ಮೂಡಲಗಿ : ಆಗಷ್ಟ,13 ರಂದು ಪಂಜಾಬಿನಲ್ಲಿ ನಡೆದ ನ್ಯಾಶನಲ್ ಪ್ಯಾರಾ ಓಪನ್ ಚಾಂಪಿಯನ್ ಶಿಪ್ ನಲ್ಲಿ ಮೂಡಲಗಿಯ ಲಕ್ಷ್ಮೀ ರಡೇರಟ್ಟಿ ಬೆಳ್ಳಿ ಪದಕ ಪಡೆದಿದ್ದಾರೆ.
ಅಲ್ಲದೆ ಮಹಾರಾಷ್ಟ್ರದ ನಾಶಿಕನಲ್ಲಿ ಮುಂದಿನ ತಿಂಗಳು ಸಪ್ಟೆಂಬರ್ 7 ಮತ್ತು 8 ರಂದು ನಡೆಯುವ ಏಶಿಯನ್ ಪ್ಯಾರಾ ಓಪನ್ ಚಾಂಪಿಯನ್ ಶಿಪ್ ಗೆ ಹಾಗೂ ಅದೆ ತಿಂಗಳು 22 ಸಪ್ಟೆಂಬರ್ ವರ್ಲ್ಡ್ ಪ್ಯಾರಾ ಓಪನ್ ಚಾಂಪಿಯನ್ ಶಿಪ್ ಗೆ ಲಕ್ಷ್ಮೀ ಆಯ್ಕೆ ಆಗಿದ್ದಾರೆ.
ಮಲ್ಲಪ್ಪ ಮತ್ತು ಗಿರಿಜಾ ಎಂಬ ದಂಪತಿಗಳ ಮಗಳಾಗಿ ಏಪ್ರಿಲ್ 4, 2003 ರಂದು ಮೂಡಲಗಿ ಯಲ್ಲಿ ಜನಿಸಿದ ಲಕ್ಷ್ಮೀ 1 ರಿಂದ 4 ನೆಯ ತರಗತಿಯವರೆಗೆ ಬಿ.ವ್ಹಿ.ಸೋನವಾಲಕರ ಮೂಡಲಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ, ಆ್ಯಕ್ಸಸ್ಪಡ್ ಆಂಗ್ಲ ಮೀಡಿಯಂ ಬೈಲಹೊಂಗಲದಲ್ಲಿ 5 ರಿಂದ 6 ನೆಯ ತರಗತಿಯಲ್ಲಿ ಓದಿದ್ದಳು, 7 ರಿಂದ 10 ನೆಯ ತರಗತಿ ಸಾಲಹಳ್ಳಿಯಲ್ಲಿ ವಿದ್ಯಾಭ್ಯಾಸ ಮತ್ತು ಪಿಯೂಸಿ ಓದಿದ್ದು ಬೆಳಗಾವಿಯ ಅಂಗಡಿ ಕಾಲೇಜಿನಲ್ಲಿ.
ಈಗ ಕ್ರೀಡೆಯಲ್ಲಿ ವಿಶ್ವ ಮಟ್ಟದಲ್ಲಿಯೇ ದೇಶದ ಮತ್ತು ತನ್ನ ಊರಿನ ಕೀರ್ತಿ ತಂದಿದ್ದಾಳೆ ಕುಮಾರಿ ಲಕ್ಷ್ಮೀ.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಕುಮಾರಿ ಲಕ್ಷ್ಮಿಯವರ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿ, ಈ ಕುಮಾರಿಗೆ ತರಬೇತಿ ನೀಡಿದ ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿದರು. ಮೂಡಲಗಿ ಪಟ್ಟಣದ ಶಿಕ್ಷಕರು,ಸಂಘ ಸಂಸ್ಥೆಗಳು ಮತ್ತು ನಾಗರಿಕರು ಕುಮಾರಿ ಲಕ್ಷ್ಮೀ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.