ಶ್ರೀ ನಿಜಗುಣ ದೇವರ ಷಷ್ಟ್ಯಬ್ಧಿ ಸಂಭ್ರಮ: ಜಗದ್ಗುರುಗಳು, ಮಠಾಧೀಶರು ಗಣ್ಯರು ಭಾಗಿ-ಹುಕ್ಕೇರಿ ಶ್ರೀಗಳು

0
223

ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿಗಳಾದ ನಿಜವರಿದ ಸಂತ, ಸದು ಹೃದಯವಂತ, ಸಾಹಿತ್ಯ ಶ್ರೀಮಂತ ಪರಮ ಪೂಜ್ಯ ಶ್ರೀ ನಿಜಗುಣ ದೇವರ ಷಷ್ಟ್ಯಬ್ಧಿ ಸಂಭ್ರಮ ಹಾಗೂ 25ನೇ ಸತ್ಸಂಗ ಸಂಭ್ರಮ ಮತ್ತು ಅಪ್ಪನ ಜಾತ್ರೆ ಕಾರ್ಯಕ್ರಮವು ಜನವರಿ 1 ರಿಂದ 3ರವರೆಗೆ ವಿಜೃಂಭಣೆಯಿಂದ ಜರುಗಲಿದ್ದು ನಾಡಿನ ಜಗದ್ಗುರುಗಳು, ಮಹಾತ್ಮರು, ಗಣ್ಯರು ಆಗಮಿಸಲಿದ್ದಾರೆ ಎಂದು ಸಮಾರಂಭದ ಗೌರವಾಧ್ಯಕ್ಷರು ಹಾಗೂ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ತಿಳಿಸಿದರು.

ಅವರು ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ  ಮಾತನಾಡಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ ಶಿವಾನಂದ ಕೌಜಲಗಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಸರ್ವೋತ್ತಮ ಜಾರಕಿಹೊಳಿ, ಮಾಜಿ ಶಾಸಕ ಬಿ.ಸಿ.ಸರಿಕರ ಸೇರಿದಂತೆ ಅನೇಕ ಗಣ್ಯರು ಆಗಮಿಸುವರು.

ದಿ.1ರಂದು ಶ್ರೀ ಸಿದ್ಧಲಿಂಗ ಯತಿರಾಜರ, ಶ್ರೀ ಶಾಂಭವಿಮಾತೆಯ, ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ನಂತರ ಶೃಂಗಾರ ರಥದಲ್ಲಿ ಸಹಸ್ರ ಪೂರ್ಣ ಕುಂಭದೊಂದಿಗೆ ಮಹಾತ್ಮರ ಭವ್ಯ ಸ್ವಾಗತ ಮೆರವಣಿಗೆ ನಂತರ ವೈರಾಗ್ಯನಿಧಿ ಮಾತೋಶ್ರೀ ಚಂಪಮ್ಮಾ ತಾಯಿಯವರ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ 12 ಗಂಟೆಗೆ ಸತ್ಸಂಗ ಸಮ್ಮೇಳನದ ಪಾವನ ಸಾನ್ನಿಧ್ಯ ಲಚ್ಯಾಣ ಸಂಸ್ಥಾನಮಠದ ಜಗದ್ಗುರು ವೃಷಭಲಿಂಗ ಮಹಾಸ್ವಾಮೀಜಿ, ಕನೇರಿಮಠದ ಶ್ರೀ ಜಗದ್ಗುರು ಅದೃಶ್ಯಕಾಡಸಿದೇಶ್ವರ ಮಹಾಸ್ವಾಮೀಜಿ, ವಹಿಸುವರು. ಅನೇಕ ಮಹಾತ್ಮರು,ಗಣ್ಯರು ಉಪಸ್ಥಿತರಿರುವರು. ನಂತರ ಸನ್ಮಾನ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಜರುಗಲಿದೆ.

ಸಂಜೆ 6 ಗಂಟೆಗೆ ತತ್ವಾಮೃತ ಕಾರ್ಯಕ್ರಮದಲ್ಲಿ ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ: ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಬೀದರಿನ ಶ್ರೀ ಶಿವಕುಮಾರ ಮಹಾಸ್ವಾಮೀಜಿ, ಮುಗಳಖೋಡದ ಶ್ರೀ ಡಾ: ಮುರುಘರಾಜೇಂದ್ರ ಮಹಾಸ್ವಾಮಿಜಿ,ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಜಿ,ಮುರಗೋಡದ ಶ್ರೀ ನೀಲಕಂಠ ಮಹಾಸ್ವಾಮಿಜಿ, ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ, ಬೆಂಗಳೂರಿನ ಶ್ರೀ ಡಾ: ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಹಾತ್ಮರು,ಗಣ್ಯರು ಉಪಸ್ಥಿತರಿರುವರು.      ಸನ್ಮಾನ ಕಾರ್ಯಕ್ರಮ, ಶ್ರೀ ಸಿದ್ಧಲಿಂಗ ಯತಿರಾಜರ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಲಿದೆ.

ದಿ.2ರಂದು ತತ್ವಾಮೃತ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಡಾ: ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಶ್ರೀ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮೀಜಿ, ಶ್ರೀ ಜಗದ್ಗುರು ಅನ್ನದಾನೇಶ್ವರ ಶಿವಯೋಗಿಗಳು, ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಶ್ರೀ ಶಂಭುನಾಥ ಮಹಾಸ್ವಾಮೀಜಿ, ಶ್ರೀ ಜಗದ್ಗುರು ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಮಂಜುನಾಥ ಭಾರತಿ ಮಹಾಸ್ವಾಮೀಜಿ, ಶ್ರೀ ವೀರಭದ್ರ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಹಾತ್ಮರು, ಗಣ್ಯರು ಉಪಸ್ಥಿತರಿರುವರು. ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಸಂಜೆ 6 ಗಂಟೆಗೆ ತತ್ವಾಮೃತ ಕಾರ್ಯಕ್ರಮದಲ್ಲಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ,ಡಾ: ಅಲ್ಲಮ್ಮಪ್ರಭು ಮಹಾಸ್ವಾಮೀಜಿ, ಶ್ರೀ ಗುರುಸಿದ್ಧ ಮಹಾಸ್ವಾಮೀಜಿ, ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ, ಜಗದ್ಗುರು ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಶ್ರೀ ನಿಜಗುಣಾನಂದ ಮಹಾಸ್ವಾಮೀಜಿ, ಶ್ರೀ ಅಡವಿಲಿಂಗ ಮಹಾರಾಜರು, ಶ್ರೀ ಬಸವಲಿಂಗ ಮಹಾಸ್ವಾಮೀಜಿ ಉಪಸ್ಥಿತರಿರುವರು. ಪೂಜ್ಯ ಶ್ರೀ ನಿಜಗುಣ ದೇವರ ಶೃಂಗಾರ ಕಿರೀಟ ತೂಗುಯ್ಯಾಲೆ ಹಾಗೂ ಗಂಗಾರತಿ ಕಾರ್ಯಕ್ರಮ ಜರುಗಲಿದೆ.ಸಂಜೆ 6 ಗಂಟೆಗೆ ಶ್ರೀ ಸಿದ್ಧಲಿಂಗ ಯತಿರಾಜರ ತುಲಾಭಾರ ಸೇವೆ ನಡೆಯಲಿದೆ.

ದಿ.3ರಂದು ಮುಂಜಾನೆ 10 ಗಂಟೆಗೆ ತತ್ವಾಮೃತ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಶ್ರೀ ಜಗದ್ಗುರು ನಿರ್ಮಲಾನಂದ ಮಹಾಸ್ವಾಮೀಜಿ, ಸುತ್ತೂರು ಮಠದ ಶ್ರೀ ಜಗದ್ಗುರು ಡಾ: ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಇಂಚಲ ಮಠದ ಶ್ರೀ ಡಾ: ಶಿವಾನಂದ ಭಾರತಿ ಮಹಾಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ: ವೀರೇಂದ್ರ ಹೆಗ್ಗಡೆ, ಚಿತ್ರದುರ್ಗದ ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ, ಶ್ರೀ ಅವಧೂತ ವಿನಯ ಗುರೂಜೀ, ಶ್ರೀ ಸಂಗನಬಸವ ಮಹಾಸ್ವಾಮೀಜಿ ಸೇರಿದಂತೆ ಅನೇಕ ಮಹಾತ್ಮರು,ಗಣ್ಯರು ಉಪಸ್ಥಿತರಿರುವರು. ಪೂಜ್ಯ ಶ್ರೀ ನಿಜಗುಣ ದೇವರಿಗೆ ಕಿರೀಟ ಧಾರಣೆ ಕಾರ್ಯಕ್ರಮ. ಶಕ್ತಿ ಪೀಠಗಳ ಮಹಾಮಂಟಪದ ಪೂಜೆ, ಸಂಜೆ 4 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ಭವ್ಯ ರಥೋತ್ಸವ ರಾತ್ರಿ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಈ ಸಮಯದಲ್ಲಿ  ಶ್ರೀಮಠದ ಪೂಜ್ಯ ಶ್ರೀ ನಿಜಗುಣ ದೇವರು, ಗೋಕಾಕದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ, ತೊಂಡಿಕಟ್ಟಿಯ ಅಭಿನವ ವೆಂಕಟೇಶ ಮಹಾರಾಜರು ಸೇರಿದಂತೆ ಶ್ರೀಮಠದ ಭಕ್ತರು ಇದ್ದರು.