ವಿಶೇಷ ವರದಿ ಸಿಂದಗಿ : ಕಂಪ್ಯೂಟರ್ ಉತಾರ ಕೊಡಲು ಲಂಚ

Must Read

ದಾಖಲೆ ಪಡೆಯಲು ಹರಸಹಾಸ ಪಡುತ್ತಿರುವ ಸಾರ್ವಜನಿಕರು.

ವರದಿ: ಪಂಡಿತ ಯಂಪೂರೆ.

ಸಿಂದಗಿ; ಪಟ್ಟಣದ ಸೌಂದರೀಕರಣಕ್ಕೆ ಯಾವುದೇ ಮುಲಾಜಿಗೆ ಬಿಳದೇ ಅತಿಕ್ರಮಣ ಜಾಗೆಗಳಲ್ಲಿದ್ದ ಡಬ್ಬಾ ಮುಕ್ತ ಮಾಡಲು ದಿಟ್ಟ ಹೆಜ್ಜೆಯಿಟ್ಟು ಊರೆಲ್ಲ ಜೆಸಿಬಿಗಳ ಸದ್ದು ಮಾಡಿ ಬುಲ್ಡೋಜರ  ಬಾಬಾ ಎಂದೆ ಜನರ ಹೆಗ್ಗಳಿಕೆಗೆ ಪಾತ್ರರಾದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರಿಗೆ ಪ್ರಶಂಸೆಗೆ ವ್ಯಕ್ತವಾಗಿದ್ದರೆ ಕಂಪ್ಯೂಟರ ಉತಾರೆ ನೆಪದಲ್ಲಿ ನಿತ್ಯ ಭ್ರಷ್ಟಾಚಾರದಲ್ಲಿ ತೊಡಗಿದ ಪುರಸಭೆ ಸಿಬ್ಬಂದಿಗೆ ಕಡಿವಾಣ ಹಾಕುತ್ತಿಲ್ಲವೇಕೆ ಎನ್ನುವದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

ಹೌದು. ಏನ್ರಿ ಮನೆ ದಾಖಲೆಗಳಿಗಾಗಿ ನಿತ್ಯ ಅಲೆದಾಡಿದರು ಸಿಬ್ಬಂದಿ ಮಾತ್ರ ದಿನಕ್ಕೊಂದು ಸಬೂಬು ಹೇಳಿ ಸಾಗ ಹಾಕುತ್ತಾರ‍್ರಿ. ಕೆಲ ದಿನ ದಾಖಲಾತಿ ಪಡೆದುಕೊಳ್ಳದಿದ್ರ ನಮ್ಮ ಮನೆ ಮತ್ತೊಬ್ಬರ ಹೆಸರ್ಲೆ ಆಗಿ ಬಿಡತಾದ ಅನ್ನುವ ಅಂಜಿಕಿ ಐತ್ರಿ ಎಂಬುದು ಸಾರ್ವಜನಿಕರು ಕುಳೀತು ಸುಸ್ತಾಗಿ ಶಪಿಸುತ್ತ ದಾಖಲೆಗಳಿಗಾಗಿ ಪರದಾಡುತ್ತಿರುವ ದೃಶ್ಯ ಕಂಡು ಬಂತು

ಮನೆ ಮಾಲಿಕ ಈರಪ್ಪ ಕುಂಚಗನೂರ, ಹಾಗೂ ಬಂದೆನವಾಜ ಬಡೆಗರ ಅವರಿಂದ ಹಣ ಪಡೆದ ಬಗ್ಗೆ ದೂರವಾಣಿಯ ಕರೆಯಲ್ಲಿ ಸಬೂಬ ಇದ್ದರು ಕೂಡಾ ಸಾಕ್ಷಿ ಇದ್ದರೆ ತೊರಿಸಿ ಎಂದು ಪುರಸಭೆ ಸಿಬ್ಬಂದಿ ಅಲ್ತಾಪ ಮುಜಾವರ ಅವರು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂತು

ಅಧ್ಯಕ್ಷರ  ತರಾಟೆ; ನಾನು ಮೂರು ಬಾರಿ ಆಯ್ಕೆಯಾಗಿ ಈ ಬಾರಿ ಅದ್ಯಕ್ಷನಾಗಿ ಪಟ್ಟಣದ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕು ಎಂದು ದಲ್ಲಾಳಿಗಳನ್ನು ಹೊರ ಹಾಕಿ ಭ್ರಷ್ಟಾಚಾರ ತಡೆಗಟ್ಟಲು ಪ್ರಯತ್ನಿಸುತ್ತಿದ್ದರೆ ಪುರಸಭೆ ಸಿಬ್ಬಂದಿಯಿಂದಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುಲ್ಲೆದೆದಿದೆ ಯಾರ ಮಾನ ಹರಾಜು ಮಾಡಬೇಕೆಂದಿದ್ದೀರಿ ಹೀಗೆ ನಡೆದರೆ ಒಬ್ಬೊಬ್ಬರ ಮೇಲೆ ಕ್ರಿಮಿನಲ್ ಕೇಸು ಹಾಕುತ್ತೇನೆ ಎಂದು ಸಿಬ್ಬಂದಿಗೆ ಅದ್ಯಕ್ಷ ಶಾಂತವೀರ ಬಿರಾದಾರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದ್ದು ಅಚ್ಚರಿ ಮೂಡಿಸಿತು.

ಆಸ್ತಿ ನಂ.೫೯೪/ಬ ಹಣಮಂತ ಪಾತ್ರೋಟಿ ಎಂಬುವವರ ಹೆಸರಲ್ಲಿ ೧೯೮೭ರಲ್ಲಿ ಖರೀದಿಯಾಗಿದೆ ಇಲ್ಲಿಯವರೆಗೆ ಆಸ್ತಿ ಕರ ಪಾವತಿ ಕೂಡಾ ಆಗಿದೆ ಆದರೆ ಕೆಲ ದಿನಗಳ ಹಿಂದೆ ಹೊಸ ರಜಿಷ್ಟರನಲ್ಲಿ ನಮ್ಮ ಆಸ್ತಿಯಲ್ಲಿ ಬೇರೆಯವರ ಹೆಸರು ನಮೂದಾಗಿದೆ ಹೀಗಾದರೆ ಪುರಸಭೆಯಲ್ಲಿದ್ದ ರಜಿಷ್ಟರಗಳನ್ನು ನಮ್ಮ ಮನೆಯಲ್ಲಿಯೇ ಇಡುವಂತ ಪ್ರಸಂಗ ಬಂದಿದೆ ಅದಕ್ಕೆ ಪ್ರತಿ ವರ್ಷ ಕರ ಪಾವತಿಸಿ ಹೊಸ ಉತಾರೆ ಪಡೆದುಕೊಳ್ಳೋಣ ಎಂದರೆ ನಿತ್ಯ ಕೆಲಸ ಬಿಟ್ಟು ತಿರುಗಾಡಿದರು ಉತಾರೆ ಸಿಗುತ್ತಿಲ್ಲ
ಹುಲಗವ್ವ ಪಾತ್ರೋಟಿ
೭ ನೇ ವಾರ್ಡ ನಿವಾಸಿ

; ಆಸ್ತಿ ನಂ ೭೫೬/ಬ/೧೮೨ ಇದರ ಕಂಪ್ಯೂಟರ ಉತಾರೆ ಮಾಡಲು ಅರ್ಜಿ ಸಲ್ಲಿಸಿ ಮೂರು ತಿಂಗಳಾಯಿತು ಇನ್ನೂ ದಾಖಲಾತಿ ಮಾಡಿಲ್ಲ ಬಂದಾಗೊಮ್ಮೆ ನಾಳೆ ಬನ್ನಿರಿ ಎನ್ನುವ ಉತ್ತರ ಸಿಗುತ್ತಿರುವುದರಿಂದ ಬೇಗ ಮಾಡಿ ಎಂದು ವಾರ್ಡಗೆ ಸಂಬಂದಿಸಿದ ಸಿಬ್ಬಂದಿ ಅಲ್ತಾಫ ಮುಜಾವರ ಅವರನ್ನು ವಿನಂತಿಸಿದರು ಕೂಡಾ ಯಾವುದೇ ಪ್ರಯೋಜನೆ ಕಾಣದೇ ರೂ ೫ ಸಾವಿರ ಹಣ ನೀಡಿ ತಿರುಗಾಡುವಂತಾಗಿ ಮುಖ್ಯಾಧಿಕಾರಿಗೆ ದೂರವಾಣಿ ಮೂಲಕ ವ್ಯವಸ್ಥಾಪಕರಿಗೆ ನೇರವಾಗಿ ಬೇಟಿಯಾಗಿ ಅಹವಾಲು ತೋಡಿಕೊಂಡಾಗ ನಿನ್ನೆ ಉತಾರೆ ಮಾಡಿದ್ದಾರೆ ವಿದ್ಯಾವಂತರಿಗೆ ಹೀಗಾದರೆ ಅನಕ್ಷರಸ್ಥರ ಗತಿ ಏನು ಇದರ ಬಗ್ಗೆ ಅದ್ಯಕ್ಷರು ನಿಗಾ ವಹಿಸಿಬೇಕು
ಈರಪ್ಪ ಕುಂಚಗನೂರ
ಪಟ್ಟಣದ ನಿವಾಸಿ

ಪಟ್ಟಣದ ಸೌಂದರೀಕರಣಕ್ಕೆ ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರು ಸಹಕಾರ ನೀಡಿದ್ದು ಸ್ವಾಗತಾರ್ಹವಾದರೆ ಭ್ರಷ್ಟಾಚಾರ ತಡೆಗಟ್ಟಲು ಹೊರಗಿನಿಂದ ಬಂದು ಕೆಲಸ ಮಾಡುತ್ತಿರುವವರನ್ನು ಹೊರ ಹಾಕಲಾಗಿದೆ ಇನ್ನು ಸಿಬ್ಬಂದಿಯಿಂದ ಭ್ರಷ್ಟಾಚಾರ ನಡೆಯುತ್ತಿದ್ದರೆ ಸಹಿಸುವುದಿಲ್ಲ ಸ್ವಲ್ಪ ಸುಳಿವು ಸಿಕ್ಕರು ಸಹ ಅದನ್ನು ಸರಿಪಡಿಸುವೆ. ಸಾರ್ವಜನಿಕರಿಗೆ ಬೇಕಾಗುವ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುವಂತೆ ಸೂಚಿಸುತ್ತೇನೆ

 ಶಾಂತವೀರ ಬಿರಾದಾರ
ಅಧ್ಯಕ್ಷರು ಪುರಸಭೆ ಸಿಂದಗಿ

 

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group