ಇಷ್ಟರಲ್ಲಿಯೇ ಟ್ರಾಯ್ ನಿಂದ ಹೊಸ ನಿಯಮ
ಹೊಸದಿಲ್ಲಿ – spam calls ಎಂದು ಕರೆಯಲ್ಪಡುವ ಅನಾಮಧೇಯ ಕರೆಗಳ ಹೆಸರುಗಳು ಇನ್ನು ಮುಂದೆ ನಿಮ್ಮ ಮೊಬೈಲ್ ನ ಸ್ಕ್ರೀನ್ ಮೇಲೆ ಪ್ರಕಟಗೊಳ್ಳಲಿದೆ.
ಭಾರತೀಯ ದೂರಸಂಚಾರ ನಿಯಮ ಪ್ರಾಧಿಕಾರ – ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ( ಟ್ರಾಯ್) ಈ ಬಗ್ಗೆ ಹೊಸ ನಿಯಮವೊಂದನ್ನು ಜಾರಿಗೊಳಿಸಲು ಸಿದ್ಧವಾಗಿದ್ದು ಎಲ್ಲಾ ಮೊಬೈಲ್ ಸೇವಾ ಕಂಪನಿಗಳಿಗೆ ತಮ್ಮ ಕಾಲರ್ ಐಡಿ ಪ್ರಕ್ರಿಯೆ ಸಕ್ರಿಯಗೊಳಿಸಲು ನಿರ್ದೇಶನ ನೀಡಿದೆ ಎನ್ನಲಾಗಿದೆ.
ಜಿಯೋ, ಏರ್ ಟೆಲ್, ವೊಡಾಫೋನ್-ಐಡಿಯಾ ಹಾಗೂ ಬಿಎಸ್ಎನ್ಎಲ್ ಕಂಪನಿಗಳಿಗೆ ಟ್ರಾಯ್ ನಿರ್ದೇಶನ ನೀಡಿದ್ದು ಸದ್ಯದಲ್ಲಿಯೇ ಕಾಲರ್ ಐಡಿ ಪ್ರದರ್ಶನಗೊಳ್ಳುವ ಕ್ರಿಯೆ ಜಾರಿಗೆ ಬರಲಿದೆ ಆದರೆ ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಸ್ಪ್ಯಾಮ್ ಕಾಲರ್ ಗಳ ಹೆಸರು ತೋರಿಸಬೇಕಾದರೆ ತಮ್ಮ ಸೇವಾ ಕಂಪನಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎನ್ನಲಾಗಿದೆ.
ಸದ್ಯಕ್ಕೆ ಕಾಲರ್ ಐಡಿ ಗುರುತಿಸಲು ಅನೇಕ ಆ್ಯಪ್ ಗಳು ಲಭ್ಯವಿವೆ ಕೆಲವು ಅದಕ್ಕೆ ಶುಲ್ಕ ವಿಧಿಸುತ್ತವೆ. ಟ್ರಾಯ್ ನ ಈ ಕಾಯ್ದೆಯಿಂದ ಈ ಆ್ಯಪ್ ಗಳು ಸಂಕಟಕ್ಕೆ ಈಡಾಗಲಿವೆ ಎನ್ನಲಾಗುತ್ತಿದೆ.