ಬೆಂಗಳೂರಿನಲ್ಲಿ ನಡೆದ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ದ ವತಿಯಿಂದ ಕೊಡಮಾಡುವ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಬೆಳಗಾವಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತುಲ ಅಧ್ಯಕ್ಷರಾದ ಸುರೇಶ ಸಿದ್ದಪ್ಪಾ ಹಂಜಿ ಯವರು ಪಡೆದುಕೊಂಡಿದ್ದಾರೆ.
ಇವರು ಈಗಾಗಲೇ ಸಾರ್ವಜನಿಕ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಶೈಕ್ಷಣಿಕವಾಗಿ ತಮ್ಮ ಹುಟ್ಟೂರಾದ ಹೊಸ ಇದ್ದಲಹೊಂಡ ಶಿವಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯನ್ನು ಸ್ಥಾಪಿಸಿ ಭವ್ಯ ಕಟ್ಟಡವನ್ನು ಕೂಡಾ ಸರ್ಕಾರದಿಂದ ಅವರೇ ಕಟ್ಟಿಸಿರುತ್ತಾರೆ ಅಲ್ಲದೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ ಭವ್ಯ ಕಟ್ಟಡದ ಕೆಲಸ ಮುಗಿಯುವ ಹಂತದಲ್ಲಿದೆ ಗ್ರಾಮದಲ್ಲಿ ರಸ್ತೆಗಳು ಕುಡಿಯುವ ನೀರು ಪೂರೈಕೆ ದೇವಸ್ಥಾನಗಳ ಕಟ್ಟಡ ಕಾಡಸಿದ್ದೇಶ್ವರ ಮಠದ ಕಟ್ಟಡ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಇವರು ನಾಲ್ಕು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸರ್ಕಾರಿ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷರಾಗಿ ಯುವಕ ಸಂಘ ಹಾಗೂ ಭಜನಾ ಸಂಘಗಳ ಸ್ಥಾಪಕ ರಾಗಿ ಸರ್ಕಾರಿ ಗುತ್ತಿಗೆದಾರನಾಗಿ ಈಗ ಪ್ರಸ್ತುತ ಬೆಳಗಾವಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇದನ್ನೆಲ್ಲ ಪರಿಗಣಿಸಿ ಸುರೇಶ ಸಿ ಹಂಜಿ ಯವರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ದೊರಕಿರುವುದು ಬೆಳಗಾವಿಗೆ ಹೆಮ್ಮೆಯ ಸಂಗತಿ ಶ್ರೀ ಯುತರಿಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ದೇವರು ಅವರಿಗೆ ಆರೋಗ್ಯ ಆಯುಷ್ಯ ನೀಡಲೆಂದು ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ತಾಲೂಕು ಹಾಗೂ ಜಿಲ್ಲೆಯ ಪರವಾಗಿ ಎಲ್ಲಾ ಸದಸ್ಯರು ಹಾಗೂ ಅಧ್ಯಕ್ಷರು ಹಾರೈಸಿದ್ದಾರೆ.