ವಿಶೇಷ ಶಾಲಾ ಸಮವಸ್ತ್ರ ವಿತರಣೆ

Must Read

ಬಾಗಲಕೋಟೆ :  ಹುನಗುಂದ ತಾಲೂಕಿನ ಅಮೀನಗಡ ಸಮೀಪದ ಹೊನ್ನರಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದ ವಿಶೇಷ ಸಮವಸ್ತ್ರವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲಾಖೆ ಮಕ್ಕಳಿಗೆ ಕೊಡ ಮಾಡುವ ಎರಡು ಜೊತೆ ಸಮವಸ್ತ್ರವಲ್ಲದೆ ಶನಿವಾರಕೊಮ್ಮೆ ಧರಿಸಲು ವಿಶೇಷ ಸಮವಸ್ತ್ರವನ್ನು ಶಾಲೆಯ ಎಸ್ ಡಿ ಎಂ ಸಿ ಹಾಗೂ ಶಾಲಾ ಸಿಬ್ಬಂದಿಯ ಅಪೇಕ್ಷೆಯ ಮೇರೆಗೆ ಪಾಲಕರು ತಮ್ಮ ಸ್ವಂತ ಖರ್ಚಿನಲ್ಲಿ ಕೊಡಿಸಿದ್ದು ಶಾಲಾ ಮಕ್ಕಳಲ್ಲಿ ಶಿಸ್ತು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಸರಕಾರ ಪೂರಕ ಪೌಷ್ಠಿಕ ಆಹಾರಗಳಾದ ಹಾಲು, ಮೊಟ್ಟೆ, ಶೇಂಗಾ ಚಿಕ್ಕಿ, ರಾಗಿ ಮಾಲ್ಟ್ ಕೊಟ್ಟಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಉಚಿತ ಪಠ್ಯಪುಸ್ತಕ, ಬೋಧನೋಪಕರಣಗಳು, ಪ್ರತಿಭಾವಂತ ಶಿಕ್ಷಕರನ್ನು ನೀಡಿದೆ. ಹಲವಾರು ಸೌಲಭ್ಯಗಳನ್ನು ಹೊಂದಿರುವ ಈಗಿನ ಸರಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಆದ್ದರಿಂದ ಮಕ್ಕಳು ಆಸಕ್ತಿಯಿಂದ ಓದಿ ವಿದ್ಯಾವಂತರಾಗಬೇಕು ಎಂದರು.

ಎಸ್‌ಡಿಎಂಸಿ ಸದಸ್ಯ ಸಂಗಪ್ಪ ಈರಣ್ಣವರ ಮಾತನಾಡುತ್ತ, ಮಕ್ಕಳು ವೈಯಕ್ತಿಕ ಸ್ವಚ್ಛತೆ, ನೈರ್ಮಲ್ಯ, ಶಿಸ್ತು, ಸಂಯಮಕ್ಕೆ ಒತ್ತು ನೀಡುವ ಜೊತೆಗೆ ಕಲಿಕೆಯಲ್ಲೂ ಮುಂದೆ ಬಂದು ಶಾಲೆ ಮತ್ತು ಹೆತ್ತವರಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.

ಶಿಕ್ಷಕ ಎಸ್ ಎಸ್ ಲಾಯದಗುಂದಿ ಮಾತನಾಡಿ, ಶಾಲಾ ಅಭಿವೃದ್ಧಿಯಲ್ಲಿ ಸಮುದಾಯದ ಸಹಕಾರವು ಅತಿ ಅವಶ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಶಾಲೆ ಮುಂಚೂಣಿಯಲ್ಲಿದೆ ಎಂದರು.
ಶಿಕ್ಷಕರಾದ ಎಂ ಬಿ ವಂದಾಲಿ, ಎಸ್ ಎಲ್ ಕಣಗಿ, ಅಶೋಕ ಬಳ್ಳಾ, ಬಿ ಎನ್ ಗಟ್ಟಿಗನೂರ ಉಪಸ್ಥಿತರಿದ್ದರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group