Homeಸುದ್ದಿಗಳುಬೈಲಹೊಂಗಲ : ಯೋಧರಿಂದ ಸಾಧಕರಿಗೆ ಸನ್ಮಾನ

ಬೈಲಹೊಂಗಲ : ಯೋಧರಿಂದ ಸಾಧಕರಿಗೆ ಸನ್ಮಾನ

spot_img

ಬೈಲಹೊಂಗಲ-ಭಾರತೀಯ ಸೇನೆಯಲ್ಲಿ ಸುಮಾರು 24 ವರ್ಷಗಳ ಕಾಲ ಅವಿರತವಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿಯಾಗಿ ವಿಜಯದಶಮಿ ದಿನ ಬೈಲಹೊಂಗಲ ಪಟ್ಟಣಕ್ಕೆ ಆಗಮಿಸಿದ ಯೋಧ ಗುರುನಾಥ ಸಿದ್ಧಲಿಂಗಪ್ಪ ಮುತವಾಡ ಅವರನ್ನು ಪತ್ರಿ ಬಸವ ನಗರ 3 ನೇ ಅಡ್ಡ ರಸ್ತೆಯ ಸ್ವಗೃಹದಲ್ಲಿ ಜರುಗಿದ ಆತ್ಮೀಯ ಸ್ವಾಗತ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಹಾಗೂ ಹಿರಿಯ ಪತ್ರಕರ್ತ,ಕನ್ನಡ ಜಾನಪದ ಪರಿಷತ್ತಿನ ಪತ್ರಿಕಾ ಕಾರ್ಯದರ್ಶಿ ಮಹಾಂತೇಶ ಮಲ್ಲಪ್ಪ ರಾಜಗೋಳಿ ಅವರನ್ನು ಗುರುನಾಥ ಸಿದ್ದಲಿಂಗಪ್ಪ ಮುತವಾಡ ದಂಪತಿಗಳು ಮತ್ತು ಮೈಲಾರಪ್ಪ ವಿರೂಪಾಕ್ಷಪ್ಪ ಹಡಪದ ದಂಪತಿಗಳು ಪ್ರೀತಿಯಿಂದ ಗೌರವಿಸಿ, ಸನ್ಮಾನಿಸಿದರು.

ಶಂಕರಗೌಡ ದೇಮನಗೌಡ ಪಾಟೀಲ, ಪಾರ್ವತೆವ್ವ ಮುತವಾಡ, ಆಶಾ ಕಾರ್ಯಕರ್ತೆ ಲಕ್ಷ್ಮಿ ಹಡಪದ, ಕೆಂಚಮ್ಮ ಹಡಪದ, ಸಿದ್ದಾರ್ಥ್ ಮುತವಾಡ,ಶ್ರೀಶೈಲ ಮತವಾಡ, ಪ್ರಕಾಶ ಮುತವಾಡ,ಪಕೀರಪ್ಪ ಹಡಪದ,ದೀಪಕ ಮುತವಾಡ, ಶರತ್ ಮುತವಾಡ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group