ಅಲ್ಫೆನ್ ಜೂನಿಯರ್ ಶಾಲೆಗೆ ಸ್ಟಾರ್ ಎಜುಕೇಷನ್ ಪ್ರಶಸ್ತಿ

Must Read

ಡಿಸೆಂಬರ್ ೧೩ ರಂದು ಮುಂಬೈನ ನೆಸ್ಕೋ ಮೈದಾನದಲ್ಲಿ ನಡೆದ ಟೈಮ್ಸ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಭಾರತದ ಅತಿದೊಡ್ಡ ಶಿಕ್ಷಣ ಸಮ್ಮೇಳನವಾದ ಎಜುಕೇಷನ್ ಸಪ್ಲೈ ಮತ್ತು ಪ್ರಾಂಚೈಸ್ ಎಕ್ಸ್ ಪೋ-೨೦೨೫ ರ ಸಮ್ಮೇಳನದಲ್ಲಿ ಮೈಸೂರಿನ ಸರಸ್ವತಿಪುರಂನಲ್ಲಿರುವ ಅಲ್ಫೆನ್ ಜೂನಿಯರ್ ಶಾಲೆಯ ಸಂಸ್ಥಾಪಕರಾದ ಡಾ.ರಜಿನಿರಾವ್ ಅವರಿಗೆ ಈ ಬಾರಿಯ ಸ್ಟಾರ್ ಎಜುಕೇಷನ್-೨೦೨೫ ಪ್ರಶಸ್ತಿಯು ಲಭಿಸಿದೆ.

ದೇಶದ ವಿವಿಧ ಭಾಗಗಳಿಂದ ೬ ಸಾವಿರಕ್ಕೂ ಹೆಚ್ಚು ನಾಮನಿರ್ದೇಶನಗಳು ಭಾಗವಹಿಸಿದ್ದು, ಮೆರಿಟ್ ಆಧಾರಿತ ಸ್ವತಂತ್ರ ನ್ಯಾಯಧೀಶರ ಸಮಿತಿಯಿಂದ ಸೂಕ್ಷ್ಮ ಮೌಲ್ಯಮಾಪನದ ಮೂಲಕ ಈ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗಿದೆ.

ಮೈಸೂರಿನ ಅಲ್ಪೆನ್ ಅಕಾಡೆಮಿ ಜೂನಿಯರ್ ಶಾಲೆಯು ೨೦೧೩ ರಿಂದ ಪ್ರಾರಂಭಗೊಂಡಿದ್ದು, ನವೀನ ಪಠ್ಯಕ್ರಮ, ಸಂಪೂರ್ಣ ಮಕ್ಕಳ ಅಭಿವೃದ್ಧಿ ಹಾಗೂ ದೈಹಿಕ, ಮಾನಸಿಕ ಭಾವನಾತ್ಮಕ ಆರೋಗ್ಯದ ಮೇಲಿನ ಶಿಕ್ಷಣಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ಪ್ರಾಥಮಿಕ ಶಿಕ್ಷಣಕ್ಕೆ ಸಿದ್ಧತೆ ಹಾಗೂ ಪೋಷಕರ ತೃಪ್ತಿಗೆ ಅಲ್ಫೇನ್ ಜೂನಿಯರ್ ಶಾಲೆಯು ಆದ್ಯತೆಯನ್ನು ನೀಡುತ್ತಾ ಬಂದಿರುತ್ತದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group