೋಪಿತನಿಗೆ ಪೊಲೀಸ್ ಕಸ್ಟಡಿಗೆ ಪಡೆದು ಆತನ ಹೇಳಿಕೆ ಆಧಾರದ ಮೇಲೆ ದೇವರ ನಿಂಬರಗಿ ಗ್ರಾಮದ ಆತನ ಮನೆಯಲಿ ಮುಚ್ಚಿಟ್ಟಿದ್ದ ೦೨ ಕಂಟ್ರಿ ಪಿಸ್ತೂಲ್ ಹಾಗೂ ೦೮ ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group