ಬೀದರ : ಸೀತಾಳಗೇರಾ ಗ್ರಾಮದ ಜನರ ಅಳಲು

Must Read

ಬೀದರ – ಈ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ, ಶಾಲೆಯ ಮುಂದೆ ಅಸ್ವಚ್ಛತೆ, ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಭಯದಿಂದಲೇ ಓಡಾಡಬೇಕು….ಹೀಗೆ ಅನೇಕ ನಾಗರಿಕ ಸಮಸ್ಯೆಗಳಿಂದ ತುಂಬಿ ತುಳುಕಾಡುತ್ತಿದೆ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಸೀತಾಳಗೇರಾ ಗ್ರಾಮ ಪಂಚಾಯತ ವ್ಯಾಪ್ತಿಯ ನಿಂಬೂರ ಗ್ರಾಮ.

ಇಲ್ಲಿನ ಪಂಚಾಯತ ಅಭಿವೃದ್ಧಿ ಅಧಿಕಾರಿಯ ದಿವ್ಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಗೋಳಾಡುವಂತಾಗಿದೆ.
ಗ್ರಾಮದಲ್ಲಿ ಎಲ್ಲೆಂದರಲ್ಲಿ ಕೊಳವೆ ಬಾವಿಗಳು ಬಾಯಿ ತೆರದಿವೆ, ಸರಿಯಾದ ರಸ್ತೆ ಇಲ್ಲದೆ ಜನರು ಪರದಾಡುತ್ತಿದ್ದಾರೆ.

ಈ ಎಲ್ಲ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಿಲ್ಲದಾಗಿದೆ. ಆದ್ದರಿಂದ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೂಡಲೇ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲದಿದ್ದರೆ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಕಿವುಡು, ಮೂಕರ ವಸತಿ ಶಾಲೆಯಲ್ಲಿ ಪಾಲಕರ ಸಭೆ

ಮುನವಳ್ಳಿ : ಪಟ್ಟಣದ ಶ್ರೀ ವ್ಹಿ ಪಿ ಜೇವೂರ ಸ್ಮಾರಕ ಕಿವುಡು ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಪಾಲಕರ ಪೋಷಕರ ಸಭೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group