spot_img
spot_img

ಯುವ ಸಮೂಹ ಮುಂದೆ ಬಂದಾಗ ಸಾಮಾಜಿಕ ಸುಧಾರಣೆ ಸಾಧ್ಯ – ಹೈಕೋರ್ಟ್ ನ್ಯಾಯವಾದಿ ಮೃಣಾಲಿನಿ ಪಾಟೀಲ 

Must Read

- Advertisement -

ಲಿಂಗಾಯತ ಸಂಘಟನೆಯಿಂದ ‘ಸಮಾಜ ಮತ್ತು ಮಠಗಳು’ ಕುರಿತು ವಿಶೇಷ ಚಿಂತನ ಕಾರ್ಯಕ್ರಮ

ವಚನ,ವಚನ ಸಾಹಿತ್ಯ ಸರ್ವ ಭಾಷೆಗಳಲ್ಲಿಯೂ ಈಗಿನ ಬದಲಾದ ಪದ್ಧತಿಗಳಿಗೆ ಅನುಗುಣವಾಗಿ ಬಳಕೆಯಾಗುವದರ ಜೊತೆಗೆ ಎಲ್ಲ ವಯೋಮಾನದವರು ವಿಶೇಷವಾಗಿ ಯುವ ಸಮೂಹ ಒಗ್ಗೂಡಿ ಸಾಮಾಜಿಕವಾಗಿ ಚಿಂತನೆ ಮಾಡಿದರೆ ಸಾಮಾಜಿಕ ಸುಧಾರಣೆ ಸಾಧ್ಯ. ಕೇವಲ ಲಿಂಗ ಪೂಜೆ, ಪ್ರಾರ್ಥನೆ ವಚನ ಪಠಣ ಇವುಗಳಿಂದ ಕ್ರಾಂತಿಯಾಗಲ್ಲ. ಅವು ವಿಶೇಷವಾಗಿ ನಮ್ಮಲ್ಲಿ ಮೈಗೂಡಿಕೊಂಡು ಆಚರಣೆಯಲ್ಲಿ ಬರಬೇಕು ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ಎಂದು ನ್ಯಾಯವಾದಿ ಮೃಣಾಲಿನಿ ಪಾಟೀಲ ಹೇಳಿದರು

ರವಿವಾರ ದಿ. 30ರಂದು ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಫ. ಗು.ಹಳಕಟ್ಟಿ ಭವನದಲ್ಲಿ ಹಮ್ಮಿಕೊಳ್ಳಲಾದ ಸಮಾಜ ಮತ್ತು ಮಠಗಳು ಕುರಿತಾದ ವಿಷಯ ಚಿಂತನ ಸಭೆಯಲ್ಲಿ ಅವರು ಉಪನ್ಯಾಸ ನೀಡುತ್ತಾ ಮಾತನಾಡಿದರು.

- Advertisement -

ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನ್ಯಾಯವಾದಿ ದಿನೇಶ ಪಾಟೀಲ ಮಾತನಾಡಿ, ಧರ್ಮ ಬೇರೆ, ಭಕ್ತಿ ಬೇರೆ. ಸಾಮಾಜಿಕ ಚಿಂತನೆ ಇರಲಿ ಕೆಲವರು ಧರ್ಮ ಮತ್ತು ಜಾತಿ ಎಂಬ ತೊಳಲಾಟದಲ್ಲಿ ದ್ವಂದ್ವದಲ್ಲಿ ಇದ್ದಾರೆ ಅದರಿಂದ ಹೊರಗೆ ಬಂದು ಬದುಕಿದಾಗ ಸರಿ ತಪ್ಪುಗಳ ಅರಿವಾಗಿ ಬದುಕನ್ನು ಪಾವನಗೊಳಿಸಿಕೊಳ್ಳಲು ಸಾಧ್ಯ. ಹಿಂದಿನಂತೆ ಈಗಿನ ಮಠಗಳು ಸಾಮಾಜಿಕ ಅರಿವನ್ನು ಮೂಡಿಸುವ ಕೆಲಸ ಮಾಡಬೇಕಿದೆ. ಕೇವಲ ಆರ್ಥಿಕವಾಗಿ ಮಠಗಳು ವ್ಯವಹಾರಿಕವಾಗಿ ಬೆಳೆಯದೇ ಸಾಮಾಜಿಕ ಸಮಾನತೆ ತರುವ ನಿಟ್ಟಿನಲ್ಲಿ ಬಸವಣ್ಣನವರ ಆದರ್ಶಗಳನ್ನು ಪರಿಪಾಲನೆ ಮಾಡಿದಾಗ ಮಠಗಳ ಕುರಿತಾದ ಅಭಿಮಾನ ಹೆಚ್ಚುತ್ತದೆ. ಈಗಿನ ಕೆಲವು ಮಠಗಳಿಂದ ಭಕ್ತರು ವಿಮುಖರಾಗುತ್ತಿದ್ದಾರೆ ಅದು ಚಿಂತೆಗೆ ಒಳ ಮಾಡಿದೆ ಎಂದು ಮಠಗಳ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಗಾಣಿಗರತ್ನ ಪ್ರಶಸ್ತಿ ಪಡೆದ ಪ್ರಕಾಶ ಬಾಳೆಕುಂದರಗಿ ದಂಪತಿಗಳನ್ನು ಮತ್ತು ಸಮಾಜ ಸೇವಕ ದಾಸೋಹಿ ಉದಯ ವಿರಕ್ತಮಠ ರವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ ಅಧ್ಯಕ್ಷತೆಯನ್ನು ವಹಿಸಿದ್ದರು.ಶಂಕರ ಗುಡಸ,ಅಶೋಕ ಇಟಗಿ, ಎಂ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ ,ವಿಜಯ ಹುದಲಿಮಠ, ಬಸವರಾಜ ಬಿಜ್ಜರಗಿ,ಆನಂದ ಕರ್ಕಿ, ವಿ.ಕೆ ಪಾಟೀಲ, ಬಸವರಾಜ ಕರಡಿಮಠ, ಬಸವರಾಜ ಉಪ್ಪಿನ ಮಹಾಂತೇಶ ಇಂಚಲ, ಶಿವಾನಂದ ಲಾಳಸಂಗಿ, ಬಿ.ಪಿ. ಜೇವಣಿ,ಮಂಜುಳ ದೇಯನ್ನವರ ದೀಪಾ ಪಾಟೀಲ, ಸುವರ್ಣ ಗುಡಸ,ಜಯಶ್ರೀ ಚಾವಲಗಿ,ಶಾಂತಾ ಕಂಬಿ ಸೇರಿದಂತೆ ಸಂಘಟನೆಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಸತೀಶ ಪಾಟೀಲ ಸ್ವಾಗತಿಸಿದರು. ಸುರೇಶ ನರಗುಂದ ನಿರೂಪಿಸಿದರು ಕೊನೆಯಲ್ಲಿ ಸಂಗಮೇಶ ಅರಳಿ ವಂದಿಸಿದರು.

- Advertisement -
- Advertisement -

Latest News

ಹಿಂದಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹುನಗುಂದ : ಈಚೆಗೆ ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಆದರ್ಶ ವಿದ್ಯಾಲಯದ ಮೊಹಮ್ಮದ್ ರಿಹಾನ್ ಇಟಗಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group