ಹನುಮಗಿರಿಯಲ್ಲಿ ಶ್ರೀರಾಮ ನವಮಿ ಸಂಪನ್ನ

0
629

ಬೆಂಗಳೂರು: ಬನಶಂಕರಿಯ 3 ನೇ ಹಂತದ ಇಟ್ಟಮಡು ಹಾಗು ಉತ್ತರಹಳ್ಳಿಯ ಅರೆಹಳ್ಳಿ ಗ್ರಾಮದ ಎ. ಜಿ. ಎಸ್ ಬಡಾವಣೆಯ ಸಮೀಪದಲ್ಲಿರುವ ಹನುಮಗಿರಿ ಬೆಟ್ಟದಲ್ಲಿ ಶ್ರೀ ರಾಮನ ದೂತ ಹನುಮನ ಸನ್ನಿಧಿಯಲ್ಲಿ ಶ್ರೀ ರಾಮ ನವಮಿ ಮಹೋತ್ಸವ ಮತ್ತು ಶೋಭಾಯಾತ್ರೆ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮ ನಿರೂಪಿಸಿ ಹಾಗು ಶೋಭಾ ಯಾತ್ರೆಗೆ ಬಂದಿದ್ದ ಭಕ್ತರನ್ನು ಸ್ವಾಗತಿಸಿ ಶ್ರೀ ಹನುಮಗಿರಿ ಸಂಘದ ಮಾಧವ ಜಿ.ಹೆಬ್ಬಾರ್ ಮಾತನಾಡುತ್ತಾ, ನಾವುಗಳು ಇಂದು ಶ್ರೀ ರಾಮ ನವಮಿ ಮಹೋತ್ಸವ ಹಾಗು ಶೋಭಾ ಯಾತ್ರೆಯನ್ನು ನಡೆಸುತ್ತಿದ್ದು ಭಗವಂತನ ಆರಾಧನೆ ಯಲ್ಲಿ ಭಾಗವಹಿಸಿ ಪುನಿತರಾಗಿದ್ದೇವೆ ಎಂದು ನುಡಿದರು.

ಓಂಕಾರ ಆಶ್ರಮದ ಶ್ರೀ ಶ್ರೀ ಮಧುಸೂದನಾನಂದಪುರಿ ಸ್ವಾಮೀಜಿ ಆಗಮಿಸಿ ಶೋಭಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಹನುಮಗಿರಿಯ ಬೆಟ್ಟಕ್ಕೆ ನಾನು ಹಲವಾರು ವರ್ಷಗಳಿಂದ ಹಲವಾರು ಬಾರಿ ಭೇಟಿ ನೀಡಿ ಹನುಮಗಿರಿಯ ಬೆಟ್ಟದ ತುತ್ತ ತುದಿಯಲ್ಲಿ ಧ್ಯಾನ ಮಾಡಿದಾಗ ಮನಸ್ಸಿಗೆ ಸಂತೋಷ ಮತ್ತು ಆಹ್ಲಾದ ಸಿಗುತ್ತದೆ ಎಂದು ನುಡಿದರು.

“ಮಾಂಡವ್ಯರ ತಪೋಭೂಮಿ” ಹನುಮ ಗಿರಿ ಕ್ಷೇತ್ರ – ಪ.ರ . ಕೃಷ್ಣಮೂರ್ತಿ ಹನುಮಗಿರಿ ಕ್ಷೇತ್ರವು ಪೌರಾಣಿಕ ಹಿನ್ನೆಲೆ ಇರುವ ಪ್ರಸಿದ್ಧ ಕ್ಷೇತ್ರ ಹಾಗು ಮಾಂಡವ್ಯರ ತಪೋಭೂಮಿ ಎಂದು RSS ನ ಹಿರಿಯ‌ ಪ್ರಚಾರಕರಾದ ಪ. ರ . ಕೃಷ್ಣಮೂರ್ತಿ ಅವರು ನುಡಿದರು.

ಶ್ರೀ ರಾಮ ನವಮಿ ಮಹೋತ್ಸವ ಹಾಗು ಶೋಭಾಯಾತ್ರೆ ಯಲ್ಲಿ ಭಾಗವಹಿಸಿ ಹನುಮಗಿರಿಯ ಬೆಟ್ಟದಲ್ಲಿರುವ ಶ್ರೀ ಹನುಮನ ಸನ್ನಿಧಾನದ ಮುಂಭಾಗದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ಶ್ರೀ ರಾಮ ಮತ್ತು ಹನುಮನ ಕುರಿತು ಹಲವು ವಿಚಾರಗಳನ್ನು ನೆರೆದಿದ್ದ ಭಕ್ತರಿಗೆ ತಿಳಿಸಿದರು.

ಭಜನೆ:

ವಾಗ್ದೇವಿ ಹಾಗೂ ಶ್ರೀ ಚಿತ್ತ ಭಜನಾ ಮಂಡಳಿ ಅವರಿಂದ ಹನುಮ ಗಿರಿ ಬೆಟ್ಟ ದಲ್ಲಿ ಶ್ರೀ ರಾಮ ನವಮಿ ಹಾಗೂ ಶೋಭಾ ಯಾತ್ರೆಯ ಸಲುವಾಗಿ ಶ್ರೀರಾಮನ ಕುರಿತು ವಿಶೇಷ ಭಜನೆ ಜರುಗಿತು. ಅವರು ಶ್ರೀ ರಾಮ ನಾಮ ಹಾಗು ಹನುಮನ ಕೀರ್ತನೆ ಗಳನ್ನು ಹಾಡಿದರು.ಹನುಮ ಗಿರಿಯ ಬೆಟ್ಟದಲ್ಲಿ ನಡೆದ ಭಜನಾ ಮಂಡಳಿಯ ಭಜನೆ ನೆರೆದಿದ್ದ ಭಕ್ತರನ್ನು ಮಂತ್ರ ಮುಗ್ಧರನ್ನಾಗಿಸಿತ್ತು:

ಶ್ರೀ ಹನುಮಗಿರಿ ಬೆಟ್ಟದಲ್ಲಿ:

ಶ್ರೀ ಹನುಮಗಿರಿ ಸೇವಾ ಸಮಿತಿಯ ವತಿಯಿಂದ ಭಾನುವಾರ ಬೆಳಗ್ಗೆ 11-00 ರಿಂದ 2-00 ಘಂಟೆ ಯವರೆಗೆ ಶ್ರೀ ರಾಮ ನವಮಿ ಬಹಳ ಸಾಂಗವಾಗಿ ನೆರವೇರಿತು.

ಶ್ರೀ ರಾಮ ನವಮಿ ಮಹೋತ್ಸವ ಮತ್ತು ಶೋಭಾ ಯಾತ್ರೆ ಯನ್ನು ಏಪ್ರಿಲ್ 10 ರ ಭಾನುವಾರ ಬೆಳಿಗ್ಗೆ 11-00 ಕ್ಕೆ ಇಟ್ಟಮಡುವಿನ ಶ್ರೀ ಭವಾನಿ ಶಂಕರ ಸ್ವಾಮಿ ದೇವಸ್ಥಾನ ದಿಂದ ಆರಂಭಗೊಂಡು , ಇಟ್ಟ ಮಡು ವಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಗಳ ಮಠ ದ ಮುಂಭಾಗದಲ್ಲಿ ಸಾಗಿ ಎಡಕ್ಕೆ ತಿರುಗಿ ವಿ.ಬಿ.ಬೇಕರಿ , ಬಸ್ ನಿಲ್ದಾಣದ ಮೂಲಕ ಸಾಗಿ ಏ .ಜಿ.ಎಸ್ ಬಡಾವಣೆ ಮೂಲಕ ಶ್ರೀ ಕಬ್ಬಾಳಮ್ಮ ದೇವಾಲಯದ ಮಾರ್ಗದ ಮೂಲಕ ಶ್ರೀ ಹನುಮಗಿರ ಬೆಟ್ಟ ವನ್ನು ತಾಳ – ಮೇಳ – ವಾದ್ಯ ಹಾಗೂ ಡೊಳ್ಳು ಕುಣಿತ ಮತ್ತು ಪೂಜಾ ಕುಣಿತ ದೊಂದಿಗೆ, ಕೇಸರಿ ಬಾವುಟವನ್ನು ಹಿಡಿದು ಸಾಗುತ್ತಿದ್ದ ಭಕ್ತರು , ಪಲ್ಲಕ್ಕಿಯಲ್ಲಿ ಶ್ರೀ ರಾಮ ದೇವರನ್ನು ಕುಳ್ಳಿರಿಸಿ ಯಾತ್ರೆ ಸಾಗುತ್ತಾ ಇದ್ದರೆ ದಾರಿ ಉದ್ದಕ್ಕೂ ಭಕ್ತರು ಭಗವಂತನ ದರ್ಶನ ಪಡೆದು ಪುನೀತರಾದರು.

ಎಲ್ಲಿ ರಾಮನೋ ಅಲ್ಲಿ ಹನುಮನು ! ಎಲ್ಲಿ ಹನುಮನೋ ಅಲ್ಲಿ ರಾಮನು !

ಬಾಲಕರಿಬ್ಬರ ರಾಮ ಹಾಗೂ ಹನುಮಾನ ವೇಷ ಭೂಷಣ ಧರಿಸಿ ಸಾಗುತ್ತಿದ್ದ ಶೋಭಾ ಯಾತ್ರೆಯು ರಾಮನವಮಿಯ ಮೆರುಗನ್ನು ಹೆಚ್ಚಿಸಿತ್ತು.ಮನೋಹರವಾದ ಪ್ರದೇಶ ಹಾಗೂ ಧಾರ್ಮಿಕ ಕ್ಷೇತ್ರ ಶ್ರೀ ಹನುಮ ಗಿರಿ ಕ್ಷೇತ್ರ ಶೋಭಾ ಯಾತ್ರೆ ಶ್ರೀ ಕ್ಷೇತ್ರ ತಲುಪಲಿದ ನಂತರ ಮಾಧ್ಯಹ್ನ 1-00 ಘಂಟೆಗೆ ಮಹಾ ಮಂಗಳಾರತಿ ನಂತರ ತೀರ್ಥ – ಪ್ರಸಾದ ವಿನಿಯೋಗಿಸಲಾಯಿತ್ತು

ಪಾನಕ – ಕೋಸಂಬರಿ” – ಪುಳಿಯೋಗರೆ, ಮೊಸರನ್ನ:

ಭಕ್ತರಿಗೆ ಪಾನಕ -ಕೋಸಂಬರಿ – ಪುಳಿಯೋಗರೆ , ಮೊಸರನ್ನ ವನ್ನು ಪ್ರಸಾದವಾಗಿ ನೀಡಿ ಶೋಭಾ ಯಾತ್ರೆ ಯನ್ನು ಸಂಪನ್ನ ಗೊಳಿಸಲಾಯಿತು.

ಹನುಮಗಿರಿ ಕ್ಷೇತ್ರದ ಬಗ್ಗೆ:

ಮಾಂಡವ್ಯರ ತಪೋಭೂಮಿಯಲ್ಲಿ ನೆಲೆಸಿದ ಹನುಮನ ಕ್ಷೇತ್ರ ’ಹನುಮಗಿರಿ’ – ತ್ರೇತಾಯುಗದಲ್ಲಿ ಹನುಮಂತ ಲಕ್ಷ್ಮಣನಿಗಾಗಿ ಸಂಜೀವಿನಿ ಹೊತ್ತೊಯ್ಯುತ್ತಿದ್ದಾಗ ಪರ್ವತದ ಒಂದು ತುಣುಕು ಬಿದ್ದ ಸ್ಥಳ, ಮಾಂಡವ್ಯ ಮಹರ್ಷಿಗಳ ತಪೋಭೂಮಿ ಎಂಬೆಲ್ಲ ಐತಿಹ್ಯವಿರುವ ಉತ್ತರಹಳ್ಳಿಯ ಅರೆಹಳ್ಳಿ ಗ್ರಾಮದ ಎಜಿಎಸ್ ಬಡಾವಣೆಯ ಸಮೀಪ ದಲ್ಲಿದೆ.

ಹನುಮಗಿರಿ ಕ್ಷೇತ್ರವು ಐತಿಹಾಸಿಕ ಮಹತ್ವ ಹೊಂದಿದ್ದು ಇದು ರಾಮಾಯಣದ ಹಿನ್ನೆಲೆ ಉಳ್ಳ ಕ್ಷೇತ್ರವೆಂದು ಪ್ರಸಿದ್ದಿಯಾಗಿದೆ ಹಾಗು ಅರ್ಕೆಶ್ವರ, ವೀರ ಹನುಮಾನ್ ಪೂಜೆ ಪ್ರತಿ ಶನಿ ವಾರ ಬೆಳಗ್ಗೆ 7- 30 ರಿಂದ 8 – 30 ರವರ ಗೆ ನಡೆಯುತ್ತದೆ. ಶ್ರೀ ಹನುಮ ಗಿರಿಯ ಶಿಖರ ದ ತುತ್ತ ತುದಿಯಲ್ಲಿ ನಿಂತರೆ ನಮಗೆ ಭವ್ಯ ವಾದ ಬೆಂಗಳೂರು ನಗರದ ದರ್ಶನ ಲಭ್ಯವಾಗುತ್ತದೆ.

ಅನೇಕ ವರ್ಷಗಳಿಂದಲೂ ಹನುಮಗಿರಿ ಬೆಟ್ಟದಲ್ಲಿ ಸತತವಾಗಿ ನಡೆಯುತ್ತಿರುವ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಗಳು ಹಾಗು ಶ್ರೀ ಹನುಮ ಜಯಂತಿ ಮಹೋತ್ಸವ, ಶ್ರೀ ರಾಮನವಮಿ ಕಾರ್ಯಕ್ರಮಗಳು ಹಾಗೂ ಮಹಾಶಿವರಾತ್ರಿ ಪೂಜಾ ಮಹೋತ್ಸವದ ಜೊತೆ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಜರುಗುವ ಗಾಳಿಪಟ ಹಬ್ಬವನ್ನೂ ಇಲ್ಲಿ ಸ್ಮರಿಸಬಹುದಾಗಿದೆ.


ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

ಛಾಯಾ ಚಿತ್ರ ಕೃಪೆ: ಕೃಷ್ಣ ಮೂರ್ತಿ ಜೋಯಿಸ್ ,ಬೆಂಗಳೂರು.