ಸಿಂದಗಿ : ವೃತ್ತಿಪರ ಸಮಾಜಕಾರ್ಯ ಸಂಘ (ರಿ) ಕರ್ನಾಟಕ ಸಂಘಟನೆಯ ವಿಜಯಪುರ ಜಿಲ್ಲೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಮಹಾಂತೇಶ ನೂಲಾನವರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೌರವ ಸಲಹೆಗಾರರನ್ನಾಗಿ ರಾಜಕುಮಾರ ರುದ್ರಪ್ಪನವರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಲ್ಲಪ್ಪ ನಂದರಗಿ, ಜಿಲ್ಲಾ ಉಪಾಧ್ಯಕ್ಷರಾಗಿ ಮುತ್ತಪ್ಪ ಬಾಗೇವಾಡಿ, ಸಹಕಾರ್ಯದರ್ಶಿಯಾಗಿ ಅಶೋಕಕಾಳೆ, ಖಜಾಂಚಿಯಾಗಿ ಬಸವರಾಜ ಬಿರಾದಾರ, ಜಿಲ್ಲಾ ಸಂಯೋಜಕರಾಗಿ ಗಂಗಾಧರ ಪವಾಡಶೆಟ್ಟಿ, ನಿರ್ದೇಶಕರಾಗಿ ಮಲ್ಲಮ್ಮ ಹಡಪದ, ರಾವುತಪ್ಪ ಮರಬಿ, ರೇಣುಕಾ ಪಾಟೀಲ, ಸೋಮನಿಂಗ ಬಿರಾದಾರ ಮತ್ತು ಗಾಯತ್ರಿ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ ಇಂದಿನ ಸಮಾಜದಲ್ಲಿ ಸಮಾಜ ಕಾರ್ಯದ ಅವಶ್ಯಕತೆಯೂ ತುಂಬಾ ಇದ್ದು ಅದರ ಮಾಹಿತಿಯ ಕೊರತೆಯಿಂದಾಗಿ ಬೆಳಕಿಗೆ ಬರುತ್ತಿಲ್ಲ. ಈಗಾಗಲೇ ಹಲವಾರು ಸಂಘಟನೆಗಳಲ್ಲಿ ಕ್ರಿಯಾಶೀಲವಾಗಿರುವ ಸದಸ್ಯರು ಈ ಸಂಘದಲ್ಲಿ ಆಯ್ಕೆಯಾದ ಕಾರಣ ಮುಂದಿನ ದಿನಮಾನಗಳಲ್ಲಿ ಸಮಾಜ ಕಾರ್ಯದ ಏಳಿಗೆಗೆ ಶ್ರಮಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.