ಹುನಗುಂದ: ಪಟ್ಟಣದ ವಿದ್ಯಾನಗರದಲ್ಲಿರುವ ಸ್ಟಾರ್ ಕಿಡ್ಸ್ ಪ್ಲೇ ಹೋಮಿನಲ್ಲಿ ಅಲ್ಲಿಯ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕ್ರೀಡಾ ಚಟುವಟಿಕೆಗೆ ಕ್ರೀಡಾ ದಿನವನ್ನು ಪಾಲಕರಾದ ಕೃಷ್ಣ ಜಾಲಿಹಾಳ ಹಾಗೂ ಹುಸೇನಿ ಸಂಧಿಮಣಿ ಚಾಲನೆ ನೀಡಿದರು.
ಚಾಲನೆ ನೀಡಿದ ರೈತ ಮುಖಂಡ ಕೃಷ್ಣ ಜಾಲಿಹಾಳ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ದೈಹಿಕ ಸಾಮರ್ಥ್ಯ ಹಾಗೂ ಆತ್ಮಸ್ಥೈರ್ಯ ತುಂಬಲು ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರಿಂದ ಅವರ ದೈಹಿಕವಾಗಿ ಬದಲಾವಣೆ ಹೊಂದುತ್ತಾರೆ ಎಂದರಲ್ಲಿ ಮಕ್ಕಳಿಗೆ ಚಿಕ್ಕವರಿದ್ದಾಗಲೇ ದೈಹಿಕವಾಗಿ ಮಾನಸಿಕವಾಗಿ ಬಲವರ್ಧನೆಗೊಳಿಸಲು ಕ್ರೀಡಾ ಚಟುವಟಿಕೆಗಳು ಅವಶ್ಯಕ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಹಾಜರಿದ್ದರು

