ಸೋಯಾ ಬೆಳೆಗೆ ಶಂಕು ಹುಳು; ಹೈರಾಣ ಆದ ರೈತರು

0
1371

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಸೋಯಾ ಬೆಳೆಗೆ ಶಂಕು ಹುಳುವಿನ ಕಾಟ ಶುರುವಾಗಿದ್ದು ರೈತರು ಹೈರಾಣ ಆಗಿದ್ದಾರೆ.

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ರಮೇಶ್ ಬಿರಾದಾರ ಎಂಬುವವರ ಹೊಲದಲ್ಲಿ ದಾಳಿ ಮಾಡಿದ ಶಂಕು ಹುಳವನ್ನು ತೋರಿಸಿದ ರೈತರು, ಮೊದಲು ಮಳೆಯಾಗಿ ಬಿತ್ತನೆ ತಡವಾಯಿತು, ಈಗ ಸಾಲ ಸೋಲ ಮಾಡಿ ಬಿತ್ತನೆ ಮಾಡಿದರೆ ಈ ಶಂಕು ಹುಳುವಿನ ಕಾಟ ಆರಂಭವಾಗಿದೆ. ಈಗಾಗಲೆ ಭಾತಂಭ್ರಾ ಗ್ರಾಮದಲ್ಲಿ ಶೇ. ೮೦ ರಷ್ಟು ಸೋಯಾ ಬೆಳೆ ನಾಶವಾಗಿದೆ. ಕೃಷಿ ಅಧಿಕಾರಿಗಳು ಈ ಹುಳುವಿನ ನಾಶಕ್ಕೆ ರೈತರಿಗೆ ಔಷಧ ಉಚಿತವಾಗಿ ನೀಡಬೇಕು ಹಾಗೂ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಶಂಕು ಹುಳುವಿನ ಹಿನ್ನೆಲೆಯಲ್ಲಿ ನೋಡಿದರೆ:

ಈ ಶಂಕು ಹುಳ ಒಬ್ಬ ರೈತರ ಹೊಲದಲ್ಲಿ ದಾಳಿ ಮಾಡಿದರೆ ಒಂದು ದಿವಸದಲ್ಲಿ ಒಂದು ಎಕರೆ ಬೆಳೆದ ಸೋಯಾ ತಿಂದು ಸಂಪೂರ್ಣ ಹೊಲ ಖಾಲಿ ಮಾಡುತ್ತದೆ.

ಒಬ್ಬ ರೈತನ ಬೆಳೆ ತಿಂದು ಮುಗಿಸಿದ ಮೇಲೆ ಇನ್ನೊಂದು ಹೊಲದಲ್ಲಿ ದಾಳಿ ಮಾಡಿ ಆ ರೈತನ ಹೊಲ ಸಂಪೂರ್ಣ ಖಾಲಿ ಮಾಡುತ್ತದೆ. ಇಷ್ಟೊಂದು ಅಪಾಯಕಾರಿ ಯಾಗಿದ್ದು ಈ ಶಂಕು ಹುಳುವಿನ ದಾಳಿಗೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ರೈತರ ಹೈರಾಣ ಆಗಿದ್ದಾರೆ ಎಂದು ಹೇಳಬಹುದು.

ರೈತರು ಸಾಲ ಮಾಡಿ ಸೋಯಾ ಬೀಜ ಖರೀದಿ ಮಾಡಿದರೆ. ಬೆಳೆ ಬೆಳೆಯುವ ಮುಂಚೆಯೇ ಈ ಶಂಕು ಹುಳು ದಾಳಿ ಮಾಡುತ್ತಿದೆ.

ಕೂಡಲೇ ಕೃಷಿ ಇಲಾಖೆ ಎಚ್ಚತ್ತುಕೊಂಡು ಹಾನಿಗೊಂಡ ರೈತರಿಗೆ ಪರಿಹಾರ ನೀಡಿ ಮುಂದೆ ಆಗಬಹುದಾದ ಅನಾಹುತಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ವರದಿ: ನಂದಕುಮಾರ ಕರಂಜೆ, ಬೀದರ