- Advertisement -
ಮೂಡಲಗಿ: 2022-23 ನೇ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ನಿಗೆ ಹೆಚ್ಚುವರಿಯಾಗಿ 50 ರೂ. ಕಾರ್ಖಾನೆಯವರು ಕೊಡಲು ಆದೇಶಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸ್ವಾಗತಿಸಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಎಥನಾಲ್ ಉತ್ಪಾದನೆ ಸೇರಿದಂತೆ ಇತರೆ ಉಪ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯದಲ್ಲಿ ರೈತರಿಗೆ ನೀಡುವಂತೆ ಕಾರ್ಖಾನೆಗಳಿಗೆ ತಿಳಿಸಿರುವ ರಾಜ್ಯ ಸರ್ಕಾರದ ಕ್ರಮ ಶ್ಲಾಘನೀಯ ಎಂದರು.
ಮರುಪರಿಶೀಲನೆ:
ಕಬ್ಬು ಖರೀದಿಗೆ ಕಾರ್ಖಾನೆಯವರಿಗೆ ನಿಗದಿತ ಕ್ಷೇತ್ರವನ್ನು ಗುರುತು ಮಾಡಿರುವ ತಮ್ಮ ವ್ಯಾಪ್ತಿಯ ಹೊರಗೆ ಕಬ್ಬು ಖರೀದಿ ಮಾಡುವ ಕಟಾವು ಮತ್ತು ಸಾಗಣೆ ವೆಚ್ಚವೆಂದು ರೂ. 750 ಖರ್ಚು ತೋರಿಸುತ್ತಿರುವುದು ಮರುಪರಿಶೀಲನೆ ಮಾಡಬೇಕೆಂದು ಸಂಸದ ಈರಣ್ಣ ಕಡಾಡಿ ಅವರು ಆಗ್ರಹಿಸಿದರು.