ಸಿಂದಗಿಗೆ ಮಾದರಿ ಉದ್ಯಾನವನ – ಮನಗೂಳಿ

Must Read

ಸಿಂದಗಿ: ಪುರಸಭೆ ವ್ಯಾಪ್ತಿಯಲ್ಲಿ ಬರುವ ನಗರಗಳಿಗೆ ಫ್ರೀ ಪಾರ್ಕ್ ಎಂದು ಕಾಂಗ್ರೆಸ್ ಸರಕಾರ ರೂ 2 ಕೋಟಿ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಆ ಅನುದಾನವನ್ನು ಈ ಫ್ರಿ ಪಾರ್ಕ್‍ಗೆ ಖರ್ಚು ಮಾಡುವ ಮೂಲಕ ಕೇವಲ 6 ತಿಂಗಳಲ್ಲಿ ಅತ್ಯುತ್ತಮ ಮತ್ತು ಮಾದರಿಯಾದ ಉದ್ಯಾನವನವನ್ನು ಪ್ರಾರಂಭ ಮಾಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಹೊನ್ನಪಗೌಡ ಲೇಔಟ್‍ನಲ್ಲಿ ಸಿದ್ದಿ ವಿನಾಯಕ ಮಂಡಳಿ ವತಿಯಿಂದ ಹಮ್ಮಿಕೊಂಡ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯುವಕರು ಮೂಲಭೂತ ಸೌಕರ್ಯಗಳ ಮೇಲೆ ಹೆಚ್ಚಿನ ಆಸಕ್ತಿ ತೋರಿಸಬೇಕು. ಹೊನ್ನಪ್ಪಗೌಡ ಲೇಔಟ್‍ನಲ್ಲಿ 2ಎಕರೆ 36 ಗುಂಟೆ ಜಮೀನನ್ನು ಉದ್ಯಾನವನಕ್ಕಾಗಿ ಕಾಯ್ದಿರಿಸಲಾಗಿದೆ. ದಯಾನಂದ ಹೊನ್ನಪ್ಪಗೌಡ ಬಿರಾದಾರ ಅವರು ಸ್ವಯಂ ಪ್ರೇರಿತವಾಗಿ ಸರಕಾರಕ್ಕೆ ಈ ಜಮೀನನ್ನು ಒಪ್ಪಿಸಿದ್ದಾರೆ. ಆ ಉದ್ಯಾನವನಕ್ಕೆ ರೂ.2 ಕೋಟಿ  ಅನುದಾನ ಮಂಜೂರ ಮಾಡಿಸಿ ಫ್ರೀ ಪಾರ್ಕ್ ಮಾಡುವೆ ಎಂದು ಭರವಸೆ ನೀಡಿದರು.

ಇದೇ ವೇಳೆ ದೇವೆಂದ್ರ ಮೇಲೋಡಿಸ್ ವತಿಯಿಂದ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇದೇ ಸಂದರ್ಭದಲ್ಲಿ ಸಿದ್ದಿ ವಿನಾಯಕ ಮಂಡಳಿ ಅಧ್ಯಕ್ಷ ರಮೇಶ ನಂದಗೌಡ, ಉಪಾಧ್ಯಕ್ಷ ನಿಂಗಣ್ಣ ಯಾಳಗಿ, ರವಿ ಗೋಲಾ, ಸುಗಪ್ಪ ಅಂಗಡಿ, ಸಿದ್ದಣ್ಣ ಕಾರಿಮುಂಗಿ, ಉಮೇಶ ಪೂಜೇರಿ, ಶಿವು ಅಜಗೊಂಡ, ಶಿವಪ್ಪ ಗೋರನಾಳ, ಷಣ್ಮುಖಪ್ಪ ಅಲ್ಲಾಪೂರ, ಸತೀಶ ಬಿರಾದಾರ, ಆನಂದ ಶಿವಣಗಿ, ಸುನೀಲ ಅಂಗಡಿ, ಅನಿಲ ಅಂಗಡಿ, ಉಮೇಶ ಕೂಸುರ, ರಮೇಶ ಪೂಜೇರಿ, ನಿಂಗಣ್ಣ ಪೂಜಾರಿ, ಸಾಯಬಣ್ಣ ಪೂಜಾರಿ ಸೇರಿದಂತೆ ಸಿದ್ದಿ ವಿನಾಯಕ ಮಂಡಳಿ ಸದಸ್ಯರು ಮತ್ತು ವಾರ್ಡನ್ ಮಹಿಳೆಯರು, ಗುರು ಹಿರಿಯರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group