ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್. ಮತ್ತು ವಿವಿಧ ವೇದಿಕೆಗಳ ಕಾರ್ಯಚಟುವಟಿಕೆಯ ಉದ್ಘಾಟನಾ ಸಮಾರಂಭ

0
221

ಕಲ್ಲೋಳಿ: ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಸನ್ ೨೦೨೩-೨೪ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್. ಮತ್ತು ವಿವಿಧ ವೇದಿಕಗಳ ಕಾರ್ಯಚಟುವಟಿಕೆಯ ಉದ್ಘಾಟನಾ ಸಮಾರಂಭ ಕಾಲೇಜಿನ ಆವರಣದಲ್ಲಿ ಭವ್ಯ ರಂಗಸಜ್ಜಿಕೆಯಲ್ಲಿ ಇದೇ ಶುಕ್ರವಾರ ೨೯/೧೨/೨೦೨೩ರಂದು ಅದ್ಧೂರಿಯಾಗಿ ಜರುಗಲಿದೆ.

ಸಂಸ್ಥೆಯ ಚೇರಮನ್ ರಾದ  ಬಸಗೌಡ ಶಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹುಬ್ಬಳ್ಳಿಯ ಖ್ಯಾತ ಜಾನಪದ ವಿದ್ವಾಂಸರಾದ ಡಾ. ರಾಮು ಮೂಲಗಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಡಾ. ಆರ್.ಎನ್.ಪಾಟೀಲ, ಬಿ.ಎಸ್.ಗೋರೋಶಿ, ಬಿ.ಬಿ.ಬೆಳಕೂಡ, ಬಿ.ಎಸ್.ಕಡಾಡಿ, ಎಸ್.ಬಿ.ಜಗದಾಳಿ, ಎಸ್.ಎಂ.ಖಾನಾಪೂರ, ಎಂ.ಎಸ್.ಕಪ್ಪಲಗುದ್ದಿ, ಶ್ರೀಮತಿ ಬಾಳವ್ವ ಕಂಕಣವಾಡಿ, ಎಂ.ಡಿ.ಕುರಬೇಟ, ಬಿ.ಕೆ.ಗೋರೋಶಿ, ಶ್ರೀಮತಿ ಮಲ್ಲವ್ವ ಎಸ್ ಹೆಬ್ಬಾಳ, ಎಸ್.ಆರ್.ಮರಗನ್ನವರ,  ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಾಚಾರ್ಯ ಡಾ. ಸುರೇಶ ಭೀ. ಹನಗಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.