ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಸಂಜೆ ಶ್ರೀ ಮಠದ ಪೀಠಾಧಿಕಾರಿ ನಿಜಗುಣ ದೇವರ ಸಾನ್ನಿಧ್ಯದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಭವ್ಯ ರಥೋತ್ಸವ ಅಪಾರ ಸಂಖ್ಯೆಯಲ್ಲಿನ ಭಕ್ತಾಧಿಗಳ ಜಯ ಘೋಷಣೆಯೊಂದಿಗೆ ಜರುಗಿತು.
ತಳಿರು ತೋರಣಗಳಿಂದ ಶೃಂಗರಿಸಿ ರಥೋತ್ಸವಕ್ಕೆ ಶ್ರೀ ಮಠದ ಆವರಣದಲ್ಲಿ ಶ್ರೀ ನಿಜಗುಣ ದೇವರ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವದಲ್ಲಿ ಪಾಲ್ಗೊಂಡ ಅಪಾರ ಜನಸ್ತೋಮ ರಥಕ್ಕೆ ಬೆಂಡು ಬತಾಸು ಅರ್ಪಿಸಿ ಪುನೀತರಾದರು.
ಈ ಸಂದರ್ಭದಲ್ಲಿ ವಿಶ್ವನಾಥ ಇರಕಲ್, ಚಿದಾನಂದ ಸ್ವಾಮೀಜಿ, ಸಿದ್ದಾನಂದ ಸ್ವಾಮೀಜಿ, ತೊಂಡಿಕಟ್ಟಿಯ ವೆಂಕಟೇಶ್ವರ ಮಹಾರಾಜರು, ಬೀದರನ ಗಣೇಶಾನಂದ ಮಹಾರಾಜರು, ಗುರುನಾಥ ಶಾಸ್ತ್ರೀ, ಮಲ್ಲಿಕಾರ್ಜುನ ಶಾಸ್ತ್ರೀ, ಶರೀಫ ಶಿವಯೋಗಿಗಳು ಸೇರಿದಂತೆ ಹುಣಶ್ಯಾಳ ಪಿಜಿ ಗ್ರಾಮದ ಭಕ್ತರು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.