ಫೆ. 1 ರಂದು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ

Must Read

ಭಾರತೀಯ ಸನಾತನ ಸಂಸ್ಕೃತಿಯ ಜೀವಸ್ವರವಾಗಿರುವ ಸಾಹಿತ್ಯ ಮತ್ತು ಸಂಗೀತ ಪೋಷಣೆಯಲ್ಲಿ ಮತ್ತು ಸಾಮಾಜಿಕ ಸೇವಾ ಕೈಂಕರ್ಯದಲ್ಲಿ ತೊಡಗಿರುವ ಶ್ರೀನಿವಾಸ ಉತ್ಸವ ಬಳಗಕ್ಕೆ ಈಗ ದಶಮಾನೋತ್ಸವದ ಸಂಭ್ರಮ.

ಕರ್ನಾಟಕ ಸಂಗೀತ ಪಿತಾಮಹ ದಾಸಶ್ರೇಷ್ಠ ಪುರಂದರ ದಾಸರ ಸ್ಮರಣೆ ನಿತ್ಯ ನಿರಂತರವಾಗುವಂತೆ ಬೆಂಗಳೂರು ಉತ್ತರಾಧಿಮಠದ ದಿಗ್ವಿಜಯ ಲಕ್ಷ್ಮೀನರಸಿಂಹ ದೇವರ ಸನ್ನಿಧಿಯ ಆವರಣದಲ್ಲಿ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಪೂಜ್ಯ ಶ್ರೀಸತ್ಯಾತ್ಮತೀರ್ಥರಿಂದ ಸ್ಥಾಪಿತ ಪುರಂದರದಾಸರ ಏಕಶಿಲಾ ವಿಗ್ರಹ ಅನಾವರಣಗೊಂಡಿದ್ದು ಸಜ್ಜನರ ಪಾವನತಾಣವಾಗಿದೆ.

ಶ್ರೀ ಶ್ರೀನಿವಾಸ ಉತ್ಸವ ಬಳಗ, ದಾಸ ಸಾಹಿತ್ಯ ಪ್ರಚಾರ ಮಾಧ್ಯಮ ಬೆಂಗಳೂರು ಹಾಗೂ ಶ್ರೀ ಉತ್ತರಾದಿ ಮಠದ ಸಂಯುಕ್ತ ಆಶ್ರಯದಲ್ಲಿ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ಫೆ.1ರಂದು ಸಂಜೆ ಬಸವನಗುಡಿಯ ಉತ್ತರಾದಿಮಠದ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಮಧ್ಯಾಹ್ನ 3 ಗಂಟೆಯಿ0ದ ಯಲಹಂಕ ವಿಶ್ವ ಮಧ್ವ ಮಹಾಪರಿಷತ್ ನವರಿಂದ ಭಜನೆ, 3.30 ರಿಂದ ರೇಖಾ ಪದಕಿ ತಂಡದವರಿ0ದ ಭಜನೆ, ೪ರಿಂದ ಜಯನಗರದ ಹಿರಣ್ಮಯಿ ಸಂಗೀತ ಶಾಲೆ, 4.30ರಿಂದ ಸಂತವಾಣಿ ಸುಧಾಕರ್ ತಂಡವರಿ0ದ ಸಮೂಹ ಗಾಯನ, 5 ರಿಂದ ಶ್ರೀ ಪುರಂದರ ಇಂಟರ್‌ನ್ಯಾಷನಲ್ ಟ್ರಸ್ಟ್ ನ ಡಾ. ಸುವರ್ಣ ಮೋಹನ್ ತಂಡದವರಿ0ದ ಸಮೂಹ ಗಾಯನ, ಸಂಜೆ 5.30ರಿಂದ ಉಡುಪಿ ಪುತ್ತಿಗೆ ಮಠ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ.ಗೋಪಾಲಾಚಾರ್ಯ ಅವರಿಂದ ಉಪನ್ಯಾಸ.

ಸಂಜೆ 6 ರಿಂದ ಸಭಾ ಕಾರ್ಯಕ್ರಮ. ಶ್ರೀ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಡಾ. ಸತ್ಯಧ್ಯಾನಾಚಾರ್ಯ ಕಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಉತ್ತರಾದಿಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಡಿತ ಶ್ರೀ ವಿದ್ಯಾದೀಶಚಾರ್ಯ ಗುತ್ತಲ್, ಡಾ.ಎ.ಎಸ್.ಸಮೀರ ಸಿಂಹ, ಡಾ.ಎಂ.ಆರ್.ವಿ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಎಸ್.ಎನ್. ಶಂಕರ್, ಡಾ.ಮುರಳಿ, ಎಸ್.ವೆಂಕಟೇಶ ಮೂರ್ತಿ, ನ.ಸುಧೀಂದ್ರ ರಾವ್ ಭಾಗವಹಿಸಲಿದ್ದಾರೆ.ನಂತರ ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಗೀತಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಅಯೋಜಕರಾದ ಡಾ.ಟಿ ವಾದಿರಾಜ್ ತಿಳಿಸಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group