ಸಮಾಜ ಸೇವೆಯು ಬದುಕಿನ ಭಾಗವಾಗಬೇಕು
ಮುಧೋಳ – ಸಮಾಜದಲ್ಲಿ ಅನೇಕ ತರಹದ ಸಾಮಾಜಿಕ ಪಿಡುಗುಗಳನ್ನು ಎದುರಿಸುವ ಸಂದಿಗ್ಧ ಸನ್ನಿವೇಶಗಳನ್ನು ನಾವೆಲ್ಲ ಪ್ರತಿದಿನ ಕಾಣುತ್ತೇವೆ. ಶಬ್ದಮಾಲಿನ್ಯ, ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಒಳಗೊಂಡಂತೆ ಅನಾರೋಗ್ಯಕ್ಕರ ವಾತಾವರಣ ದಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ ಎಂದು ಶೌರ್ಯ ವಿಭಾಗದ ಯೋಜನಾಧಿಕಾರಿ ಕಿಶೋರ್ ಅವರು ಹೇಳಿದರು.
ಮುಧೋಳ ಯೋಜನಾ ಕಛೇರಿಯಲ್ಲಿ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ [ರಿ] ಬಿ.ಸಿ.ಟ್ರಸ್ಟ.ಮಧೋಳ ಅವರು ಮುಧೋಳ, ಜಮಖಂಡಿ.ಬೀಳಗಿ, ಘಟಕದ ಪ್ರತಿನಿಧಿಗಳಿಗೆ ಆಯೋಜಿಸಿದ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದಲ್ಲಿ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಕಷ್ಟದಲ್ಲಿದ್ದವರಿಗೆ, ಅಸಹಾಯಕರಿಗೆ ನೆರವಿಗೆ ಕೈ ಜೋಡಿಸಬೇಕೆಂದ ಅವರು ನಾವೆಲ್ಲ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಸಮಾಜ ಸೇವೆಯಲ್ಲಿ ನಮ್ಮ ಬದುಕು ಒಂದು ಭಾಗವಾಗಬೇಕು ಎಂದರು.
ಮುಂದುವರಿದು ಮಾತನಾಡಿ ಕುಡಿತದಿಂದಾಗುವ ದುಷ್ಪರಿಣಾಮ ಮತ್ತು ಕೌಟುಂಬಿಕ ಜೀವನದಲ್ಲಿ ಆಗುವ ತೊಂದರೆಗಳ ಕುರಿತು ವಿವರಿಸಿದರು.ಕೊಪ್ಪಳ ಪ್ರಾದೇಶಿಕ ವಿಭಾಗದ ಜನ ಜಾಗೃತಿ ಮೇಲ್ವಿಚಾರಕ ಸಚಿನ್ ಮುಧೋಳ ಕ್ಷೇತ್ರ ಯೋಜನಾಧಿಕಾರಿ ರಾಜಕುಮಾರ್ ಆಚಾರ್ಯರು, ಜಮಖಂಡಿಯ ಯೋಜನಾಧಿಕಾರಿ ನಿಂಗಪ್ಪ ಅವರು ಉಪಸ್ಥತರಿದ್ದರು. ಶೌಯ೯ವಿಪ್ಪತ್ತು ನಿವ೯ಹಣಾ ಸಭೆಯನ್ನು ಯೋಜನಾಧಿಕಾರಿ ಕಿಶೋರ್ ಉದ್ಘಾಟಿಸಿದರು.

