spot_img
spot_img

ವಿಕಲಚೇತನರಿಗೆ ವಿಶೇಷ ಸೌಲಭ್ಯ

Must Read

- Advertisement -

ಬೆಳಗಾವಿ. ದಿ ಅಸೋಸಿಯೇಷನ್ ಆಫ್ ಫಿಸಿಕಲಿ ಹ್ಯಾಂಡಿಕ್ಯಾಪ್ಡ್, ಆಳ್ವಾನ ಗಲ್ಲಿ, ಬೆಳಗಾವಿಯು ತನ್ನ 50ನೇ ವರ್ಷಾಚರಣೆಯ ಅಂಗವಾಗಿ ಅಮೆರಿಕಾದ ಪ್ರತಿಷ್ಠಿತ ಸಂಸ್ಥೆಯಾದ ವೈಸ್ ಆಫ್ ಫಿಸಿಕಲಿ ಏಬಲ್ಡ್ ಪೀಪಲ್ ಇವರ ಸಹಯೋಗದೊಂದಿಗೆ ದಿವ್ಯಾಂಗರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಅಂದರೆ ಹೊಲಿಗೆ ಯಂತ್ರ ವಿತರಣೆ ಹಾಗೂ ಗಾಡಿಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ ಸಂಸದೆ ಶ್ರೀಮತಿ ಮಂಗಳ ಎಸ್. ಅಂಗಡಿ ಅವರು ಭಾಗವಹಿಸಿ, ವಿಶೇಷಚೇತನರೆಂದರೆ ವಿಶೇಷ ಸಾಮರ್ಥ್ಯವುಳ್ಳವರು, ವಿಶೇಷ ವ್ಯಕ್ತಿತ್ವವುಳ್ಳವರು, ವಿಶೇಷವಾದದ್ದನ್ನು ಮಾಡುವಂತವರು ಎಂದು ನುಡಿದರು.

- Advertisement -

ಅವರು ಕಾರ್ಯಕ್ರಮದಲ್ಲಿ ವಿಶೇಷಚೇತನರಿಗೆ 35 ಹೊಲಿಗೆ ಯಂತ್ರ ಹಾಗೂ 20 ಗಾಡಿಗಳನ್ನು ನೀಡಿದರು, ಇದರಿಂದಾಗಿ ಅವರು ಸ್ವಾವಲಂಬನೆಯ ಜೀವನ ನಡೆಸಲು ಸಹಕಾರವಾಗಿದೆ ಎಂದರು.

ಅದೇ ರೀತಿ ವೈಸ್ ಆಫ್ ಫಿಸಿಕಲಿ ಏಬಲ್ಡ್ ಪೀಪಲ್ ನ ಸಂಸ್ಥಾಪಕ ಅಧ್ಯಕ್ಷರಾದ ಪ್ರಣವ ದೇಸಾಯಿ ಅವರು ಸಂಸ್ಥೆಯು ವಿಶ್ವದಾದ್ಯಂತ 11000 ಸ್ವಯಂ ಸೇವಕರನ್ನು ಹೊಂದಿದ್ದು, 10000ಕ್ಕಿಂತಲೂ ಅಧಿಕ ಜನರು ಇದರ ಅಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಈ ಎರಡು ಅಸೋಸಿಯೇಷನ್ ಗಳು ದಿವ್ಯಾಂಗರಿಗೆ ಅನೇಕ ಸೌಲಭ್ಯಗಳನ್ನು ನೀಡಿ ಅವರು ಸ್ವಾವಲಂಬನೆ ಜೀವನ ನಡೆಸುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಅಸೋಸಿಯೇಷನ್ ನ ಸರ್ವಸದಸ್ಯರು, ಪದಾಧಿಕಾರಿಗಳು, ಹಾಗೂ ಅಸೋಸಿಯೇಷನನ ಕಾರ್ಯದರ್ಶಿಗಳಾದ ಗಿರೀಶ ಸವ್ವಾಸೇರಿ, ಎಕ್ಸಿಕ್ಯೂಟಿವ್ ಮೆಂಬರ್ ಆದ ವಿಜಯ ಚೌಗಲೆ ಅವರು ಹಾಜರಿದ್ದರು.

- Advertisement -
- Advertisement -

Latest News

ತತ್ವಬೋಧನೆಗೆ ಮಠಗಳು ಸಿದ್ಧವಾಗಬೇಕು – ಬಿಇಓ ಯಡ್ರಾಮಿ

ಸಿಂದಗಿ: ಆರ್ಥಿಕ ಸಬಲತೆಯ ಮಠಗಳಾಗದೇ ತತ್ವಭೋಧನೆಗೆ ಮಠಗಳು ಸಿದ್ಧವಾಗಬೇಕು. ಶಾಲೆಗಳಲ್ಲಿ ಶಿಸ್ತು ಮತ್ತು ಶಿಕ್ಷಣ ಕಲಿಯಬಹುದು ಮಠಗಳಿಂದ ಆಧ್ಯಾತ್ಮಿಕತೆ ಮತ್ತು ಸಂಸ್ಕಾರ ಸಿಗುವುದು ಅಲ್ಲದೆ ವಿದೇಶಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group