ಬೀದರ: ಕುಡಿಯುವ ನೀರಿಗಾಗಿ ದಿಢೀರನೆ ಗ್ರಾಮಸ್ಥರು, ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದಲ್ಲಿ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕುಡಿಯುವ ನೀರು ಪೂರೈಕೆ ಮಾಡದೆ ಇರುವುದನ್ನು ಖಂಡಿಸಿ ಗ್ರಾಮಸ್ಥರು ನೀರಿಗಾಗಿ ದಿಢೀರನೆ ಪ್ರತಿಭಟನೆಗಿಳಿದರು. ಗ್ರಾಮಸ್ಥರ ಕುಡಿಯುವ ನೀರಿಗಾಗಿ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಸರ್ಕಾರದಿಂದ ಬೋರವೇಲ್ ಕೋರೆಯಲಾಗಿತ್ತು. ಸರ್ಕಾರದಿಂದ ಯಾವುದೆ ಸಹಾಯ ಸಿಕ್ಕಿಲ್ಲ ಎಂದು ರೈತನೋರ್ವ ಗ್ರಾಮಕ್ಕೆ ಪೂರೈಕೆ ಮಾಡುವ mಬೋರ್ ವೇಲ್ ಬಂದ್ ಗೊಳಿಸಿದ್ದಾರೆ.ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಆತನ ಜಮೀನಿಗೆ ತೆರಳಿ ಕುಡಿಯುವ ನೀರು ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಶಿವಕುಮಾರ ಅವರು, ಖಾಸಗಿ ವ್ಯಕ್ತಿಗೆ ಸರಕಾರದಿಂದ ಅಗತ್ಯ ಸಹಾಯ, ಸೌಲಭ್ಯ ಕೊಡಿಸುವುದಾಗಿ ಭರವಸೆ ನೀಡಿದ ನಂತರ ಮತ್ತೆ ನೀರು ಸರಬರಾಜು ವ್ಯವಸ್ಥೆ ಮಾಡಲಾಯಿತು.
ವರದಿ : ನಂದಕುಮಾರ ಕರಂಜೆ, ಬೀದರ