spot_img
spot_img

ಸೈನಿಕರು ದೇಶದ ಆಸ್ತಿ ಮತ್ತು ಶಕ್ತಿ ಇದ್ದಂತೆ-  ಪ್ರೊ. ಸಂಜೀವ ಮಂಟೂರ

Must Read

spot_img
ಮೂಡಲಗಿ:-ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ “ಕಾರ್ಗಿಲ್ ವಿಜಯೋತ್ಸವ” ಕಾರ್ಯಕ್ರಮ ನಡೆಯಿತು. ಭಾರತ ದೇಶದ ರಕ್ಷಣೆಯಲ್ಲಿ ವೀರಯೋಧರು
ಒಂದು ಶಕ್ತಿಯಾಗಿ ದೇಶದ ಸಂರಕ್ಷಕರಾಗಿ ತಮ್ಮ ಜೀವವನ್ನು
ತ್ಯಾಗ ಮಾಡಿ ದೇಶವನ್ನು ಪರಕೀಯರ ದಾಳಿಯಿಂದ ರಕ್ಷಿಸುತ್ತಾರೆ. ತಮ್ಮ ಕುಂಟುಬ ತಂದೆ ತಾಯಿ ಮಕ್ಕಳನ್ನು ಬಿಟ್ಟು ದೇಶ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿ ಇಡುವ ವೀರಯೋಧರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಆರ್.ಡಿ.ಎಸ್. ಕಾಲೇಜಿನ ಉಪನ್ಯಾಸಕ
ಪ್ರೊ. ಸಂಜೀವ ಮಂಟೂರ ಹೇಳಿದರು.
       ಪಟ್ಟಣದ ಆರ್.ಡಿ.ಎಸ್. ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ
ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಅತಿಥಿ ಸ್ಥಾನವಹಿಸಿಕೊಂಡು ಅವರು ಮಾತನಾಡಿ, ಸೈನಿಕರ ಶ್ರಮದಿಂದ, ತ್ಯಾಗದಿಂದ ಇಂದು ನಾವೆಲ್ಲರೂ ಸುರಕ್ಷಿತವಾಗಿದ್ದು ನಮ್ಮ ಸೈನಿಕ ಶಕ್ತಿ ವಿಶ್ವದಲ್ಲಿಯೇ ಬಲ್ಯಾಡವಾಗಿದ್ದು ಯೋಧರ ಶ್ರಮದಿಂದ ಕಾರ್ಗಿಲ್ ನಲ್ಲಿ ಭಾರತ ಪರಾಕ್ರಮವನ್ನು ಸಾಧಿಸಿತು ಎಂದರು.
      ಅತಿಥಿ ಉಪನ್ಯಾಸಕ ಮಲ್ಲಪ್ಪ ಪಾಟೀಲ ಮಾತನಾಡಿ ದೇಶದಲ್ಲಿ ಆಡಳಿತ ಮತ್ತು ಜನರ ರಕ್ಷಣೆಯಲ್ಲಿ ಯೋಧರ ಪಾತ್ರ ಅಮರವಾಗಿದೆ ದೇಶ ಸೇವೆ ಈಶ ಸೇವೆಗೆ ಸಮಾನ ಎಂಬ ಭಾವನೆ ಸೈನಿಕರದಾಗಿರುತ್ತದೆ ಅಂತಹ
ಸೈನಿಕರನ್ನು ಹೊಂದಿರುವದು ನಮ್ಮ ಹೆಮ್ಮೆ ಎಂದರು.
    ಕಾಲೇಜು ಪ್ರಾಚಾರ್ಯ ಸತ್ಯೆಪ್ಪ ಗೋಟೂರೆ ಅಧ್ಯಕ್ಷತೆ
ವಹಿಸಿಕೊಂಡು ಮಾತನಾಡಿ ದೇಶದಲ್ಲಿ ಸುಭದ್ರ ಆಡಳಿತ ಜೊತೆಗೆ ಪರಕೀಯರ ದಾಳಿಯನ್ನು ತಡೆಗಟ್ಟಿ ನಮ್ಮ ದೇಶದ
ನಾಗರಿಕರ ರಕ್ಷಣೆಯ ಜೊತೆಗೆ ನಮ್ಮ ಭೂಮಿ ಮತ್ತು
ಸಂಪತ್ತನ್ನು ರಕ್ಷಿಸಿ ಭಾರತ ಭವ್ಯಭಾರತವಾಗುವಂತೆ ಮಾಡಿದ ಸೈನಿಕರಿಗೆ ನಮ್ಮ ನಮನಗಳು ಪ್ರತಿ ದಿನ ತಂದೆ ತಾಯಿಗಳ
ನೆನಪಿನ ಜೊತೆಗೆ ಸೈನಿಕರನ್ನು ನೆನಪಿಸಿಕೊಳ್ಳುವುದು ಮತ್ತು
ಸೈನಿಕರಿಗೆ ಗೌರವ ಕೊಡುವದನ್ನು ಪ್ರತಿಯೊಬ್ಬ ಪ್ರಜೆ ಅಳವಡಿಸಿಕೊಳ್ಳಬೇಕೆಂದರು.
     ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುನೀಲ ಸತ್ತಿ, ಡಾ.ಪ್ರಶಾಂತ ಮಾವರಕರ, ಪ್ರಕಾಶ ಚೌಡಕಿ, ಗೀತಾ ಹಿರೇಮಠ, ಪಂಚು ಬೆಣ್ಣಿ ಮತ್ತಿತರರು ಹಾಜರಿದ್ದರು.
     25 ನೆಯ ಕಾರ್ಗಿಲ್ ವಿಜಯೋತ್ಸವದ,ವೀರ ಸೈನಿಕರಿಗೆ ವಿಜಯಲಕ್ಷ್ಮಿ ಬಾಹುಬಲಿ ಜೋಕಿ ಎಂಬ ಎಸ್ ಎಸ್ ಎಲ್ ಸಿ ವಿದ್ಯಾರ‍್ಥಿನಿಯ ಕೈ ಚಳಕದಲ್ಲಿ ಬಣ್ಣ ಬಣ್ಣದ ರಂಗೋಲಿಯಲ್ಲಿ ಅರಳಿದ ಕಾರ್ಗಿಲ್ ಸ್ಮಾರಕ ಚಿತ್ರ ಎಲ್ಲರ ಗಮನಸೆಳೆಯಿತು. ರಾಘು ಮುಕ್ಕುಂದ ಸ್ವಾಗತಿಸಿದರು ಉಪನ್ಯಾಸಕ ರಾಜು
ಪತ್ತಾರ ನಿರೂಪಿಸಿದರು ಉಪನ್ಯಾಸಕಿ ಸವಿತಾ ಪಡದಲ್ಲಿ ವಂದಿಸಿದರು.
- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group