ಸವದತ್ತಿ – ಮಹಾಮಾರಿ ಕೋರೋನಾ ರೋಗವು ಹೆಚ್ಚುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ನಡೆಯುವ ಸವದತ್ತಿ ತಾಲೂಕಿನ ಸಿರಸಂಗಿ ಕಾಳಿಕಾ ದೇವಸ್ಥಾನದಲ್ಲಿ ನಡೆಯಬೇಕಿದ್ದ ಯುಗಾದಿ ಯಾತ್ರಾ ಮಹೋತ್ಸವವನ್ನು ಸಂರ್ಪೂವಾಗಿ ರದ್ದುಗೊಳಿಸಲಾಗಿದೆ. ಭಕ್ತರು ಸಹಕರಿಸಬೇಕು ಆ ನಿಟ್ಟಿನಲ್ಲಿ ಸಿರಸಂಗಿ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ದೇವಸ್ಥಾನದ ಒಳಗೆ ಯಾರಿಗೂ ದರ್ಶನಕ್ಕೆ ಅವಕಾಶ ಇರುವುದಿಲ್ಲ . ಆ ನಿಟ್ಟಿನಲ್ಲಿ ಗ್ರಾಮದ ಸುತ್ತಲೂ ಅತಿ ಬಿಗಿಯಾದ ಭದ್ರತೆಯನ್ನು ಮಾಡಲಾಗಿದೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಯಾವ ಭಕ್ತರಿಗೂ ಯಾರಿಗೂ ದರುಶನಕ್ಕೆ ಅವಕಾಶ ಇರುವುದಿಲ್ಲ. ಸಿರಸಂಗಿ ಕಾಳಿಕಾದೇವಿ ಯುಗಾದಿ ಯಾತ್ರಾ ಮಹೋತ್ಸವ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ವಿಶೇಷ ಚುನಾವಣಾಧಿಕಾರಿ ಎಸ್ ಎಸ್ ಸಂಪಗಾವ ಮಾತನಾಡಿದರು.
ಅವರು ಸಿರಸಂಗಿ ಕಾಳಿಕಾ ದೇವಸ್ಥಾನದಲ್ಲಿ ಯುಗಾದಿ ಯಾತ್ರಾ ಮಹೋತ್ಸವವು ಇದೇ ತಿಂಗಳ ದಿ. 12. ರಿಂದ 16.4.2021 ರವರೆಗೆ ನಡೆಯಬೇಕಾದ ಯಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಂತರ ಅತಿಥಿಗಳಾಗಿ ಆಗಮಿಸಿದ ತಹಶೀಲ್ದಾರ ಪ್ರಶಾಂತ ಬಿ ಪಾಟೀಲ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಮತ್ತು ಕೋವಿಡ್ ಸೋಂಕು ರೋಗವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟುವಲ್ಲಿ ಸರಕಾರಿ ಅಧಿಕಾರಿಗಳ ಕೆಲಸ ಮಾತ್ರವಲ್ಲ ಇದರಲ್ಲಿ ಸಾರ್ವಜನಿಕರೂ ಸಹ ಸಹಕಾರ ನೀಡಿ ಜಾತ್ರೆ ಸಭೆ ಸಮಾರಂಭಗಳನ್ನು ಮಾಡಬಾರದು. ಜೀವ ಉಳಿದರೆ ಜೀವನ ಆ ನಿಟ್ಟಿನಲ್ಲಿ ನಮ್ಮ ನಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಇನ್ನೊಬ್ಬರ ಜೀವನವನ್ನು ಉಳಿಸೋಣ ಆದ್ದರಿಂದ ಈ ಬಾರಿ ನಡೆಯಬೇಕಾದ ಸಿರಸಂಗಿ ಕಾಳಿಕಾ ದೇವಸ್ಥಾನದಲ್ಲಿ ಯುಗಾದಿ ಯಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ನಂತರ ಸಭೆಯಲ್ಲಿ ಮಾತನಾಡಿದ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅದ್ಯಕ್ಷ ಪಿ ಬಿ ಬಡಿಗೇರ ಈ ಬಾರಿ ದೇವಸ್ಥಾನದಲ್ಲಿ ನಡೆಯಬೇಕಾದ ಸಾಂಪ್ರದಾಯಿಕ ಯುಗಾದಿ ಹಬ್ಬದ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ ಆದರೆ ಯಾರಿಗೂ ಒಳಗಡೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಕೇವಲ ಅರ್ಚಕರು ಮತ್ತು ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿಗಳಿಗೆ ಮಾತ್ರ ಅವಕಾಶವಿರುತ್ತದೆ ಬೇರಾರಿಗೂ ದರುಶನಕ್ಕೆ ಅವಕಾಶ ಕಡ್ಡಾಯವಾಗಿ ಇರುವುದಿಲ್ಲ ನಾವೆಲ್ಲರೂ ಸರಕಾರದ ಆದೇಶವನ್ನು ಪಾಲಿಸಲೇಬೇಕಾಗಿದೆ ಹಾಗೂ ಕೊರೋನಾ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕಾಗಿದೆ ಎಂದರು.
ಸಿ ಪಿ ಐ ಮಂಜುನಾಥ ನಡುವಿನಮನಿ ಮಾತನಾಡಿ ದೇವಸ್ಥಾನದ ಮುಂದೆ ಹಾಗೂ ಸಿರಸಂಗಿ ಗ್ರಾಮಕ್ಕೆ ಬರುವ ಎಲ್ಲ ಮಾರ್ಗಗಳಲ್ಲಿಯೂ ಬಿಗಿಯಾದ ಭದ್ರತೆ ಮಾಡಲಾಗುತ್ತದೆ ಆದ್ದರಿಂದ ಎಲ್ಲರೂ ತಮ್ಮ ತಮ್ಮ ಬಳಿ ಆಧಾರ ಕಾರ್ಡಗಳನ್ನು ಇಟ್ಟುಕೊಂಡೆ ಸಂಚಾರ ಮಾಡಬೇಕು ಸಂಸ್ಥೆಯ ಸಿಬ್ಬಂದಿಗಳು ಅರ್ಚಕರು ತಮ್ಮ ಭಾವಚಿತ್ರ ಇರುವ ಗುರುತಿನ ಚೀಟಿ ಹಾಗೂ ಪಾಸ್ ಗಳನ್ನು ಕಡ್ಡಾಯವಾಗಿ ತೋರಿಸಿ ದೇವಸ್ಥಾನಕ್ಕೆ ಪ್ರವೇಶ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚುನಾವಣಾ ನಿಮಿತ್ತವಾಗಿ ಆಗಮಿಸಿದ ಪಿಎಸಐ ನಿಂಗಪ್ಪ ಪೂಜಾರ. ತಾಲೂಕಾ ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ. ತಾಲೂಕಾ ಪಂಚಾಯತನ ಸಂಗನಗೌಡಾ ಹಂದ್ರಾಳ. ಗ್ರಾಮ ಪಂಚಾಯತ ಅದ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅದ್ಯಕ್ಷ ಪಿ ಬಿ ಬಡಿಗೇರ. ವಿಶ್ವಕರ್ಮ ಪ್ರತಿಷ್ಟಾನದ ಅಧ್ಯಕ್ಷ ಮೌನೇಶ ಸುಳ್ಳದ. ಅರುಣ ಸೋನಾರ.ಸುರೇಶ ಜುಂಝರವಾಢ. ವಿ ಎ ಗೌಡರ. ಮೋಹನ ಎಮ್ ಪತ್ತಾರ.ಗೋವಿಂದ ಬಡಿಗೇರ.ಚಂದ್ರಶೇಖರ ವೇದ ಪಾಠಕ. ರಮೇಶ ಪತ್ತಾರ. ಅರವಿಂದ ಪತ್ತಾರ. ಮಲ್ಲಿಕಾರ್ಜುನ ಪತ್ತಾರ. ಗ್ರಾಮದ ಗಣ್ಯರಾದ ಶಿವಾಜಿ ಶಿಂಧೆ. ಕಾಳಿಕಾ ದೇವಸ್ಥಾನದ ಅರ್ಚಕರಾದ ಇಂದ್ರಾಚಾರ್ಯ ಗಂಗಯ್ಯನವರ. ನಾಗಾಚಾರ್ಯ ಗಂಗಯ್ಯನವರ. ಹಾಗೂ ಪ್ರಕಾಶ ಪ್ರಸಾದ. ಉಪಸ್ಥಿತರಿದ್ದರು.