spot_img
spot_img

ವೀರ ಸೈನಿಕರ ಪತ್ನಿಯರಿಗೆ ಸಮಾಜವು ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ

Must Read

spot_img
- Advertisement -

ಆರ್.ವೈ.ಪಾಟೀಲ್:ವೇದಾಂತ ಫೌಂಡೇಶನ್, ಎಜುಕೇಶನ್ ಇಂಡಿಯಾ ಸಹಯೋಗದೊಂದಿಗೆ ವೀರನಾರಿಯರ ಸತ್ಕಾರ.

ಬೆಳಗಾವಿ: ಹುತಾತ್ಮ ಸೈನಿಕರ  ವೀರ ಪತ್ನಿಯರ ಜೀವನ ಸಂಘರ್ಷದಿಂದ ಕೂಡಿದೆ. ತಮ್ಮ ಮಕ್ಕಳ ಶಿಕ್ಷಣ ಪೂರ್ಣಗೊಳಿಸುವ ಮತ್ತು ಅವರಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸುವ ಸವಾಲು ಅವರ ಮುಂದೆ ಇರುತ್ತದೆ. ಸಮಾಜವು ಇಂತಹ ವೀರ ಸೈನಿಕರ ಪತ್ನಿಯರಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ ಎಂದು ಜುವಾರಿ ಕಂಪನಿಯ ಉಪಾಧ್ಯಕ್ಷ ಆರ್.ವೈ.ಪಾಟೀಲ್ ಹೇಳಿದರು.

ವೇದಾಂತ ಫೌಂಡೇಶನ್ ಹಾಗೂ ಎಜ್ಯುಕೇಶನ್ ಇಂಡಿಯಾ ಸಹಯೋಗದೊಂದಿಗೆ ತಿಲಕವಾಡಿಯ ನೇಟಿವ್ ಹೋಟೆಲ್ ನ ಸಭಾಗೃಹದಲ್ಲಿ ಆಯೋಜಿಸಲಾದ ವೀರನಾರಿಯರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

- Advertisement -

ಪ್ರಾಸ್ತಾವಿಕವಾಗಿ ವೇದಾಂತ ಫೌಂಡೇಶನ್ ನ ಅಧ್ಯಕ್ಷ ಸತೀಶ ಪಾಟೀಲ ಮಾತನಾಡಿದರು. ವೇದಿಕೆಯಲ್ಲಿದ್ದ ಎಲ್ಲ ಗಣ್ಯರು ದೀಪ ಪ್ರಜ್ವಲನ ಮಾಡಿ ಕಾರ್ಯಕ್ರಮದ ಶುಭಾರಂಭ ಮಾಡಿದರು. ಡಾ.ಡಿ.ಎನ್.ಮಿಸಾಳೆ ಯವರು, ಜೀವನವು ಸುಂದರವಾಗಿದ್ದು ವೀರನಾರಿಯರು ಧೃತಿಗೆಡದೆ ಹೊಸ ಜೀವನವನ್ನು ನಡೆಸುವ ನಿಟ್ಟಿನಲ್ಲಿ ಗಮನಹರಿಸಬೇಕೆಂದು ಹೇಳಿದರು.

ಎಜುಕೇಶನ್ ಇಂಡಿಯಾ ದ ಕಾರ್ಯಾಧ್ಯಕ್ಷರಾದ ಡಾ.ಮನ್ ಜೀತ್ ರವರು ಮಾತನಾಡುತ್ತಾ, ವೀರನಾರಿಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದಾ ಸಹಕಾರ ನೀಡುವುದಾಗಿ ಘೋಷಿಸಿದರು.

ನಂತರದಲ್ಲಿ ಗಣ್ಯರಿಂದ ಮಹಾರಾಷ್ಟ್ರ, ವಿಜಯಪುರ, ಧಾರವಾಡ, ಕಾರವಾರ, ಬೆಳಗಾವಿ ಹಾಗೂ ಕೊಲ್ಹಾಪುರ ದ 21 ವೀರನಾರಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವೀರಪತ್ನಿಯರಿಗೆ ಸ್ಮರಣಿಕೆ ಪೈಥನಿ ಸೀರೆ ಮತ್ತು ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು. ಶ್ರೀಮತಿ ರೇಖಾ ಖಾದರವಾಡಕರ್ ಮತ್ತು ಲಲಿತಾ ಮಂಜುನಾಥ್ ರವರು ವೀರನಾರಿಯರಾಗಿ ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು. ವೇದಾಂತ ಫೌಂಡೇಷನ್ ದತ್ತು ತೆಗೆದುಕೊಂಡಿರುವ ವಡಗಾವಿಯ ಎಂ.ಬಿ.ಬಿ.ಎಸ್. ವಿದ್ಯಾರ್ಥಿ ಗಿರೀಶ ಧೂಪದಾಳ ಇವರನ್ನು ಫೌಂಡೇಶನ್ ವತಿಯಿಂದ ಶಾಲು ಮತ್ತು ಉಡುಗೊರೆಗಳನ್ನಿತ್ತು ಸನ್ಮಾನಿಸಲಾಯಿತು.      

- Advertisement -

ಈ ಸಂದರ್ಭದಲ್ಲಿ ಉಮೇಶ ಬಾಳೆಕುಂದ್ರಿ, ಸವಿತಾ ಚಂದಗಡಕರ್, ಆಸ್ಮಾ ನಾಯಿಕ್, ಸುನಿಲ್ ದೇಸುರಕರ್, ಶೈಜೂ ನಾಯರ್, ಶೋಭಾ ಪಾಟೀಲ್, ಶೋಭಾ ದೇಗಲೋಲಿ, ಸುಜಾತಾ ಲೋಖಂಡೇ, ಸಿ.ವೈ.ಪಾಟೀಲ್, ಗಿರೀಶ್ ಜಗಜಂಪಿ ಮತ್ತಿತರರು ಉಪಸ್ಥಿತರಿದ್ದರು. ಫೌಂಡೇಷನ್ ನ ಕಾರ್ಯದರ್ಶಿ ಈಶ್ವರ ಪಾಟೀಲ್ ರವರು ಕಾರ್ಯಕ್ರಮ ನಿರೂಪಿಸಿದರು. ಎನ್.ಡಿ.ಮಾದರ್ ರವರು ಧನ್ಯವಾದ ಸಮರ್ಪಿಸಿದರು.

- Advertisement -
- Advertisement -

Latest News

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಮಹತ್ತರವಾದುದು – ಸಿದ್ಧಲಿಂಗ ಕಿಣಗಿ

ಸಿಂದಗಿ; ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group