ಸಿಂದಗಿ – ವೈದ್ಯೋ ನಾರಾಯಣೋ ಹರಿ ಎನ್ನುವ ಮಾತಿನಂತೆ ವೈದ್ಯರು ದೇವರ ಸಮಾನ. ಪ್ರತಿಯೊಬ್ಬ ರೋಗಿಯು ಜೀವನದಲ್ಲೂ ವೈದ್ಯರ ಪಾತ್ರ ಮಹತ್ವದ್ದು. ಇಂತಹ ವೈದ್ಯರ ಶ್ರಮ, ನಿಸ್ವಾರ್ಥ ಸೇವೆಯನ್ನು ಈ ಸಮಾಜ ಸದಾ ಸ್ಮರಿಸಬೇಕು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಮ್. ಬಿ. ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಹತ್ತಿರ ಮೊಗಲಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ( ಚಿಕ್ಕ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ) ಉದ್ಘಾಟಿಸಿ ಮಾತನಾಡಿ, ಸಿಂದಗಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ವಿಶೇಷವಾಗಿ ಮಕ್ಕಳ ಆರೋಗ್ಯ ಸೇವೆಗಳಿಗೆ ಇಂತಹ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡಿರುವ ಆಸ್ಪತ್ರೆ ಅನುಕೂಲವಾಗಲಿದೆ. ಉತ್ತಮ ವೈದ್ಯಕೀಯ ಸೇವೆಗಳಿಂದ ಸಮಾಜ ಆರೋಗ್ಯಕರವಾಗಲಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಶೋಕ್ ಮನಗೂಳಿ ಮಾತನಾಡಿ, ಆರೋಗ್ಯ ಸೇವೆಗಳು ಹೆಚ್ಚು ಹೆಚ್ಚು ರೂಪಗೊಳ್ಳಬೇಕಾಗಿದೆ. ಇಂದಿನ ವೈಜ್ಞಾನಿಕ ಯುಗ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮವನ್ನು ಬಿರುತ್ತಲಿವೆ. ನಿಜಕ್ಕೂ ಈ ಆಸ್ಪತ್ರೆ ಈ ಭಾಗದ ಜನರಿಗೆ ಅತ್ಯಂತ ಹೆಚ್ಚು ಅನುಕೂಲವಾಗಲಿದೆ ಎಂದ ಅವರು ಮೊಗಲಾಯಿ ಕುಟುಂಬ ಕಾಯಕ ಜೀವಿಗಳು ಈ ಸಮಾಜಕ್ಕೆ ಅವರದೇ ಆಗಿರುವ ಅನೇಕ ಕೊಡುಗೆಗಳನ್ನು ಕಾಣುತ್ತೇವೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳ ತಜ್ಞ ಡಾ. ಇಸ್ಮಾಯಿಲ್ ಮೊಗಲಾಯಿ ಮಾತನಾಡಿ, ಸುಮಾರು ವರ್ಷಗಳಿಂದ ಈ ಆಸ್ಪತ್ರೆ ಬಾಡಗಿ ಕಟ್ಟಡದಲ್ಲಿ ಪ್ರಾರಂಭಗೊಂಡಿದ್ದು ಈಗ ಸ್ವತಂತ್ರ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಚಿಕ್ಕ ಮಕ್ಕಳ ತಪಾಸಣೆ,ಶಸ್ತ್ರಚಿಕಿತ್ಸೆ ಮತ್ತು ಹೆರಿಗೆ, ನವಜಾತ ಶಿಶುಗಳ ಆರೈಕೆ ಕಾರ್ಯ ಪ್ರಾರಂಭಗೊಳ್ಳಲಿದೆ. ಒಟ್ಟು ೫೦ ಹಾಸಿಗೆ ಇರುವ ಈ ಆಸ್ಪತ್ರೆಯಲ್ಲಿ ೨೦ ಹಾಸಿಗೆಗಳು ಆಯ್. ಸಿ. ಯು ಗಳನ್ನು ಒಳಗೊಂಡಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅನೇಕ ಸಾಧಕರನ್ನ ರೈತರನ್ನ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸೈಯದ್ ರಸೂಲ್ ಮೊಗಲಾಯಿ, ಶೋಕತ್ ಅಲಿ ಮೊಗಲಾಯಿ, ಡಾ. ನೂರೈನ್ ಮೊಗಲಾಯಿ, ಡಾ. ಶಾಂತವೀರ ಮನಗೂಳಿ, ಡಾ. ಅನೀಲ ನಾಯಕ, ಅಶೋಕ ವಾರದ, ಅಶೋಕ ಅಲ್ಲಾಪೂರ, ಎಸ್. ಎಸ್. ಮಲ್ಲೇದ, ಶ್ರೀಕಾಂತ ಕುಂಬಾರ ಸೇರಿದಂತೆ ಅನೇಕರು ಇದ್ದರು.