ಸಿಂದಗಿ: ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಸಂಸ್ಕೃತಿವುಳ್ಳ ಕ್ರೀಡೆಗಳಿಗೆ ಮಾರುಹೋಗದೇ ದೇಶಿಯ ಕ್ರೀಡೆಗಳನ್ನು ಬೆಳೆಸುವ ಮೂಲಕ ತಮ್ಮ ಆರೋಗ್ಯಕರ ಜೀವನಕ್ಕಾಗಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಎನ್ ಆರ್ ತಿವಾರಿ ಹೇಳಿದರು.
ಮೋರಟಗಿ ಗ್ರಾಮದ ಕಲ್ಪವೃಕ್ಷ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸಹಯೋಗದಲ್ಲಿ ನಡೆದ ೨೦೨೫-೨೬ನೇ ಸಾಲಿನ ಜಿಲ್ಲಾ ಮಟ್ಟದ ಥ್ರೋ ಬಾಲ ಪಂದ್ಯಾವಳಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಪೀಳಿಗೆ ದುಶ್ಚಟಕ್ಕೆ ಅಂಟಿಕೊಂಡು ಸುಂದರವಾದ ಬದುಕನ್ನು ಸ್ಮಶಾನದತ್ತ ಸಾಗಿಸುತಿದ್ದಾರೆ, ಮನುಷ್ಯನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ, ಹುಟ್ಟು ಸಾವಿನ ಮಧ್ಯದಲ್ಲಿ ನಾವು ಮಾಡಿದಂತ ಸಾಧನೆಗಳೇ ಶಾಶ್ವತ, ಕ್ರೀಡಾ ಪಟುವಿಗೆ ಸರಕಾರ ಶೇ ೨% ರಷ್ಟು ಮೀಸಲಾತಿ ನೀಡಿದೆ ಉತ್ತಮ ಆಹಾರ ಸೇವಿಸಿ ಪ್ರತಿನಿತ್ಯ ವ್ಯಾಯಾಮ, ಯೋಗಾಸನ, ಮಾಡುವ ಮೂಲಕ ದೇಹವನ್ನು ಸದೃಢ ಮಾಡಿಕೊಂಡು ಸ್ಪರ್ಧೆಗಳಲ್ಲಿ ಬಾಗವಹಿಸಿ ಅಂತಾರಾಷ್ಟ್ರಿಯ ಆಟಗಾರರಾಗಿ ಹೊರಹೊಮ್ಮಿ ಸುಂದರವಾದ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರಮೇಶ ಬಿರಾದಾರ ಮಾತನಾಡಿ, ಜಿಲ್ಲೆಯಿಂದ ತಾಲೂಕಿನಿಂದ ೨ ತಂಡಗಳಂತೆ ೨೮ ತಂಡಗಳು ಬಾಗಹಿಸಿವೆ ಪಂದ್ಯಾವಳಿಯಲ್ಲಿ ನಿರ್ಣಾಯಕರ ನಿರ್ಣಯ ಅಂತಿಮವಾಗಿರುತ್ತದೆ. ಸೋಲು ಗೆಲುವಿನ ಸೋಪಾನ ಹೀಗಾಗಿ ಆಟಗಾರರು ಸೋಲು ಗೆಲುವು ಎರಡನ್ನು ಸಮನಾಗಿ ಸ್ವೀಕರಿಸಬೇಕು ಗೆಲುವು ಮುಖ್ಯವಲ್ಲ ಆಟದಲ್ಲಿ ಬಾಗವಹಿಸುವುದು ಮುಖ್ಯ ಕ್ರೀಡೆ ಒಂದು ಯುದ್ದ ಇದ್ದಂತೆ ಆದರೆ ಅದನ್ನು ಕೊಲ್ಲಬಾರದು ಗೆಲ್ಲಬೇಕು ಇಟ್ಟ ಗುರಿಯನ್ನು ಮೆಟ್ಟಿ ನಿಂತು ಗೆಲ್ಲುವವರೆಗೂ ಛಲಬಿಡದೆ ಗುರಿಯತ್ತ ಸಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಟ್ಟದ ಕ್ರೀಢಾಕೂಟದಲ್ಲಿ ೨೮ ತಂಡಗಳು ಸ್ಪರ್ಧೆಯಲ್ಲಿ ಬಾಗವಹಿಸಿದ್ದವು ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ೧೪ವರ್ಷದ ಬಾಲಕರ ಪ್ರಥಮ ಸ್ಥಾನವನ್ನು ಪಡೆದರೆ ಇಂಡಿ ತಾಲೂಕಿನ ೧೪ವರ್ಷದ ಬಾಲಕಿಯರ ಪ್ರಥಮ ಸ್ಥಾನವನ್ನು ಪಡೆದರು ವಿಜಯಪುರ ಗ್ರಾಮೀಣದಿಂದ ೧೭ವರ್ಷದ ಬಾಲಕರ ಪ್ರಥಮ ಸ್ಥಾನ ಹಾಗೂ ೧೭ ವರ್ಷದ ಬಾಲಕಿಯರ ಪ್ರಥಮ ಸ್ಥಾನವನ್ನು ಪಡೆದು ವಿಜಯಶಾಲಿಗಳಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾದರು ವಿದ್ಯಾರ್ಥಿಗಳಿಗೆ ಕ್ಷೇತ್ರಶಿಕ್ಷಣಾದಿಕಾರಿ ಎಮ್, ಬಿ, ಯಡ್ರಾಮಿ ಹಾಗೂ ಸಂಸ್ಥೆಯ ಅದ್ಯಕ್ಷರು, ಆಢಳಿತಾಧಿಕಾರಿಗಳು ಗಣ್ಯರು ಬಹುಮಾನವನ್ನು ವಿತರಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪ.ಪೂ ಶ್ರೀ ಶಿವಬಸವ ಶಿವಾಚಾರ್ಯರು ಕೆರೂಟಗಿ ಸಾನ್ನಿಧ್ಯ ವಹಿಸಿದ್ದರು, ಕಾಂಗ್ರೆಸ್ ಧುರೀಣ ಮಹಿಬೂಬಸಾಬ ಕಣ್ಣಿ, ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಆಢಳಿತಾಧಿಕಾರಿ ಎಸ್,ಎಚ್,ಧೂಳಬಾ, ಗ್ರಾ. ಪಂ ಅಧ್ಯಕ್ಷರ ಪ್ರತಿನಿಧಿ ರವಿಕಾಂತ ನಡುವಿನಕೇರಿ, ದೈಹಿಕ ಶಿಕ್ಷಣ ಅಧಿಕಾರಿ ರಮೇಶ ಬಿರಾದಾರ, ಪ್ರಾಚಾರ್ಯ ಡಾ, ಎ.ಬಿ.ಸಿಂದಗಿ, ಎಸ್,ಬಿ, ಬಿರಾದಾರ, ಮುಖ್ಯೋಪಾಧ್ಯಾಯರುಗಳಾದ ಆರ್, ಆಯ್, ಚೌಧರಿ, ಎಸ್, ಎಮ್, ಲಂಗೋಟಿ, ಹಾಗೂ ಬಿ, ಎಸ್, ತಮ್ಮಗೋಳ, ಬಿ, ಎಸ್, ಚನ್ನೂರ, ಆರ್, ಆಯ್, ಚೌದರಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂಗಣ್ಣ ಹಚ್ಚಡದ, ತಾಲೂಕ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಮ್,ಕೆ,ಬಿರಾದಾರ, ಪ್ರೌಢ ಶಾಲೆಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಮ್, ಎಮ್, ಕೆಂಬಾವಿ, ಸೇರಿದಂತೆ ಇತರರು ವೇದಿಕೆ ಮೇಲಿದ್ದರು.
.

